SHIVAMOGGA LIVE | 9 JULY 2023
SAGARA : ಕೆಲವು ದಿನದಿಂದ ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ ಹುಚ್ಚು ಹಸುವೊಂದನ್ನು (Cow) ಮೂವರು ಯುವಕರು ಸಾರ್ವಜನಿಕರ ಸಹಕಾರದೊಂದಿಗೆ ಹರಸಾಹಸ ಪಟ್ಟು ಹಿಡಿದಿದ್ದಾರೆ.
ನಾಲ್ಕೈದು ದಿನದಿಂದ ಸಾಗರ ಪಟ್ಟಣದ ವಿವಿಧೆಡೆ ಹುಚ್ಚು ಹಿಡಿದ ಹಸುವೊಂದು ಉಪಟಳ ನೀಡುತ್ತಿತ್ತು. ಜನರು, ಇತರೆ ಪ್ರಾಣಿಗಳ ಮೇಲೆ ದಾಳಿ ಮಾಡುತ್ತಿತ್ತು. ಶುಕ್ರವಾರ ಬೆಳಗ್ಗೆ ಮಂಕಳಲೆ ಭಾಗದಲ್ಲಿ ಹಸು ತೊಂದರೆ ಕೊಟ್ಟಿತ್ತು. ಮಧ್ಯಾಹ್ನದ ವೇಳೆಗೆ ವಿನೋಬಗರದಲ್ಲಿ ಪುಂಡಾಟ ಮಾಡಿತ್ತು.
![]() |
ಗಾಂಧಿ ನಗರದ ಆನಂದ್, ಮಾರುತಿ ಮತ್ತು ಪವನ್ ಎಂಬುವವರು ಬಲೆ ಬೀಸಿ, ಚಾಣಾಕ್ಷತನದಿಂದ ಹುಚ್ಚು ಹಸುವನ್ನು ಸೆರೆ ಹಿಡಿದಿದ್ದಾರೆ. ಸುರಿಯುವ ಮಳೆಯಲ್ಲೇ ಕಾರ್ಯಾಚರಣೆ ನಡೆಸಿದ ಹಸುವನ್ನು (Cow) ಬಲೆಗೆ ಕೆಡವಿದ್ದಾರೆ. ಯುವಕರ ಕಾರ್ಯಾಚರಣೆಗೆ ಸ್ಥಳೀಯರು ಕೂಡ ನೆರವಾಗಿದ್ದರು. ಹಸು ಸೆರೆಯಾಗಿರುವುದರಿಂದ ಸಾರ್ವಜನಿಕರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ಇದನ್ನೂ ಓದಿ – ಮೊಬೈಲ್ ಅಂಗಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಮೃತದೇಹ, ಸಮಗ್ರ ತನಿಖೆಗೆ ಒತ್ತಾಯ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200