ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SAGARA, 14 NOVEMBER 2024 : ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ಕಣ್ಮರೆಯಾಗಿದ್ದ ಮೂವರು ಯುವಕರ (Youths) ಮೃತದೇಹಗಳು ಪತ್ತೆಯಾಗಿವೆ. ಮುಳುಗು ತಜ್ಞ ಈಶ್ವರ್ ಮಲ್ಪೆ ಶೋಧ ಕಾರ್ಯ ನಡೆಸಿದಾಗ ಮೃತದೇಹಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.
ಹೊಳೆ ಊಟಕ್ಕೆ ಹೋದವರು ಸಾವು
ಶರಾವತಿ ಹಿನ್ನೀರಿನ ನಡುಗಡ್ಡೆಯಲ್ಲಿ ಹೊಳೆ ಊಟ ಮುಗಿಸಿ ಮರಳುವಾಗ ತೆಪ್ಪ ಮಗುಚಿ ಮೂವರು ಯುವಕರು ಕಣ್ಮರೆಯಾಗಿದ್ದರು. ಇನ್ನಿಬ್ಬರು ಈಜಿ ದಡ ಸೇರಿದ್ದರು. ಕಣ್ಮರೆಯಾಗಿದ್ದ ಚೇತನ್ (28), ಸಂದೀಪ್ (30) ಮತ್ತು ರಾಜೀವ್ (34) ಇವತ್ತು ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.
ಮುಳುಗು ತಜ್ಞನಿಂದ ಮೃತದೇಹ ಶೋಧ
ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದ ತಂಡ ಇವತ್ತು ಬೆಳಗ್ಗೆ ಶರಾವತಿ ಹಿನ್ನೀರಿನಲ್ಲಿ ಶೋಧ ಕಾರ್ಯ ನಡೆಸಿತು. ಹೊಳೆ ಆಳಕ್ಕೆ ತಲುಪಿದ್ದ ಯುವಕರ ಮೃತದೇಹಗಳನ್ನು ಈಶ್ವರ್ ಮಲ್ಪೆ ದಡಕ್ಕೆ ತಂದಿದ್ದಾರೆ. ಯುವಕರ ಮೃತದೇಹ ಕಂಡು ಸುತ್ತಮುತ್ತಲ ಗ್ರಾಮದ ಜನರು ಮರುಗಿದರು.
ಕಳೆದ ರಾತ್ರಿವರೆಗೆ ನಡೆದಿದ್ದ ಕಾರ್ಯಾಚರಣೆ
ಘಟನೆ ಮಾಹಿತಿ ಲಭ್ಯವಾಗುತ್ತಿದ್ದಂತೆ ಬುಧವಾರ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಶೋಧ ಕಾರ್ಯಾಚರಣೆ ನಡೆಸಿದ್ದರು. ಕತ್ತಲಾಗಿದ್ದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಹಾಗಾಗಿ ರಾತ್ರಿ ಶೋಧ ಕಾರ್ಯ ಸ್ಥಗಿತಗೊಳಿಸಲಾಗಿತ್ತು. ಇಂದು ಬೆಳಗ್ಗೆ ಮೃತದೇಹಗಳು ಪತ್ತೆಯಾಗಿವೆ. ಕಾರ್ಗಲ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಇದನ್ನೂ ಓದಿ » ಹೊಳೆ ಸ್ಟಾಪ್‌ನಲ್ಲಿ ಡಿವೈಡರ್‌ಗೆ ಬಸ್ ಡಿಕ್ಕಿ, ತಪ್ಪಿದ ಅನಾಹುತ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422