ಶಿಕಾರಿಪುರ: ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಬಸ್ ಡಿಕ್ಕಿ (Bus) ಹೊಡೆದು ಮೃತಪಟ್ಟಿದ್ದಾರೆ. ಶಿಕಾರಿಪುರ ಪಟ್ಟಣದ ಶಿವಮೊಗ್ಗ ರಸ್ತೆಯ ಚಾನಲ್ ಸಮೀಪ ಘಟನೆ ಸಂಭವಿಸಿದೆ.
ವಿನಾಯಕ ನಗರದ ಕಟ್ಟಡ ಕಾರ್ಮಿಕ ಶಿವಾಜಿರಾವ್ (49) ಮೃತರು. ಕೆಲಸ ಮುಗಿಸಿ ಮನೆಗೆ ತೆರಳುವಾಗ ಅಪಘಾತ ಸಂಭವಿಸಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಿವಾಜಿರಾವ್ ಅವರನ್ನು ವಿದ್ಯಾರ್ಥಿಗಳಾದ ನವೀನ್ ಮತು ಕೌಶಿಕ್ ತಮ್ಮ ಬೈಕಿನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅಷ್ಟೊತ್ತಿಗಾಗಲೇ ಶಿವಾಜಿರಾವ್ ಕೊನೆಯುಸಿರೆಳೆದಿದ್ದರು. ವಿದ್ಯಾರ್ಥಿಗಳ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು, ಅಪಘಾತ ಸಂಬಂಧ ಶಿಕಾರಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಲಿಂಗನಮಕ್ಕಿ ಜಲಾಶಯದ ಎಲ್ಲ ಗೇಟುಗಳು ಓಪನ್
Bus hits a person in Shimoga road at Shikaripura
ಇದನ್ನೂ ಓದಿ:➤ ತರಲಘಟ್ಟ ಬಳಿ ಅರಣ್ಯ ವಾಚರ್ ಮೇಲೆ ಕರಡಿ ದಾಳಿ