ಸರ್ಕಾರಿ ಆಸ್ಪತ್ರೆಗೆ ವಿಜಯೇಂದ್ರ ದಿಢೀರ್‌ ಭೇಟಿ, ವ್ಯವಸ್ಥೆ ಕುರಿತು ಮಾಹಿತಿ, ನೂತನ ಆಸ್ಪತ್ರೆ ಕಾಮಗಾರಿ ಪರಿಶೀಲನೆ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 10 JULY 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIKARIPURA : ಡೆಂಗ್ಯು ಉಲ್ಬಣವಾಗಿರುವ ಹಿನ್ನೆಲೆ ಶಾಸಕ ಬಿ.ವೈ. ವಿಜಯೇಂದ್ರ ಅವರು ಶಿರಾಳಕೊಪ್ಪದ ಪಟ್ಟಣ ಸಮುದಾಯ ಆರೊಗ್ಯ ಕೇಂದ್ರಕ್ಕೆ ದಿಢೀರ್‌ ಭೇಟಿ (Sudden Visit) ನೀಡಿ ಪರಿಶೀಲಿಸಿದರು. ವಿವಿಧ ವಿಭಾಗಗಳಿಗೆ ತೆರಳಿ ವೀಕ್ಷಿಸಿದರು. ರೋಗಿಗಳು, ಸಂಬಂಧಿಕರ ಜೊತೆಗೆ ಮಾತನಡಿ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.

ಉತ್ತಮ ಸೇವೆ ನೀಡಬೇಕು

ಆರೋಗ್ಯ ಕ್ಷೇತ್ರಕ್ಕೆ ಸರ್ಕಾರ ಹಲವು ಯೋಜನೆ ನೀಡುತ್ತಿದೆ. ವೈದ್ಯರು ರೋಗಿಗಳಿಗೆ ಉತ್ತಮ ಸೇವೆ ನೀಡಬೇಕು. ಆರೋಗ್ಯ ಸಿಬ್ಬಂದಿ ಜನರ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡಬೇಕು ಎಂದು ವಿಜಯೇಂದ್ರ ತಿಳಿಸಿದರು. ಆಸ್ಪತ್ರೆಯಲ್ಲಿ ದಾಖಲಾದ ಒಳರೋಗಿಗಳನ್ನು ಮಾತನಾಡಿಸಿ, ಆಸ್ಪತ್ರೆಯಲ್ಲಿ ದೊರೆಯುತ್ತಿರುವ ಸೇವೆ ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು.

BY-Vijayendra-visits-Shiralakoppa-hospital

50 ಹಾಸಿಗೆ ಆಸ್ಪತ್ರೆ ಕಾಮಗಾರಿ ಪರಿಶೀಲನೆ

ನಿರ್ಮಾಣ ಹಂತದಲ್ಲಿರುವ 50 ಹಾಸಿಗೆಯ ಆಸ್ಪತ್ರೆಗೆ ಭೇಟಿ ನೀಡಿ, ಕಾಮಗಾರಿ ಪರಿಶೀಲಿಸಿದರು. ಆಸ್ಪತ್ರೆಗೆ ಅಗತ್ಯವಿರುವ ಸೌಕರ್ಯಗಳ ಪಟ್ಟಿ ಹಾಗೂ ಅವಶ್ಯಕತೆ ಇರುವ ಸಿಬ್ಬಂದಿ ಪಟ್ಟಿಯನ್ನು ನೀಡಿದರೆ ಸರ್ಕಾರದಿಂದ ಮಂಜೂರು ಮಾಡಿಸುವುದಾಗಿ ವೈದ್ಯಾಧಿಕಾರಿಗಳಿಗೆ ತಿಳಿಸಿದರು.

ವೈದ್ಯಾಧಿಕಾರಿ ಡಾ. ಮಹಾಲಿಂಗ ಕೊಲ್ಲೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿರೇಂದ್ರ ಪಾಟೀಲ್, ಟೌನ್ ಅಧ್ಯಕ್ಷ ಚೆನ್ನವೀರ ಶೆಟ್ಟಿ ಇದ್ದರು.

ಇದನ್ನೂ ಓದಿ – ಡೆಂಗ್ಯು ಶಂಕೆ, ಜ್ವರದಿಂದ ಬಳಲುತ್ತಿದ್ದ ರಿಪ್ಪನ್‌ಪೇಟೆಯ ಮಹಿಳೆ, ಶಿರಾಳಕೊಪ್ಪದ 9 ತಿಂಗಳ ಮಗು ಸಾವು

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment