ಶಿವಮೊಗ್ಗ ಲೈವ್.ಕಾಂ | SHIKARIPURA NEWS | 16 ಜುಲೈ 2021
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶಿಕಾರಿಪುರದ ಬೇಗೂರು ಮರಡಿ ತಾಂಡಾದಲ್ಲಿ ಲಂಬಾಣಿ ಸಮುದಾಯದವರ ಜೊಎಗೆ ಸಂವಾದ ನಡೆಸಿದರು. ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಲವು ವಿಚಾರಗಳನ್ನು ಪ್ರಸ್ತಾಪಿಸಿದರು.
ಡಿಕೆಶಿ ಏನೇನು ಹೇಳಿದರು?
ಅರಣ್ಯ ಹಕ್ಕು ಕಾಯಿದೆಗೆ ತಿದ್ದುಪಡಿ ತರುವುದಕ್ಕೆ ಕಂದಾಯ ಭೂಮಿ ಅರಣ್ಯ ಇಲಾಖೆಗೆ ಇಂಡೀಕರಣ ಮಾಡಿರುವುದರ ವಿರುದ್ಧ ಕೇಂದ್ರ, ರಾಜ್ಯದಲ್ಲಿ ಹೋರಾಟ ಮಾಡಿ ರೈತರಿಗೆ ಅನುಕೂಲ ಕಲ್ಪಿಸುವುದಕ್ಕೆ ಕಾಂಗ್ರೆಸ್ ಕ್ರಮ ಕೈಗೊಳ್ಳುತ್ತದೆ.
ಸಹೋದರ ಮೂಲಕ ಸಂಸತ್ನಲ್ಲಿ ಧ್ವನಿ
ಅರಣ್ಯ ಹಕ್ಕು ಕಾಯಿದೆಯಲ್ಲಿ ಮೂರು ತಲೆಮಾರಿನ ದಾಖಲೆ ನೀಡಬೇಕು ಎನ್ನುವ ಕಾರಣಕ್ಕೆ ದೊಡ್ಡ ಪ್ರಮಾಣದ ಬಡವರಿಗೆ ಭೂಮಿ ಹಕ್ಕು ಸಿಗಲು ಸಾಧ್ಯವಾಗಿಲ್ಲ. ಅದು ಕಡಿಮೆ ಮಾಡುವುದಕ್ಕೆ ಸಹೋದರ ಸುರೇಶ್ ಮೂಲಕ ಸಂಸತ್ನಲ್ಲಿ ಧ್ವನಿಯೆತ್ತುವುದಲ್ಲದೆ ಪಕ್ಷದ ಮೂಲಕವೂ ಕೇಂದ್ರದ ಮೇಲೆ ಒತ್ತಡ ಹೇರಲಾಗುವುದು.
ರಾಜ್ಯದಲ್ಲೂ ಹೋರಾಟದ ಭರವಸೆ
ಕಂದಾಯ ಭೂಮಿ ಇಂಡೀಕರಣ ಮೂಲಕ ಅರಣ್ಯ ಇಲಾಖೆಗೆ ಹೋಗಿರುವುದು ಸರಿಯಲ್ಲ. ಈ ಎರಡು ಕಾರಣಕ್ಕೆ ವಸತಿ ಪ್ರದೇಶದಲ್ಲಿನ ಜನರಿಗೆ ಮನೆಗೆ ಹಕ್ಕುಪತ್ರ, ಉಳುಮೆ ಮಾಡಿರುವ ರೈತರಿಗೆ ಜಮೀನಿನ ಹಕ್ಕುಪತ್ರ ಸಿಗುತ್ತಿಲ್ಲ. ಬಹುತೇಕ ತಾಂಡ ವಸತಿಪ್ರದೇಶ ಅರಣ್ಯ ಭೂಮಿಯಲ್ಲಿದ್ದು ಅವುಗಳ ಸಕ್ರಮಗೊಳಿಸಿ ಕಂದಾಯ ಗ್ರಾಮ ಮಾಡುವುದಕ್ಕೆ ಕಾಯಿದೆಯಲ್ಲಿ ತಿದ್ದುಪಡಿ ತರುವುದಕ್ಕೆ ರಾಜ್ಯದಲ್ಲೂ ಹೋರಾಟ ಮಾಡ ಲಾಗುವುದು. ಈಗಿನ ಸಮಸ್ಯೆಗೆ ಯಾವುದೆ ಪಕ್ಷ ಕಾರಣವಾಗಿದೆ ಎಂದು ದೂರುವ ಬದಲಿಗೆ ಸಮಸ್ಯೆ ಪರಿಹಾರ ಆಗಬೇಕು ಅದಕ್ಕಾಗಿ ಕೆಲಸ ಮಾಡುತ್ತೇನೆ. ಸಮಸ್ಯೆ ಪರಿಹಾರಕ್ಕೆ ನಮ್ಮ ಪಕ್ಷದೊಳಗಿನ ಅನುಭವಿ ನಾಯಕರ ಜತೆ ಚರ್ಚಿಸುತ್ತೇನೆ ಎಂದರು.
ಲಂಬಾಣಿ ಜನರೊಂದಿಗೆ ಬೆಳೆದೆ
ಸಣ್ಣ ವಯಸ್ಸಿನಲ್ಲಿ ಲಂಬಾಣಿ ಜನರೊಂದಿಗೆ ಬೆಳೆದವನು ನಾನು. ಅವರ ಕಷ್ಟಕ್ಕೆ ಧ್ವನಿಯಾಗಬೇಕು ಅವರ ಸಮಸ್ಯೆ ಹತ್ತಿರದಿಂದ ಅರಿಯಬೇಕು ಎನ್ನುವ ಕಾರಣಕ್ಕೆ ಪ್ರವಾಸ ಮಾಡುತ್ತಿದ್ದೇನೆ. ಸಭೆಯಲ್ಲಿ ನಮ್ಮ ಪಕ್ಷದ ರಾಜಕೀಯ ಪಕ್ಷದ ಧ್ವಜ ಹಾಕಿಲ್ಲ. ಯಾವುದೆ ಮುಖಂಡರನ್ನ ಕೂರಿಸಿಲ್ಲ. ಸಮಸ್ಯೆ ವೇದಿಕೆಯಲ್ಲಿ ಹೇಳುವವರೂ ಯಾವುದೆ ವ್ಯಕ್ತಿ, ಸರಕಾರ ದೂಷಿಸುವುದಕ್ಕೆ ಅವಕಾಶ ನೀಡದೆ ಸಮಸ್ಯೆ ಹೇಳಿಕೊಳ್ಳಬಹುದು. ಅವರಿಗೆ ತಿಳಿದ ಪರಿಹಾರ ಸಲಹೆ ನೀಡಲು ಸೂಚಿಸಲಾಗಿದೆ.
ಲಂಬಾಣಿ ಸಮುದಾಯದ ಜನರ ಕಷ್ಟ, ನಷ್ಟದ ಕುರಿತು ಹಲವರು ಸಂವಾದದಲ್ಲಿ ತಿಳಿಸಿದರು. ಹೊಸೂರು ಚಂದ್ರು, ತರಲಘಟ್ಟ ಮಂಜುನಾಯ್ಕ, ಕುಮಾರನಾಯ್ಕ, ರಾಘು ಬೇಗೂರು, ಹೇಮಾನಾಯ್ಕ, ಉಮೇಶ್ ಮಾರವಳ್ಳಿ, ನಾಗಿಬಾಯಿ ಮತ್ತಿತರರು ಡಿ.ಕೆ. ಶಿವಕುಮಾರ್ ಅವರೊಂದಿಗೆ ಸಂವಾದದಲ್ಲಿ ಭಾವಹಿಸಿದರು.
ಗ್ರಾಮಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರಿಗೆ ಆರತಿ ಬೆಳಗಿ, ಲಂಬಾಣಿ ನೃತ್ಯದ ಮೂಲಕ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.
ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಕಾಂಗ್ರೆಸ್ ಮುಖಂಡರಾದ ರುದ್ರಪ್ಪ ಲಮಾಣಿ, ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ತೀ.ನಾ. ಶ್ರೀನಿವಾಸ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಪ್ರಕಾಶ್ ರಾಥೋಡ್, ಮಂಜುನಾಥ ಭಂಡಾರಿ, ಶಾಂತವೀರಪ್ಪಗೌಡ, ಗೋಣಿ ಮಾಲತೇಶ್, ನರಸಿಂಗನಾಯ್ಕ, ಉಳ್ಳಿ ದರ್ಶನ್, ಭಂಡಾರಿ ಮಾಲತೇಶ್, ನಾಗರಾಜಗೌಡ ಮತ್ತಿತರರು ಇದ್ದರು.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200