ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿಕಾರಿಪುರ: ವೈದ್ಯರೊಬ್ಬರು ಶವ ಪರೀಕ್ಷೆ ವರದಿ ನೀಡುವುದಕ್ಕಾಗಿ ಲಂಚ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವೈದ್ಯರನ್ನು (Doctor) ಬಂಧಿಸಿದ್ದಾರೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಬ್ಯಾಕ್ ಟು ಸ್ಕೂಲ್ ಆಫರ್, ಲಕ್ಕಿ ಡ್ರಾ, ಎಲ್ಲಿ? ಏನಿದು ಆಫರ್?
ಶಿಕಾರಿಪುರ ಪಟ್ಟಣದ ಸರ್ಕಾರಿ ಆಸ್ಪತ್ರೆ ವೈದ್ಯ ಗೋಪಾಲ್ ಜಿ.ಹರಿಗಿ ಬಂಧಿತ ವೈದ್ಯ. ಸತೀಶ್ ಮಂಚಿ ಎಂಬುವರ ಶವ ಪರೀಕ್ಷೆ ವರದಿ ನೀಡುವುದಕ್ಕೆ ತಾಲ್ಲೂಕಿನ ಕಪ್ಪನಹಳ್ಳಿ ಗ್ರಾಮದ ಎನ್.ವೈ.ಸುನೀಲ್ ಅರ್ಜಿ ಸಲ್ಲಿಸಿದ್ದರು. ವರದಿ ನೀಡುವುದಕ್ಕೆ ವೈದ್ಯರು 20 ರೂ. ಲಂಚದ ಬೇಡಿಕೆ ಇಟ್ಟಿದ್ದರು. ಹಣ ನೀಡುವಾಗ ವೈದ್ಯರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ ಶಿವಮೊಗ್ಗ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಲೋಕಾಯುಕ್ತ ಇನ್‌ಸ್ಪೆಕ್ಟರ್ ಗುರುರಾಜ್, ಯೋಗೀಶ್, ಮಂಜುನಾಥ್, ಸುರೇಂದ್ರ, ಚನ್ನೇಶ್, ದೇವರಾಜ್ ಇತರೆ ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ » ATMನಲ್ಲಿ ಡ್ರಾ ಆಗದಿದ್ದರು ಅಕೌಂಟ್‌ನಲ್ಲಿ ಹಣ ಕಟ್, CCTV ಚೆಕ್ ಮಾಡಿದ ಬ್ಯಾಂಕ್ ಸಿಬ್ಬಂದಿ ಆಘಾತ

LATEST NEWS
- ಭದ್ರಾವತಿಯ ತರೀಕೆರೆ ರಸ್ತೆಯಲ್ಲಿ ಅಗ್ನಿ ಅವಘಡ, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಆಹುತಿ

- ಕಲ್ಲು ಬಂಡೆ ಬಿದ್ದು ಕೃಷಿಕ ಸ್ಥಳದಲ್ಲೇ ಸಾವು

- ಹೆಗಲತ್ತಿಯಲ್ಲಿ ನಾಗಯಕ್ಷೆ ದೇವಾಲಯದ 12ನೇ ವಾರ್ಷಿಕೋತ್ಸವ, ಇವತ್ತು ಪಲ್ಲಕ್ಕಿ ಉತ್ಸವ

- ಶಿವಮೊಗ್ಗ ಜಿಲ್ಲೆಯಲ್ಲಿ ರಣ ಬಿಸಿಲು, ತಾಪಮಾನ ಹೆಚ್ಚಳ, ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ಉಷ್ಣಾಂಶ?

- ತುಂಗಾ ಚಾನಲ್ ಬಳಿ ಸ್ಕೂಟಿ ನಿಲ್ಲಿಸಿಕೊಂಡಿದ್ದವರ ಮೇಲೆ ಪೊಲೀಸ್ ದಾಳಿ, ಒಬ್ಬ ಎಸ್ಕೇಪ್, ಮತ್ತೊಬ್ಬ ಅರೆಸ್ಟ್

About The Editor
ನಿತಿನ್ ಆರ್.ಕೈದೊಟ್ಲು





