ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIKARIPURA NEWS | 8 ನವೆಂಬರ್ 2021
ದೀಪಾವಳಿ ಬಳಿಕ ಜಿಲ್ಲೆಯ ವಿವಿಧೆಡೆ ಹೋರಿ ಬೆದರಿಸುವ ಹಬ್ಬಕ್ಕೆ ಚಾಲನೆ ಸಿಕ್ಕಿದೆ. ಶಿಕಾರಿಪುರದ ದೊಡ್ಡಕೇರಿಯಲ್ಲಿ ವಿಜೃಂಭಣೆಯಿಂದ ಹಬ್ಬ ನಡೆಯಿತು. ಅಕ್ಕಪಕ್ಕದ ಊರುಗಳಿಂದ ಸಾವಿರಾರು ಜನರು ಹಬ್ಬದಲ್ಲಿ ಪಾಲ್ಗೊಂಡಿದ್ದರು. ಹೋರಿಗಳ ಅಲಂಕಾರ, ಅವುಗಳ ಓಟ ಕಂಡು ಸಂತೋಷಪಟ್ಟರು.
ದೊಡ್ಡಕೇರಿಯ ಗಿಡ್ಡೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಹೋರಿ ಹಬ್ಬಕ್ಕೆ ಚಾಲನೆ ನೀಡಲಾಯಿತು. ರೈತಾಪಿ ವರ್ಗದ ಪ್ರಮುಖ ಹಬ್ಬ ಇದಾಗಿದೆ.
ಹೋರಿಗಳಿಗೆ ಬಗೆಬಗೆ ಅಲಂಕಾರ
ರೋಮಾಂಚಕ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಹೋರಿಗಳಿಗೆ ಬಗೆಬಗೆಯ ಅಲಂಕಾರ ಮಾಡಲಾಗಿತ್ತು. ಕಾಲ್ಗೆಜ್ಜೆ, ಬಲೂನು ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳಿಂದ ಅಲಂಕರಿಸಲಾಗಿತ್ತು. ಇದನ್ನು ಕಣ್ತುಂಬಿಕೊಳ್ಳಲು ದೊಡ್ಡ ಸಂಖ್ಯೆಯ ಜನರು ಸೇರಿದ್ದರು. ಇನ್ನು, ಸ್ಪರ್ಧೆಗೆ ಇಳಿದಿದ್ದವರು ಹೋರಿಗೆ ಕಟ್ಟಿದ್ದ ಕೊಬ್ಬರಿ ಮೇಲೆ ಕಣ್ಣು ನೆಟ್ಟಿದ್ದರು. ಹೋರಿಯನ್ನು ಹಿಡಿದು, ಕೊಬ್ಬರಿ ಹರಿಯಬೇಕಾಗುತ್ತದೆ.
ಹೋರಿಯ ಹೆಸರಿನ ಧ್ವಜ
ಸ್ಪರ್ಧೆಗೆ ಬಂದಿದ್ದ ಹೋರಿಗಳ ಹೆಸರಿನಲ್ಲಿ ಧ್ವಜವನ್ನು ಹಿಡಿದು ಯುವಕರು ಅಂಗಣದ ಸುತ್ತಲು ಸಂಭ್ರಮದಿಂದ ಓಡಾಡುತ್ತಿದ್ದರು. ಪ್ರತಿ ಹೋರಿಯು ಓಟಕ್ಕೆ ಇಳಿಯುತ್ತಿದ್ದಂತೆ ಅವುಗಳ ಮಾಲೀಕರು ಹೂವು ಹಾಕಿ ಸ್ವಗತಿಸುತ್ತಿದ್ದರು. ಇನ್ನು, ತಮ್ಮಿಷ್ಟದ ಹೋರಿಗಳು ಅಖಾಡಕ್ಕೆ ಇಳಿಯುತ್ತಿದ್ದಂತೆ ಜನರು ಜೋರಾಗಿ ಕೂಗಿ ಹುರುಪು ನೀಡುತ್ತಿದ್ದರು.
ಹೋರಿ ಹಬ್ಬದ ಫೋಟೊ ಆಲ್ಬಂ ಇಲ್ಲಿದೆ
ಫೋಟೊ ಕೃಪೆ : ಮಂಜುನಾಥ ಮಠದ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422