ಕೆಎಸ್‌ಆರ್‌ಟಿಸಿ ಬಸ್‌ ಹತ್ತುವಾಗ ₹6.20 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

Published On : ಏಪ್ರಿಲ್ 18, 2026

Published By : ನಿತಿನ್‌ ಆರ್‌.ಕೈದೊಟ್ಲು 

ಶಿರಾಳಕೊಪ್ಪ: ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ವೇಳೆ ಪ್ರಯಾಣಿಕರೊಬ್ಬರ ಬ್ಯಾಗ್‌ನಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ (jewelry theft) ಮಾಡಿರುವ ಘಟನೆ ನಡೆದಿದೆ. ಹಾವೇರಿ ಜಿಲ್ಲೆ ಹಿರೇಕೇರೂರು ತಾಲೂಕಿನ ಹೊಳಬಿಕೊಂಡ ಗ್ರಾಮದ ದೀಪಾ ಎಂಬುವವರು ಚಿನ್ನ ಕಳೆದುಕೊಂಡ ದುರ್ದೈವಿ.

ದೀಪಾ ಅವರು ಶಿಕಾರಿಪುರ ತಾಲೂಕಿನ ಮಾಳಗೊಂಡನಕೊಪ್ಪದಲ್ಲಿ ನಡೆದ ಕಾರ್ಯಕ್ರಮ ಮುಗಿಸಿ ಊರಿಗೆ ಮರಳುತ್ತಿದ್ದರು. ಏಪ್ರಿಲ್ 14ರಂದು ಬೆಳಗ್ಗೆ ಶಿರಾಳಕೊಪ್ಪ ಬಸ್ ನಿಲ್ದಾಣದಲ್ಲಿ ಹಿರೇಕೇರೂರಿಗೆ ಹೋಗಲು ಬಸ್ ಹತ್ತುವಾಗ ಈ ಕೃತ್ಯ ನಡೆದಿದೆ. ಕಳ್ಳರು ದೀಪಾ ಅವರ ಗಮನಕ್ಕೆ ಬಾರದಂತೆ ವ್ಯಾನಿಟಿ ಬ್ಯಾಗ್‌ನ ಜಿಪ್ ತೆಗೆದು, ಅದರಲ್ಲಿದ್ದ ಚಿನ್ನಾಭರಣದ ಪ್ಲಾಸ್ಟಿಕ್ ಡಬ್ಬವನ್ನು ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

Shiralakoppa-Police-Station-in-Shivamogga-

ಕಳ್ಳತನವಾದ ವಸ್ತುಗಳಲ್ಲಿ 30 ಗ್ರಾಂ ತೂಕದ ಚಿನ್ನದ ಚೈನ್, 18 ಗ್ರಾಂನ ನೆಕ್ಲೆಸ್, ಕಿವಿಯ ಜುಮುಕಿ ಹಾಗೂ ಜಡೆ ಮುತ್ತು ಸೇರಿವೆ. ಒಟ್ಟು 62 ಗ್ರಾಂ ತೂಕದ ಈ ಆಭರಣಗಳ ಅಂದಾಜು ಮೌಲ್ಯ ₹6.20 ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿದೆ. ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಕುಮದ್ವತಿ ಕಾಲೇಜು ಮುಂದೆ ಬಸ್‌ ಪಲ್ಟಿ ಪ್ರಕರಣ, ಚಾಲಕನಿಗೆ ಸಂಕಷ್ಟ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಏಪ್ರಿಲ್ 18, 2026

Leave a Comment