ತಡರಾತ್ರಿ ಮನೆ ಮುಂದೆ ಕಟ್ಟಿದ್ದ ನಾಯಿ ಕೂಗಾಟ, ಹೊರ ಬಂದ ಮನೆಯವರಿಗೆ ಆಘಾತ, ಗ್ರಾಮದಲ್ಲಿ ಆತಂಕ

No.1 News Website
 ಶಿವಮೊಗ್ಗ ಲೈವ್‌ 
ಮಲೆನಾಡು ಭಾಗದಲ್ಲಿ ಅತಿ ಹಚ್ಚು ಓದುಗರು ಮತ್ತು ಅತಿ ಹೆಚ್ಚು ವಿವ್ಸ್‌ ಹೊಂದಿರುವ ವೆಬ್‌ಸೈಟ್‌. ನೀವು ನಮ್ಮ ವಾಟ್ಸಪ್‌ ಗ್ರೂಪ್‌ ಸೇರಲು » ಇಲ್ಲಿ ಕ್ಲಿಕ್‌ ಮಾಡಿ.

shivamogga-live-logo-with-120-by-650-pixel-size.webp

ಶಿಕಾರಿಪುರ: ಮನೆ ಮುಂದೆ ಕಟ್ಟಿದ್ದ ನಾಯಿ ಮೇಲೆ ಚಿರತೆ (Leopard) ದಾಳಿ ನಡೆಸಿದೆ. ಮನೆಯವರು ಹೊರ ಬರುತ್ತಿದ್ದಂತೆ ಚಿರತೆ ಓಡಿ ಹೋಗಿದೆ.

ಶಿಕಾರಿಪುರ ತಾಲೂಕು ಮುಳುಕೊಪ್ಪ ತಾಂಡದಲ್ಲಿ ಚಿರತೆ ಕಾಣಿಸಿಕೊಂಡಿದೆ. ಇಲ್ಲಿನ ಮನೆಯೊಂದರ ಮುಂದೆ ಕಟ್ಟಿ ಹಾಕಿದ್ದ ನಾಯಿ ಮೇಲೆ ಚಿರತೆ ದಾಳಿ ನಡೆಸಿದೆ. ನಾಯಿ ಕೂಗಾಟ ಕೇಳಿ ಅಕ್ಕಪಕ್ಕದವರೆಲ್ಲ ಮನೆಯಿಂದ ಹೊರ ಬಂದಾಗ ಚಿರತೆ ಓಡಿ ಹೋಗಿದೆ ಎಂದು ತಿಳಿದು ಬಂದಿದೆ.

ಈ ಭಾಗದಲ್ಲಿ ಚಿರತೆ ಕಾಣಿಸಿಕೊಂಡಿರುವುದು ಮುಳುಕೊಪ್ಪ ತಾಂಡ ವಾಸಿಗಳಲ್ಲಿ ಆತಂಕ ಮೂಡಿಸಿದೆ. ಕೂಡಲೆ ಚಿರತೆ ಸೆರೆ ಹಿಡಿಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Leopard-found-at-mulukoppa-tanda-village-in-Shikaripura

ಇದನ್ನೂ ಓದಿ » ಶಿವಮೊಗ್ಗ ರೈಲ್ವೆ ನಿಲ್ದಾಣ, ಅನುಮಾನದ ಮೇಲೆ ಮಹಿಳೆ ವಿಚಾರಣೆ, ಸಖಿ ಕೇಂದ್ರಕ್ಕೆ ರವಾನೆ, ಏನಿದು ಕೇಸ್‌?

 

ಶಿವಮೊಗ್ಗದಲ್ಲಿ ಏನೇನಾಯ್ತು? ಇಲ್ಲಿವೆ ಸುದ್ದಿಗಳು. ಕೆಳಗಿರುವ ಹೆಡ್‌ಲೈನ್‌ ಮೇಲೆ ಕ್ಲಿಕ್‌ ಮಾಡಿ, ಸುದ್ದಿ ಓದಿ.

Number 1 News Website in shimoga - Shivamogga Live

 

Leave a Comment