ಗಾಮ ಕ್ರಾಸ್‌ ಬಳಿ ಬಸ್‌ ಡಿಕ್ಕಿ, ಬೈಕ್ ಸವಾರ ಮಾಜಿ ಪೈಲ್ವಾನ್‌ ಸಾವು

SHIVAMOGGA LIVE NEWS | 9 DECEMBER 2023

SHIKARIPURA : ಖಾಸಗಿ ಬಸ್‌ ಮತ್ತು ಬೈಕ್‌ ಮಧ್ಯೆ ಅಪಘಾತ ಸಂಭವಿಸಿದ್ದು ಮಾಜಿ ಪೈಲ್ವಾನ್‌ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಶಿಕಾರಿಪುರ ತಾಲೂಕು ಗಾಮ ಕ್ರಾಸ್‌ ಬಳಿ ಘಟನೆ ಸಂಭವಿಸಿದೆ.

ಪಟ್ಟಣದ ವಿನಾಯಕ ನಗರ ನಿವಾಸಿ ಕುಸ್ಕೂರು ಸತೀಶ್‌ (54) ಮೃತರು. ಜಮೀನಿಗೆ ತೆರಳಿದ್ದ ಸತೀಶ್‌ ಅವರಿಗೆ ಸಾಲೂರು ರಸ್ತೆ ಗಾಮ ಕ್ರಾಸ್‌ ಬಳಿ ಖಾಸಗಿ ಬಸ್‌ ಡಿಕ್ಕಿ ಹೊಡೆದಿದೆ. ಸ್ಥಳದಲ್ಲೇ ಕುಸಿದಿದ್ದ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದರು. ಮೃತರಿಗೆ ಪತ್ನಿ, ಪುತ್ರಿ ಇದ್ದಾರೆ. ಡಿ.17ರಂದು ಸತೀಶ್‌ ಅವರ ಮಗಳ ಮದುವೆ ನಿಶ್ಚಯವಾಗಿತ್ತು.

ಇದನ್ನೂ ಓದಿ – ಶಿಕಾರಿಪುರದಲ್ಲಿ ಜಿಲ್ಲಾಧಿಕಾರಿ ಜನತಾ ದರ್ಶನ, ದಿನಾಂಕ ಫಿಕ್ಸ್‌, ಎಲ್ಲಿ ನಡೆಯಲಿದೆ?

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : December 9, 2023 at 11:20 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಡಿಸೆಂಬರ್ 9, 2023

Leave a Comment