ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIKARIPURA NEWS | 2 JUNE 2021
ಜಿಲ್ಲೆಯಲ್ಲಿ ಒಂದು ವಾರ ಕಠಿಣ ಲಾಕ್ ಡೌನ್ ಜಾರಿಯಾಗುತ್ತಿದ್ದಂತೆ ಮದ್ಯದಂಗಡಿಗಳು ಬಂದ್ ಆಗಿವೆ. ಇದರಿಂದ ಕಳ್ಳಭಟ್ಟಿಗೆ ಡಿಮಾಂಡ್ ಬಂದಿದೆ. ಶಿಕಾರಿಪುರದಲ್ಲಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆಯೊಂದರ ಮೇಲೆ ಅಬಕಾರಿ ಇಲಾಖೆ ಅಧಿಕಾರಿ ನಡುರಾತ್ರಿ ದಾಳಿ ನಡೆಸಿದ್ದಾರೆ.
ಶಿಕಾರಿಪುರ ತಾಲೂಕು ಮಳವಳ್ಳಿ ತಾಂಡದ ಮಲ್ಲಪ್ಪನ ಕಟ್ಟೆ ಕೆರೆ ದಡದಲ್ಲಿ ಕಳ್ಳಬಟ್ಟಿ ಕಾಯಿಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಳ್ಳಭಟ್ಟಿ ಕಾಯಿಸುತ್ತಿದ್ದಾಗಲೇ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಹೊತ್ತಿ ಉರಿಯುತ್ತಿತ್ತು ಬೆಂಕಿ
ನಡುರಾತ್ರಿಯಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಕಳ್ಳಭಟ್ಟಿ ಕಾಯಿಸುತ್ತಿದ್ದವರು ಪರಾರಿಯಾಗಿದ್ದಾರೆ. ಆದರೆ ಕಳ್ಳಭಟ್ಟಿ ಕಾಯಿಸಲು ಹಾಕಿದ್ದ ಬೆಂಕಿ ಇನ್ನೂ ಉರಿಯುತ್ತಿತ್ತು. ಅಲ್ಲದೆ ಕಳ್ಳಭಟ್ಟಿ ತಯಾರಿಸಲು ಇಟ್ಟಿದ್ದ 135 ಲೀಟರ್ ಬೆಲ್ಲದ ಕೊಳೆ, ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ ತಯಾರಾಗಿದ್ದ 9 ಲೀಟರ್ ಕಳ್ಳಭಟ್ಟಿಯೂ ಸಿಕ್ಕಿದೆ.
ದಾಳಿ ವೇಳೆ ಮಳವಳ್ಳಿ ತಾಂಡಾದ ಬೀರಾ ನಾಯಕ್ (23), ಆತನ ತಾಯಿ ಲೋಕಿ ಬಾಯಿ ಪರಾರಿಯಾಗಿದ್ದಾರೆ ಎಂದು ಅಬಕಾರಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
ಅಬಕಾರಿ ನಿರೀಕ್ಷಕರ ಹನುಮಂತಪ್ಪ .ಡಿ.ಎನ್ ನೇತೃತ್ವದಲ್ಲಿ ಅಬಕಾರಿ ಉಪ ನಿರೀಕ್ಷಕರು ಜಾನ್ ಪಿಜೆ, ಅಬಕಾರಿ ಹಿರಿಯ ಪೇದೆ ಚಂದ್ರಪ್ಪ, ವಾಹನ ಚಾಲಕರಾದ ಅರ್ಜುನ ಮತ್ತು ಸಹಾಯಕ ಓಂಕಾರ ನಾಯಕ ದಾಳಿಯಲ್ಲಿ ಭಾಗವಹಿಸಿದ್ದರು.
ವಿಡಿಯೋ ನೋಡಲು ಕ್ಲಿಕ್ ಮಾಡಿ
ಲಕ್ಷಣ ಕಂಡು ಬಂದ ಕೂಡಲೆ ಪರೀಕ್ಷೆ ಮಾಡಿಸಿಕೊಳ್ಳಿ. ಶಿವಮೊಗ್ಗದಲ್ಲಿ ಸುರಕ್ಷಿತವಾಗಿ ಕೋವಿಡ್ ಪರೀಕ್ಷೆಗೆ ಫೋನ್ ಮಾಡಿ, ರಿಜಿಸ್ಟರ್ ಮಾಡಿಕೊಳ್ಳಿ
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422