ಶಿಕಾರಿಪುರದಲ್ಲಿ ಸ್ವಯಂ ಪ್ರೇರಿತ ಬಂದ್‌, ಹಿಂದೂ ಕಾರ್ಯಕರ್ತರ ಬೃಹತ್‌ ಜಾಥಾ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE | 10 JULY 2023

SHIKARIPURA : ಗೋ ಹತ್ಯೆ ಮತ್ತು ಹಿಂದೂ ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ಶಿಕಾರಿಪುರದಲ್ಲಿ ನಡೆದ ಸ್ವಯಂ ಪ್ರೇರಿತ ಬಂದ್‌ (Bandh) ಯಶಸ್ವಿಯಾಗಿದೆ. ವರ್ತಕರು ಅಂಗಡಿಗಳನ್ನು ಬಂದ್‌ ಮಾಡಿ, ಹಿಂದೂ ಜನಜಾಗೃತಿ ಜಾಥಾಗೆ ಬೆಂಬಲ ವ್ಯಕ್ತಪಡಿಸಿದರು.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

Shikaripura-Bandh-over-Cow-Slaughter-by-Hindu-Jagarana-Vedike

ಪಟ್ಟಣ ಸಂಪೂರ್ಣ ಸ್ಥಬ್ಧ

ಹಿಂದೂ ಜಾಗರಣಾ ವೇದಿಕೆ‌, ಆರ್‌.ಎಸ್‌.ಎಸ್ ಮತ್ತು ಹಿಂದೂ ಸಂಘಟನೆಗಳ ವತಿಯಿಂದ ಶಿಕಾರಿಪುರದಲ್ಲಿ ಇವತ್ತು ಹಿಂದೂ ಜಾನಜಾಗೃತಿ ಜಾಥಾ ನಡೆಸಲಾಯಿತು. ಈ ಹಿನ್ನೆಲೆ ಪಟ್ಟಣದ ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ಬಂದ್‌ (Bandh) ಮಾಡಿ ಜಾಥಾಗೆ ಬೆಂಬಲ ಸೂಚಿಸಿದರು. ಬಂದ್‌ ವೇಳೆ ಜನ, ವಾಹನ ಸಂಚಾರ ಕಡಿಮೆಯಾಗಿತ್ತು. ಬಸ್‌ ಸೇರಿದಂತೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಎಂದಿನಂತೆ ಇತ್ತು.

ಪಟ್ಟಣದಲ್ಲಿ ಬೃಹತ್‌ ಜಾಥಾ

ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರ ನೇತೃತ್ವದಲ್ಲಿ ಶಿಕಾರಿಪುರ ಪಟ್ಟಣದಲ್ಲಿ ಜನಜಾಗೃತಿ ಜಾಥಾ ನಡೆಯಿತು. ದೊಡ್ಡ ಸಂಖ್ಯೆಯ ಹಿಂದೂ ಕಾರ್ಯಕರ್ತರು ಜಾಥಾದಲ್ಲಿ ಪಾಲ್ಗೊಂಡಿದ್ದರು. ಕೇಸರಿ ಶಾಲು ಧರಿಸಿ ಘೋಷಣೆಗಳನ್ನು ಕೂಗತ್ತ ಮೆರವಣಿಗೆಯಲ್ಲಿ ಸಾಗಿದರು. ಬಸ್‌ ನಿಲ್ದಾಣದಿಂದ ಸಾಂಸ್ಕೃತಿಕ ಭವನದವರೆಗೆ ಜಾಥಾ ನಡೆಯಿತು. ಗೋ ಹತ್ಯೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದವರಿಗೆ ಶಿಕ್ಷೆಯಾಗಬೇಕು ಎಂದ ಆಗ್ರಹಿಸಿದರು.

Hindu Jagarana Vedike

ಇದನ್ನೂ ಓದಿ – ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್‌ ಪಥ ಸಂಚಲನ | ಯುವಕನ ಕೈ, ಕಾಲು ಕಟ್ಟಿ ಪೊಲೀಸರಿಗೆ ಒಪ್ಪಿಸಿದ ಜನ

ಹಲ್ಲೆಕೋರರ ವಿರುದ್ಧ ಕ್ರಮಕ್ಕೆ ಆಗ್ರಹ

ಜಾಥಾದ ಬಳಿಕ ಸಾಂಸ್ಕೃತಿಕ ಭವನದಲ್ಲಿ ಹಿಂದೂ ಜನಜಾಗೃತಿ ಸಭೆ ನಡೆಸಲಾಯಿತು. ಹಿಂದೂ ಜಾಗರಣಾ ವೇದಿಕೆ, ಆರ್‌.ಎಸ್‌.ಎಸ್‌ನ ಪ್ರಮುಖರು ಸಭೆಯಲ್ಲಿ ಭಾಷಣ ಮಾಡಿದರು.

Hindu Jagarana Vedike

ಗೋವುಗಳ ಮಹತ್ವ ಅರಿತು, ಅವುಗಳ ರಕ್ಷಣೆಗೆ ಹಿಂದುಗಳು ಮುಂದಾಗಬೇಕು. ಶಿಕಾರಿಪುರ ತಾಲೂಕಿನಲ್ಲಿ ಕಸಾಯಿ ಖಾನೆಗಳನ್ನು ಮುಚ್ಚಿಸಬೇಕು. ನಕಲಿ ಜಾತ್ಯಾತೀತವಾದಿಗಳು ಹಿಂದೂ ಧರ್ಮದ ನಿಜವಾದ ಶತ್ರುಗಳು. ಹಿಂದೂ ಧರ್ಮದ ಉಳಿವಾಗಿ ಎಲ್ಲರು ಹೋರಾಟ ಮಾಡಬೇಕು. ಜಾತಿ, ಭಾಷೆ, ಪಕ್ಷ ಮರೆತು ಹಿಂದುಗಳು ಒಗ್ಗೂಡಬೇಕು. ಗೋ ರಕ್ಷಣೆ ಮಾಡಲು ಮುಂದಾದ ಹಿಂದು ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಪೊಲೀಸ್‌ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು.ಶ್ರೀಕಾಂತ್‌ ಕಾರ್ಕಳ, ಪ್ರಾಂತ ಕಾರ್ಯಕಾರಿ ಸಮಿತಿ ಸದಸ್ಯ, ಹಿಂದೂ ಜಾಗರಣ ವೇದಿಕೆ

ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ದೇವರಾಜ ಅರಳಿಹಳ್ಳಿ, ಆರ್‌ಎಸ್‌ಎಸ್‌ ಜಿಲ್ಲಾ ಕಾರ್ಯವಾಹ ಶ್ರೀಧರ್‌ ನಿಸರಾಣಿ, ವೇದಿಕೆ ಪ್ರಾಂತ ಸಹ ಸಂಚಾಲಕ ಸತೀಶ್‌ ದಾವಣಗೆರೆ ಇದ್ದರು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment