SHIVAMOGGA LIVE NEWS | 22 JULY 2024
SHIMOGA : ಹುಣ್ಣಿಮೆ ಹಿನ್ನೆಲೆ ಚಂದ್ರಗುತ್ತಿ ದೇವಸ್ಥಾನಕ್ಕೆ (Temple) ದೊಡ್ಡ ಸಂಖ್ಯೆಯ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದ್ದರು. ಕೂಡಲಿಯಲ್ಲಿ ಚಾತುರ್ಮಾಸ್ಯ ಆರಂಭ. ಇಲ್ಲಿದೆ ಫಟಾಫಟ್ ನ್ಯೂಸ್.
![]() |
ಸೊರಬ
ಚಂದ್ರಗುತ್ತಿಯಲ್ಲಿ ಹುಣ್ಣಿಮೆ ಪೂಜೆ
ಶಿವಮೊಗ್ಗ ಲೈವ್.ಕಾಂ : ಎಡೆಬಿಡದೆ ಸುರಿಯುತ್ತಿರುವ ಮಳೆ ನಡುವೆಯೂ ಚಂದ್ರಗುತ್ತಿ ಶ್ರೀ ರೇಣುಕಾಂಬಾ ದೇವಸ್ಥಾನಕ್ಕೆ ಗುರುಪೂರ್ಣಿಮೆ ಅಂಗವಾಗಿ ಸಾವಿರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು. ದೇವಿಯ ಪಲ್ಲಕ್ಕಿ ಉತ್ಸವವು ಚಂದ್ರಗುತ್ತಿ ಸಮೀಪದ ಜೋಳದಗುಡ್ಡೆ ವರದಾ ನದಿ ತೀರದ ಪ್ರದೇಶಕ್ಕೆ ತೆರಳಿ ಕಳಸ ತೊಳೆಯುವ ಪದ್ಧತಿಯನ್ನು ವಿಧಿ ವಿಧಾನಗಳೊಂದಿಗೆ ನೆರವೇರಿಸಲಾಯಿತು. ನಂತರ ಪಲ್ಲಕ್ಕಿ ಉತ್ಸವ ಜೋಳದಗುಡ್ಡೆ ಮಾರ್ಗವಾಗಿ ದೇವಾಲಯದವರೆಗೆ ವಿವಿಧ ವಾದ್ಯಮೇಳಗಳೊಂದಿಗೆ ವಿಜೃಂಭಣೆಯಿಂದ ಜರುಗಿತು. ಭಕ್ತರು ಪರಿವಾರ ದೇವರುಗಳಾದ ನಾಗದೇವತೆ, ಮಾತಂಗಿ, ಕಾಲಭೈರವ, ಪರಶುರಾಮ, ತ್ರಿಶೂಲದ ಭೈರಪ್ಪ ದೇವರಿಗೆ ಹಾಗೂ ತೊಟ್ಟಿಲು ಬಾವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ
ಕೂಡಲಿ ಮಠದಲ್ಲಿ ವ್ಯಾಸಪೂಜೆಯೊಂದಿಗೆ ಚಾತುರ್ಮಾಸ್ಯ
ಶಿವಮೊಗ್ಗ ಲೈವ್.ಕಾಂ : ಕೂಡಲಿ ಮಠದಲ್ಲಿ ಶೃಂಗೇರಿ ಮಹಾಸಂಸ್ಥಾನ ದಕ್ಷಿಣಮ್ನಾಯ ಮೂಲ ಶಾರದಾ ಪೀಠದ ಜಗದ್ಗುರು ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮೀಜಿ 40ನೇ ವರ್ಷದ ಚಾತುರ್ಮಾಸ್ಯ ವ್ರತ ಸಂಕಲ್ಪವನ್ನು ವ್ಯಾಸಪೂಜೆಯೊಂದಿಗೆ ಭಾನುವಾರ ಆರಂಭಿಸಿದರು. ಚಾತುರ್ಮಾಸ್ಯದ ಅಂಗವಾಗಿ ಶ್ರೀ ಮಠದಲ್ಲಿ ಲೋಕಕಲ್ಯಾಣಾರ್ಥ ಇಷ್ಟಅಷ್ಟಕಾಮ್ಯ ಪ್ರಾಪ್ತಿಗಾಗಿ ಭಾನುವಾರದಿಂದ ಬುಧವಾರವರೆಗೆ ನಿತ್ಯ ಧಾರ್ಮಿಕ ಕಾರ್ಯಕ್ರಮಗಳು ಶ್ರೀಗಳ ಸಾನ್ನಿಧ್ಯದಲ್ಲಿ ನೆರವೇರಲಿವೆ. ಭಕ್ತರು ಕುಟುಂಬ ಸಮೇತ ಭಾಗವಹಿಸಿ ಶ್ರೀ ವಿದ್ಯಾಶಂಕರ, ಶ್ರೀ ವಾಲುಕಾಪರಮೇಶ್ವರ, ಶ್ರೀ ಚಂದ್ರಮೌಳೇಶ್ವರ, ಶ್ರೀ ಚಕ್ರನಿವಾಸಿನಿ ಸಹಿತ ಶ್ರೀ ಶಾರದಾಂಬೆ ಮತ್ತು ಶ್ರೀ ಶಂಕರರಾಚಾರ್ಯ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿ ಪೂರ್ಣಾನುಗ್ರಹ ಪಡೆಯಬಹುದು ಎಂದು ಕೂಡಲಿ ಮಠದ ವ್ಯವಸ್ಥಾಪಕ ರಮೇಶ್ ಹುಲಿಮನಿ ತಿಳಿಸಿದ್ದಾರೆ.
ಶಿವಮೊಗ್ಗ ಲೈವ್.ಕಾಂ
ಶಿಕಾರಿಪುರ
ತೊಗರ್ಸಿ ದೇಗುಲದ ಚಿನ್ನಾಭರಣ ಸರ್ಕಾರದ ಸುಪರ್ದಿಗೆ
ಶಿವಮೊಗ್ಗ ಲೈವ್.ಕಾಂ : ತೊಗರ್ಸಿ ಶ್ರೀ ಮಲ್ಲಿಕಾರ್ಜುನ ದೇವಾಲಯದ ಚಿನ್ನಾಭರಣಗಳ ರಕ್ಷಣೆಗಾಗಿ ತಾಲೂಕು ಖಜಾನೆಯಲ್ಲಿ ಸುರಕ್ಷಿತವಾಗಿಡಲು ಸಮಿತಿ ಮತ್ತು ಸಾರ್ವಜನಿಕರ ಮನವಿ ಮೇರೆಗೆ ಪಟ್ಟಿ ಮಾಡಿ ವಶಕ್ಕೆ ಪಡೆಯಲಾಗಿದೆ. ದೇವಾಲಯದ ಉತ್ಸವ ಹಾಗೂ ವಿಶೇಷ ಸಂದರ್ಭಗಳಲ್ಲಿ ಇವುಗಳನ್ನು ಕೊಡಲಾಗುವುದು ಎಂದು ತಹಸೀಲ್ದಾರ್ ಮಲ್ಲೇಶ್ ಬಿ. ಪೂಜಾರ್ ಹೇಳಿದರು. ಇತ್ತೀಚೆಗೆ ದೇಗುಲದಲ್ಲಿ ಆಭರಣಗಳು ಕಳುವಾದ ಹಿನ್ನೆಲೆ ಉಳಿದ ಚಿನ್ನಾಭರಣಗಳ ಸುರಕ್ಷತೆ ದೃಷ್ಟಿಯಿಷ ನಡೆದ ಸಭೆಯಲ್ಲಿ ಮಾತನಾಡಿದ ಅವರು, ದೇಗುಲದಲ್ಲಿ ಧಾರ್ಮಿಕ ಕಾರ್ಯಗಳು ಮುಗಿದ ನಂತರ ಪುನಃ ಖಜಾನೆಗೆ ಒಪ್ಪಿಸಬೇಕು. ಸಮಿತಿ ಹಾಗೂ ಮುಜರಾಯಿ ಇಲಾಖೆ ಜಂಟಿಯಾಗಿ ಕೆಲಸ ನಿರ್ವಹಿಸುತ್ತವೆ ಎಂದರು. ಮಳೆ ಹಿರೇಮಠದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ, ಶಿರಸ್ತೇದಾರ್ ವಿನಯ್ ಆರಾಧ್ಯ, ಉಪ ತಹಸೀಲ್ದಾರ್ ಮಹೇಶ್ ಸೇರಿದಂತೆ ಹಲವರು ಇದ್ದರು.
ಇದನ್ನೂ ಓದಿ ⇓
ಸಾಗರದಲ್ಲಿ ಹೆಚ್ಚು ಮಳೆ, ಶಿವಮೊಗ್ಗದಲ್ಲಿ ಬಹಳ ಕಡಿಮೆ, ಯಾವ್ಯಾವ ತಾಲೂಕಿನಲ್ಲಿ ಎಷ್ಟಾಗಿದೆ ವರ್ಷಧಾರೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200