ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 28 MARCH 2023
SHIKARIPURA : ರೌಡಿ ಪಟ್ಟಿಯಲ್ಲಿರುವವರು, ಚುನಾವಣೆ ಸಂದರ್ಭ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸಿದ ಕೆಲವರ ಪ್ರಚೋದನೆಯಿಂದ ಶಿಕಾರಿಪುರದಲ್ಲಿ ಕಲ್ಲು ತೂರಾಟ, ಪೊಲೀಸರ ಮೇಲೆ ದಾಳಿಯಾಗಿದೆ. ಈ ಸಂಬಂಧ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವ (Home Minister) ಆರಗ ಜ್ಞಾನೇಂದ್ರ ತಿಳಿಸಿದರು.
ಶಿಕಾರಿಪುರದ ಪ್ರವಾಸಿ ಮಂದಿರದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಸೇರಿದಂತೆ ಪ್ರಮುಖರೊಂದಿಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಗೃಹ ಸಚಿವರು ಹೇಳಿದ ಮೂರು ಪ್ರಮುಖಾಂಶ
ಪ್ರಮುಖಾಂಶ 1 : ಯಾರೋ ಕೆಲವರು ತಪ್ಪು ತಿಳಿವಳಿಕೆಯಿಂದ ಪ್ರಚೋದನೆ ನೀಡಿದ್ದರಿಂದ ಘಟನೆ ಸಂಭವಿಸಿದೆ. ಯಡಿಯೂರಪ್ಪ ಅವರು ಮೊದಲಿಂದಲು ಬಂಜಾರ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರ ಮನೆ ಮೇಲೆ ದಾಳಿಯಾಗಿದೆ. ಹಾಗಿದ್ದೂ ಯಡಿಯೂರಪ್ಪ ಅವರು ತಮ್ಮ ಮನೆ ಮೇಲೆ ದಾಳಿ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಡಿ. ನಾನು ಅವರೊಂದಿಗೆ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ ಎಂದರು.
ಇದನ್ನೂ ಓದಿ – ಶಿವಮೊಗ್ಗ – ಶಿಕಾರಿಪುರ ಹೆದ್ದಾರಿಯಲ್ಲಿ ಬೆಂಕಿ ಹಚ್ಚಿ ಗ್ರಾಮಸ್ಥರ ಆಕ್ರೋಶ, ಟ್ರಾಫಿಕ್ ಜಾಮ್
ಪ್ರಮುಖಾಂಶ 2 : ಪೊಲೀಸರ ಮೇಲೆ ಹಲ್ಲೆಯಾಗಿದ್ದು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದೆ. ಯಾರೂ ಇದರಿಂದ ಪ್ರಚೋದಿತರಾಗುವುದು ಬೇಡ. ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರ ಎಲ್ಲರಿಗು ಅನುಕೂಲ ಆಗುವಂತೆ ನೋಡಿಕೊಂಡಿದೆ. ಮುಖ್ಯಮಂತ್ರಿ ಅವರು ತೆರೆದ ಮನಸಿನಲ್ಲಿದ್ದಾರೆ. ವಿದ್ಯವಂತರು ಕುಳಿತು ಚರ್ಚೆ ನಡೆಸಬಹುದು. ಕಾನೂನು ಕೈಗೆತ್ತಿಕೊಳ್ಳುವುದು ಒಳ್ಳೆಯದಲ್ಲ ಎಂದು ಗೃಹ ಸಚಿವ (Home Minister) ಆರಗ ಜ್ಞಾನೇಂದ್ರ ತಿಳಿಸಿದರು.
ಇದನ್ನೂ ಓದಿ – ಯಡಿಯೂರಪ್ಪ ಮನೆ ಮೇಲೆ ದಾಳಿ, ಇಡೀ ದಿನ ಪಟ್ಟಣದಲ್ಲಿ ಏನೇನಾಯ್ತು? ಜನರ ಆಕ್ರೋಶಕ್ಕೆ ಕಾರಣವೇನು?
ಪ್ರಮುಖಾಂಶ 3 : ಚುನಾವಣೆ ಸಂದರ್ಭ ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸಿದ್ದಾರೆ. ರಾಜಕೀಯ ಉದ್ದೇಶ ಇಟ್ಟುಕೊಂಡು ಅಮಾಯಕರನ್ನು ಪ್ರಚೋದಿಸಿದ್ದಾರೆ. ತಹಶೀಲ್ದಾರ್ ಅವರಿಗೆ ಮನವಿ ಕೊಡಲು ಎಲ್ಲರಿಗು ಸ್ವಾತಂತ್ರ್ಯವಿದೆ. ಆದರೆ ಕಲ್ಲು ಹೊಡೆಯುವುದು, ಪೊಲೀಸರ ಮೇಲೆ ದಾಳಿ ಸಹಿಸಲಾಗದು. ರೌಡಿ ಪಟ್ಟಿಯಲ್ಲಿರುವ ಕೆಲವರು ಕೂಡ ಅಲ್ಲಿದ್ದರು. ಹಾಗಾಗಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಗೃಹ ಸಚಿವರು ತಿಳಿಸಿದರು.
ಇದನ್ನೂ ಓದಿ – ಮನೆ ಮೇಲೆ ಕಲ್ಲು ತೂರಾಟ, ಮಾಜಿ ಸಿಎಂ ಯಡಿಯೂರಪ್ಪ ಮೊದಲ ಪ್ರತಿಕ್ರಿಯೆ, ಹೇಳಿಕೆಯ 5 ಪಾಯಿಂಟ್ ಇಲ್ಲಿದೆ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422