ರಾತ್ರೋರಾತ್ರಿ ಬೀದಿ ದೀಪದ ಕರೆಂಟ್‌ ಕಟ್‌ ಮಾಡಿ, ತೊಗರ್ಸಿ ದೇವಸ್ಥಾನದಲ್ಲಿ ಕಳ್ಳತನ, ಏನೇನೆಲ್ಲ ಕಳುವಾಗಿದೆ?

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 6 JANUARY 2024

SHIRALAKOPPA : ಐತಿಹಾಸಿಕ ಕ್ಷೇತ್ರ ತೊಗರ್ಸಿ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ತಡರಾತ್ರಿ ಕಳ್ಳತನವಾಗಿದೆ. ದೇವಸ್ಥಾನದ ಬೆಳ್ಳಿ ಮಂಟಪದ ಕಳಶ, ಬೆಳ್ಳಿ ದೀಪ, ಲಿಂಗದ ಪಾಣಿಪೀಠಕ್ಕೆ ಹೊದಿಸಿದ್ದ ಬೆಳ್ಳಿ ಕವಚ, ವಿವಿಧ ಪೂಜಾ ಸಾಮಗ್ರಿಗಳು ಸೇರಿದಂತೆ ಅಂದಾಜು 15 ಕೆ.ಜಿ  ತೂಕದ ಬೆಳ್ಳಿ ವಸ್ತುಗಳು ಕಳುವಾಗಿದೆ.

ಕರೆಂಟ್‌ ಕಟ್‌ ಮಾಡಿದ ಖದೀಮರು

ಕಳ್ಳರು ಮಧ್ಯರಾತ್ರಿ ತೇರು ಬೀದಿ ಮತ್ತು ದೇವಸ್ಥಾನದ ಸುತ್ತಲು ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ ದೇಗುಲ ಪ್ರವೇಶಿಸಿದ್ದಾರೆ. ಸಾಕ್ಷಿ ಸಿಗಬಾರದೆಂದು ಸಿಸಿಟಿವಿ ಕ್ಯಾಮೆರಾದ ಡಿವಿಆರ್ ಅಪಹರಿಸಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಬೆಂಗಳೂರಿನ ಬ್ಯಾಂಕ್‌ ಮ್ಯಾನೇಜರ್‌ ಅಡ್ಡಗಟ್ಟಿ ರಾಬರಿ

ವಿಷಯ ತಿಳಿದು ತಹಶೀಲ್ದಾರ್‌ ಮಲ್ಲೇಶ್‌ ಬಿ.ಪೂಜಾರ್‌ ಅವರು ದೇಗುಲಕ್ಕೆ ಭೇಟಿ ನೀಡಿದ್ದರು. ಸ್ವಾಮೀಜಿ ಅವರೊಂದಿಗೆ ಚರ್ಚೆ ನಡೆಸಿದರು. ಎಎಸ್‌ಪಿ ಎ.ಜೆ.ಕಾರ್ಯಪ್ಪ, ಡಿವೈಎಸ್‌ಪಿ ಶಿವಾನಂದ ಮದರಕಂಡಿ, ಸಿಪಿಐ ರುದ್ರೇಶ್, ಸಬ್ ಇನ್‌ಸ್ಪೆಪೆಕ್ಟರ್ ಮಂಜುನಾಥ್ ಕುರಿ ಭೇಟಿ ನೀಡಿ ಪರಿಶೀಲಿಸಿದರು. ಶಿರಾಳಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment