ಶಿವಮೊಗ್ಗ ಲೈವ್.ಕಾಂ | SHIKARIPURA NEWS | 4 ಜುಲೈ 2021
ಪಶು ಆಹಾರ ಹೊತ್ತು ಬಂದಿದ್ದ ಲಾರಿಯೊಂದು ಹಿಮ್ಮುಖವಾಗಿ ಚಲಿಸಿ ಮನೆಯೊಂದಕ್ಕೆ ನುಗ್ಗಿದೆ. ಘಟನೆಯಲ್ಲಿ ಮನೆ ಸಂಪೂರ್ಣವಾಗಿ ಧ್ವಂಸವಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿಕಾರಿಪುರ ತಾಲೂಕು ಶಿವಾಜಿ ಕಣಿವೆಯಲ್ಲಿ ಇವತ್ತು ಬೆಳಗ್ಗೆ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಯಾವುದೆ ಪ್ರಾಣ ಹಾನಿ ಸಂಭವಿಸಿಲ್ಲ.
ಹೇಗಾಯ್ತು ಘಟನೆ?
ಸಂಡ ಗ್ರಾಮದಿಂದ ಪಶು ಆಹಾರವನ್ನು ಹೊತ್ತು ಶಿವಾಜಿ ಕಣಿವೆ ಗ್ರಾಮಕ್ಕೆ ಲಾರಿ ಬಂದಿತ್ತು. ಗ್ರಾಮದಲ್ಲಿ ಲಾರಿ ನಿಲ್ಲಿಸಿದ್ದಾಗ ಬ್ರೇಕ್ ಹಿಡಿಯದೆ ಏಕಾಏಕಿ ಹಿಮ್ಮುಖವಾಗಿ ಚಲಿಸಿದೆ. ತಗ್ಗಿನ ರಸ್ತೆಯಾಗಿದ್ದರಿಂದ ವೇಗವಾಗಿ ಹಿಮ್ಮುಖವಾಗಿ ಚಲಿಸಿದ ಲಾರಿ, ವಿದ್ಯುತ್ ಕಂಬವೊಂದಕ್ಕೆ ಡಿಕ್ಕಿ ಹೊಡೆದಿದೆ. ಬಳಿಕ ಮಾಲತೇಶ್ ಬಾಳೆಕಾಯಿ ಎಂಬುವರ ಮನೆಗೆ ಗುದ್ದಿದೆ.
ಮನೆಯಲ್ಲಿದ್ದವರು ಜಸ್ಟ್ ಮಿಸ್
ಲಾರಿ ಹಿಮ್ಮುಖವಾಗಿ ಬರುತ್ತಿರುವುದನ್ನು ಗಮನಿಸಿದ ಮನೆಯವರು ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾರೆ. ಮನೆಯಿಂದ ಹೊರಗೆ ಓಡಿ ಬಚಾವಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮನೆ ಸಂಪೂರ್ಣ ಧ್ವಂಸವಾಗಿದೆ.
ಘಟನೆಯಿಂದಾಗಿ ಗ್ರಾಮದಲ್ಲಿ ಕೆಲಕಾಲ ಭಾರಿ ಆತಂಕ ಸೃಷ್ಟಿಯಾಗಿತ್ತು. ಘಟನೆಯ ವಿಡಿಯೋ ವರದಿ ಇಲ್ಲಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200