SHIVAMOGGA LIVE NEWS | 31 AUGUST 2023
SHIMOGA : ಸೋಗಾನೆ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರ ಮೊದಲ ವಿಮಾನ (First Flight) ಆಗಮಿಸಿದೆ. ಇಂಡಿಗೋ ಎಟಿಆರ್ (Indigo ATR) ವಿಮಾನ ಭೂಸ್ಪರ್ಶ ಮಾಡುತ್ತಿದ್ದಂತೆ ಜಿಲ್ಲೆಯಲ್ಲಿ ಜನರು ಹರ್ಷ ವ್ಯಕ್ತಪಡಿಸಿದರು. ಇನ್ನು, ಶಿವಮೊಗ್ಗಕ್ಕೆ ಬಂದಿಳಿದ ಮೊದಲ ವಿಮಾನದ ಕುರಿತು ಇಲ್ಲಿದೆ 3 ಪ್ರಮುಖಾಂಶ.
![]() |
ಶಿವಮೊಗ್ಗಕ್ಕೆ ಇವತ್ತು ಬಂದಿದ್ದು ಇಂಡಿಗೋ ಸಂಸ್ಥೆಯ ಎಟಿಆರ್ 72 ಮಾದರಿಯ ವಿಮಾನ. ಫ್ರಾನ್ಸ್ ದೇಶದ ಏವಿಯಾನ್ಸ್ ಡಿ ಟ್ರಾನ್ಸ್‌ಪೋರ್ಟ್ ರೀಜನಲ್ (ಎಟಿಆರ್) ಸಂಸ್ಥೆ ಈ ವಿಮಾನವನ್ನು ಉತ್ಪಾದಿಸಿದೆ. ಇದರಲ್ಲಿ 74 ಸೀಟ್‌ಗಳಿವೆ. ಎರಡು ಪಿಡಬ್ಲುಸಿ ಮಾದರಿ ಇಂಜಿನ್ ಹೊಂದಿವೆ.
ಇದನ್ನೂ ಓದಿ – ಶಿವಮೊಗ್ಗಕ್ಕೆ ಬಂತು ಮೊದಲ ವಿಮಾನ
ಸೋಗಾನೆ ವಿಮಾನ ನಿಲ್ದಾಣಕ್ಕೆ ಬಂದಿದ್ದ ಎಟಿಆರ್ ವಿಮಾನವು 2018ರ ಮಾಡಲ್‌ನದ್ದು. 2018ರ ಆಗಸ್ಟ್ ತಿಂಗಳಲ್ಲಿ ಇದು ಮೊದಲು ಹಾರಾಟ ಆರಂಭಿಸಿತು. ಸಣ್ಣಪುಟ್ಟ ನಗರಗಳನ್ನು ಮಹಾನಗರಗಳ ಜೊತೆಗೆ ಸಂಪರ್ಕಿಸಲು ಇಂಡಿಗೋ ಸಂಸ್ಥೆ ಎಟಿಆರ್ ಮಾದರಿ ವಿಮಾನಗಳನ್ನು ಉಪಯೋಗಿಸುತ್ತಿದೆ. ಕಡಿಮೆ ಸೀಟ್ ಮತ್ತು ಅದಕ್ಕೆ ತಕ್ಕ ಇಂಧನ ಬಳಕೆ ಆಗುವುದರಿಂದ ಎಟಿಆರ್ ಮಾದರಿ ವಿಮಾನಕ್ಕೆ ದೇಶಿಯ ವೈಮಾನಿಕ ಕ್ಷೇತ್ರದಲ್ಲಿ ಹೆಚ್ಚು ಬೇಡಿಕೆ ಇದೆ.
ಇದನ್ನೂ ಓದಿ – ಶಿವಮೊಗ್ಗಕ್ಕೆ ಬಂತು ವಿಮಾನ | LIVE NEWS | ಓದಲು ಇಲ್ಲಿ ಕ್ಲಿಕ್ ಮಾಡಿ
ಶಿವಮೊಗ್ಗಕ್ಕೆ ಬಂದಿದ್ದ ಎಟಿರ್ 72 ಮಾದರಿ ವಿಮಾನವು ದಕ್ಷಿಣ ಭಾರತದ ವಿವಿಧ ನಗರಕ್ಕೆ ಪ್ರತಿದಿನ ಹಾರಾಟ ಮಾಡುತ್ತದೆ. ಇವತ್ತು ಬೆಳಗ್ಗೆ ಶಿವಮೊಗ್ಗಕ್ಕೆ ಆಗಮಿಸುವ ಮೊದಲು ಇದೆ ವಿಮಾನ ಬೆಂಗಳೂರಿನಿಂದ ಹುಬ್ಬಳ್ಳಿಗೆ ಪ್ರಯಾಣಿಸಿತ್ತು. ಹುಬ್ಬಳ್ಳಿಯಿಂದ ಬೆಳಗ್ಗೆ 9.10ಕ್ಕೆ ಬೆಂಗಳೂರಿಗೆ ಆಗಮಿಸಿತ್ತು. ಬೆಳಗ್ಗೆ 9.56ಕ್ಕೆ ಬೆಂಗಳೂರಿನಿಂದ ಹೊರಟು 11.05ಕ್ಕೆ ಶಿವಮೊಗ್ಗ ತಲುಪಿತ್ತು. 12.08ಕ್ಕೆ ಶಿವಮೊಗ್ಗದಿಂದ ಬೆಂಗಳೂರಿಗೆ ತೆರಳಿತ್ತು. ಆ ಬಳಿಕ ಮಧ್ಯಾಹ್ನ 1.43ಕ್ಕೆ ತಮಿಳುನಾಡಿನ ಟೂಟಿಕಾರ್ನ್‌ಗೆ ತೆರಳಿತ್ತು. ಸಂಜೆ ವೇಳೆಗೆ ಇದೇ ವಿಮಾನ ಬೆಳಗಾವಿಗೆ ತೆರಳಲಾಗಿದೆ. ನಾಳೆ ಪುನಃ ಶಿವಮೊಗ್ಗಕ್ಕೆ ಆಗಮಿಸಲಿದೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200