ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 23 JUNE 2021
ರಾಜ್ಯದ ಅತೀ ಚಿಕ್ಕ ಜಲಾಶಯ ಹಾಗೂ ಮುಂಗಾರು ಆರಂಭವಾಗುತ್ತಿದ್ದಂತೆ ತುಂಬಿಕೊಳ್ಳುವ ಗಾಜನೂರು ತುಂಗಾ ಜಲಾಶಯಕ್ಕೆ ಇಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ದಂಪತಿ ಬಾಗಿನ ಸಮರ್ಪಣೆ ಮಾಡಿದರು. ಇಂದು ಮುಂಜಾನೆ ತೀರ್ಥಹಳ್ಳಿ ರಸ್ತೆಯ ಗಾಜನೂರು ಜಲಾಶಯಕ್ಕೆ ಆಗಮಿಸಿದ ಈಶ್ವರಪ್ಪ ಪುರೋಹಿತರ ನೇತೃತ್ವದಲ್ಲಿ ಪೂಜೆ ಸಲ್ಲಿಸಿದರು. ನಂತರ ಶಾಸ್ತ್ರೋಕ್ತವಾಗಿ ಬಾಗೀನ ಸಮರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಈಶ್ವರಪ್ಪ, ರಾಜ್ಯದಲ್ಲಿ ನಿರೀಕ್ಷೆ ಮೀರಿ ಮಳೆ ಬರುತ್ತಿರುವುದು ಜನರಿಗೆ ಹರ್ಷ ತಂದಿದೆ. ಈ ಸಂದರ್ಭದಲ್ಲಿ ನಾಟಿ ಮಾಡುವವರು, ಹೊಲ ಅಣಿಗೊಳಿಸುವವರೆಲ್ಲರಿಗೂ ಸಂತಸ ಮೂಡಿಸಿದೆ. ಕೊರೋನಾ ಸಂದರ್ಭದಲ್ಲಿ ಆತಂಕಕ್ಕೀಡಾಗಿದ್ದ ರೈತರು ಸಂಕಷ್ಟದಿಂದ ಹೊರಬರುತ್ತಿದ್ದಂತೆ ವರ್ಷಧಾರೆ ಖುಷಿ ತಂದಿದೆ. ತುಂಗಾ ಅಣೆಕಟ್ಟು ಈ ವರ್ಷ ಈಗಾಗಲೇ ಎರಡು ಬಾರಿ ತುಂಬಿದ್ದು ಈ ಮಟ್ಟಿಗೆ ನೀರಿದೆ. ಇದೇ ಸಂದರ್ಭ ಕೊರೋನಾ ಕೂಡ ಗಣನೀಯವಾಗಿ ಕಡಿಮೆಯಾಗುತ್ತಿದೆ. ಕೊರೋನಾದಂತೆ ಅತಿವೃಷ್ಟಿಯಾದಾಗಲೂ ಸಹ ಸರ್ಕಾರ ಉತ್ತಮವಾಗಿ ನಿಭಾಯಿಸಿದೆ ಎಂದರು.
ಈ ಸಂಕಷ್ಟಗಳಿಂದ ಹೊರಬಂದು ಕೊರೋನಾವನ್ನ ಓಡಿಸುವ ನಿಟ್ಟಿನಲ್ಲಿಯೂ ಗಮನಾರ್ಹ ಸಾಧನೆ ಮಾಡಿ ದೇಶದಲ್ಲೇ ನಮ್ಮ ಸರ್ಕಾರ ಮೆಚ್ಚುಗೆ ಪಡೆದಿದೆ. ಇದೇ ಸಂದರ್ಭದಲ್ಲಿ ಕೊರೋನಾ ಲಸಿಕೆಯಲ್ಲಿ ಪ್ರಪಂಚದಲ್ಲೇ ಭಾರತ ಮುಂಚೂಣಿಯಲ್ಲಿದ್ದು ನಮ್ಮ ರಾಜ್ಯದ ಕೊಡುಗೆಯೂ ಕೂಡ ಅನನ್ಯವಾಗಿದೆ. ಕೊರೋನಾ ತೊಲಗಲಿ ಹಾಗೂ ಜನ ಸಂಮೃದ್ಧಿಯಿಂದ ಇರಲಿ ಎಂದು ನಾವೆಲ್ಲಾ ಇಲ್ಲಿ ಪೂಜೆ ಮಾಡಿಸಲು ಬಂದಿದ್ದೇವೆ ಎಂದು ಈಶ್ವರಪ್ಪ ಹೇಳಿದರು.
ತುಂಗಾ ನದಿಯಲ್ಲಿ ಒಳಹರಿವು ಕಳೆದ ಎರಡು ದಿನಗಳಿಂದ ಕಡಿಮೆಯಾಗಿದ್ದು, ಗೇಟ್‌ಗಳನ್ನ ಬಂದ್ ಮಾಡಲಾಗಿದೆ. ವಿದ್ಯುತ್ ಘಟಕಗಳಿಂದ ನೀರು ಹರಿ ಬಿಡಲಾಗುತ್ತಿದೆ. ಸದ್ಯ ಜಲಾಶಯದಿಂದ 6759 ಕ್ಯೂಸೆಕ್ ನೀರು ಹೊರಗೆ ಬಿಡಲಾಗುತ್ತಿದೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422