ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ತಾಲೂಕಿನ ಹಿಟ್ಟೂರು ಸರ್ಕಲ್ ಬಳಿ ಎರಡು ಬೈಕ್‌ಗಳ (bike) ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಸವಾರರೊಬ್ಬರು ಗಾಯಗೊಂಡಿದ್ದಾರೆ. ಮಂಡಗಟ್ಟ ಗ್ರಾಮದ ನಿವಾಸಿ ಸಂತೋಷ್ ಎಂಬುವರು ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ.
ಆಯನೂರು-ಸವಳಂಗ ರಸ್ತೆಯಲ್ಲಿ ಸಂತೋಷ್ ಅವರು ತಮ್ಮ ಪಲ್ಸರ್ ಬೈಕಿನಲ್ಲಿ ಆಯನೂರು ಮಾರ್ಗವಾಗಿ ಹೊನ್ನಾಳಿ ಕಡೆಗೆ ತೆರಳುತ್ತಿದ್ದರು. ಈ ವೇಳೆ ಎದುರಿನಿಂದ ವೇಗವಾಗಿ ಬಂದ ಮತ್ತೊಂದು ಬೈಕ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಸಂತೋಷ್ ಅವರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದಾರೆ.
ಇದನ್ನೂ ಓದಿ : ಕುಂಸಿ ಸುತ್ತಾಮುತ್ತಾ ಏ.8ರಂದು ಇಡೀ ದಿನ ಕರೆಂಟ್ ಇರಲ್ಲ, ಯಾವ್ಯಾವ ಊರು? ಇಲ್ಲಿದೆ ಲಿಸ್ಟ್
ಸಂತೋಷ್ ಅವರ ಬಲಗಾಲಿನ ಮಂಡಿ, ಹಿಮ್ಮಡಿ, ಎಡಗಾಲಿನ ತೊಡೆ ಹಾಗೂ ತಲೆಯ ಭಾಗಕ್ಕೆ ಪೆಟ್ಟು ಬಿದ್ದಿದೆ. ತಕ್ಷಣವೇ ಸ್ಥಳೀಯರು ಆಂಬುಲೆನ್ಸ್ ಮೂಲಕ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಡಿಕ್ಕಿ ಹೊಡೆದ ಬೈಕ್‌ನಲ್ಲಿದ್ದ ಇಬ್ಬರಿಗೂ ಗಾಯಗಳಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LATEST NEWS
- ಭದ್ರಾವತಿಯಲ್ಲಿ ತವರಿಗೆ ಮರಳಿದ ಯೋಧನಿಗೆ ಅದ್ಧೂರಿ ಸ್ವಾಗತ

- ಸೂಳೆಬೈಲಿನಲ್ಲಿ ಶೆಡ್ ಮೇಲೆ ತುಂಗಾ ನಗರ ಠಾಣೆ ಪೊಲೀಸರ ದಾಳಿ, ದಾಖಲಾಯ್ತು ಕೇಸ್

- ಹಿಟ್ಟೂರು ಸರ್ಕಲ್‌ನಲ್ಲಿ ಬೈಕುಗಳು ಡಿಕ್ಕಿ, ಹೇಗಾಯ್ತು ಘಟನೆ?

- ಕೆನರಾ ಬ್ಯಾಂಕ್ ವಿರುದ್ಧ ಹೋರಾಡಿ ಗೆದ್ದ ಹೊಸನಗರದ ಗ್ರಾಹಕ, ಏನಿದು ಕೇಸ್?

- ಶಿವಮೊಗ್ಗದ 6 ಕಡೆ ಲೋಕಾಯುಕ್ತ ದಾಳಿ, ಅಧಿಕಾರಿ ಶೋಭಾ ಬಳಿ ಏನೇನೆಲ್ಲ ಸಿಕ್ತು? ಇಲ್ಲಿದೆ ಡಿಟೇಲ್ಸ್

About The Editor
ನಿತಿನ್ ಆರ್.ಕೈದೊಟ್ಲು











