ಶಿವಮೊಗ್ಗ – ಸವಳಂಗ ರಸ್ತೆಯಲ್ಲಿ ಬೈಕ್‌ ಸವಾರನ ಬಲಿ ಪಡೆದ ಟ್ರಾಕ್ಟರ್‌

ಶಿವಮೊಗ್ಗ: ಬೈಕ್‌ ಮತ್ತು ಟ್ರಾಕ್ಟರ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್‌ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ (road accident). ಮೃತರನ್ನು ಹಾವೇರಿ ಜಿಲ್ಲೆಯ ಕುಂಚೂರು ಗ್ರಾಮದ ಹನುಮಂತಪ್ಪ ಹದಡಿ (49) ಎಂದು ಗುರುತಿಸಲಾಗಿದೆ. ➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

ಸವಳಂಗಕ್ಕೆ ಹೋಗುವಾಗ ಅವಘಡ

ಹನುಮಂತಪ್ಪ ಹದಡಿ ಅವರು ಶಿವಮೊಗ್ಗದ ಕೋಟೆಗಂಗೂರು ಗ್ರಾಮಕ್ಕೆ ಕೆಲಸದ ನಿಮಿತ್ತ ಬೈಕ್‌ನಲ್ಲಿ ತೆರಳಿದ್ದರು. ಅಲ್ಲಿಂದ ಸವಳಂಗಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಕಲ್ಲಾಪುರ ಗ್ರಾಮದ ಬಳಿ ಟ್ರಾಕ್ಟರ್‌ ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ.

Shivamogga-Police-Jeep

ಇದನ್ನೂ ಓದಿ : ಕಂಠಮಟ್ಟ ಕುಡಿದು ಹೊಟ್ಟೆ ತುಂಬಾ ಊಟ ಮಾಡಿ ಬಿಲ್‌ ಕೇಳಿದಾಗ ಬಿಯರ್‌ ಬಾಟಲಿಯಿಂದ ದಾಳಿ

ಎದುರಿನಿಂದ ಬಂದ ಟ್ರಾಕ್ಟರ್

ಶಿವಮೊಗ್ಗ – ಸವಳಂಗ ರಸ್ತೆಯಲ್ಲಿ ಹನುಮಂತಪ್ಪ ಅವರು ಬೈಕ್‌ನಲ್ಲಿ ಸಂಚರಿಸುತ್ತಿದ್ದಾಗ, ಎದುರುಗಡೆಯಿಂದ ಬಂದ ಟ್ರಾಕ್ಟರ್ ಡಿಕ್ಕಿ ಹೊಡೆದಿದೆ. ಚಾಲಕ ಟ್ರಾಕ್ಟರ್ ಅನ್ನು ಅತಿವೇಗ ಮತ್ತು ನಿರ್ಲಕ್ಷ್ಯದಿಂದ ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ‌

Shivamogga-Police-Jeep

ತಲೆಗೆ ತೀವ್ರ ಪೆಟ್ಟು

ಡಿಕ್ಕಿಯ ರಭಸಕ್ಕೆ ಹನುಮಂತಪ್ಪ ಅವರ ತಲೆಗೆ ತೀವ್ರ ಪೆಟ್ಟಾಗಿತ್ತು. ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ 

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment

ಮುಂದಿನ ಸುದ್ದಿ ಓದಿ TRENDING

ಶಿವಮೊಗ್ಗದ ಸುತ್ತುಕೋಟೆಯ ವ್ಯಕ್ತಿಗೆ ಜೀವಾವಧಿ ಶಿಕ್ಷೆ, ₹30,000 ದಂಡ, ಕಾರಣವೇನು?