ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 APRIL 2024
HOLEHONNURU : ಶ್ರೀಕ್ಷೇತ್ರ ಕೂಡ್ಲಿ ಗ್ರಾಮದ ಸಂಗಮ ಸ್ಥಳದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಹೊಳೆ ಜಾತ್ರೆ ಮಹೋತ್ಸವ ಅದ್ಧೂರಿಯಾಗಿ ನಡೆಯಿತು. ವಿವಿಧೆಡೆಯ ಸಾವಿರಾರು ಭಕ್ತರು ತುಂಗಾ, ಭದ್ರಾ ಸಂಗಮ ಸ್ಥಳದಲ್ಲಿ ಮಿಂದೆದ್ದು ಪುನೀತರಾದರು.
ಏನಿದು ಹೊಳೆ ಮಹೋತ್ಸವ?
ಯುಗಾದಿ ಹಬ್ಬದ ಮರು ದಿನ ಕೂಡ್ಲಿ ಗ್ರಾಮದ ತುಂಗಾ ಹಾಗೂ ಭದ್ರಾ ನದಿ ಸಂಗಮದಲ್ಲಿ ಜಾತ್ರೆ ನಡೆಯಲಿದೆ. ಸುತ್ತಮುತ್ತಲ ಗ್ರಾಮಗಳ ದೇವರಿಗೆ ವಿವಿಧ ಪುಷ್ಪಾಲಂಕಾರ ಹಾಗೂ ವಿದ್ಯುತ್ ದೀಪಾಲಂಕಾರ ಮಾಡಿ ತಮಟೆ, ಡೋಲು, ಡೊಳ್ಳು, ಜುಂಜುಂ ಮೇಳ ಇಂತಹ ನಾನಾ ವಾದ್ಯಗಳೊಂದಿಗೆ ಹೊಳೆ ಜಾತ್ರೆಗೆ ಕರೆದೊಯ್ಯಲಾಗುತ್ತದೆ. ಸಂಗಮೇಶ್ವರ ದೇವರ ಸನ್ನಿಧಿಯಲ್ಲಿ ಪುಣ್ಯ ತೀರ್ಥ ಅಭಿಷೇಕ, ಮಂಗಳಾರತಿ ಮಾಡಿಸಿ ವಿಜೃಂಭಣೆಯ ಮೆರವಣಿಗೆ ನಡೆಸಲಾಗುತ್ತದೆ.
ನವ ಸಂವತ್ಸರದ ಮೊದಲ ಹಬ್ಬ
ಸುಗ್ಗಿಕಾಲ ಮುಗಿದು ಹೊಸ ಸಂವತ್ಸರ ಮೊದಲ ಹಬ್ಬವಾಗಿರುವುದರಿಂದ ರೈತರು ಉತ್ಸಾಹದಿಂದ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಕುಟುಂಬದೊಂದಿಗೆ ಜಾತ್ರೆಗೆ ಬಂದು ಸುತ್ತಾಟ ನಡೆಸಿದರು. ಸಂಗಮ ಸ್ಥಳದಿಂದ ಹೊಳೆ ಜಾತ್ರೆ ನಡೆಯುವ ಸ್ಥಳಕ್ಕೆ ಉಕ್ಕಡದಲ್ಲಿ ಜನರು ತೆರಳಿ ಜಾತ್ರೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಪೂಜೆ, ನಾಳೆ ರಂಜಾನ್‌ಗೆ ಸಿದ್ಧತೆ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422