ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿರುವ ಕೈದಿಯ ಭೇಟಿಗೆ ಬಂದಿದ್ದ ವ್ಯಕ್ತಿಯೊಬ್ಬ ಟವಲ್‌ನಲ್ಲಿ (towel) ಗಾಂಜಾ ಅಡಗಿಸಿ ಜೈಲಿನೊಳಗೆ ಸಾಗಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಫೆಬ್ರವರಿ 13ರ ಸಂಜೆ ಘಟನೆ ನಡೆದಿದೆ.
ಕೈದಿ ಮಹ್ಮದ್ ಅಫ್ಜಲ್ ಭೇಟಿಗೆ ಭದ್ರಾವತಿಯ ಹೊಸೂರು ನಿವಾಸಿ ಅಬ್ದುಲ್ ರಜಾಕ್ ಎಂಬಾತ ಬಂದಿದ್ದ. ಕಾರಾಗೃಹದ ಆಕ್ಸೆಸ್ ಕಂಟ್ರೋಲ್ ಪಾಯಿಂಟ್‌ನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ, ಅಬ್ದುಲ್ ರಜಾಕ್, ಕೈದಿ ಮಹ್ಮದ್ ಅಫ್ಜಲ್‌ಗೆ ಕೊಡಲು ತಂದಿದ್ದ ಬಟ್ಟೆಗಳ ತಪಾಸಣೆ ನಡೆಸಿದರು. ಒಂದು ಟವಲ್‌ನ ಪಟ್ಟಿಯಲ್ಲಿ ಅನುಮಾನಾಸ್ಪದ ವಸ್ತು ಇರುವುದು ಕಂಡುಬಂದಿದೆ.

ಕೂಡಲೇ ಟವಲ್‌ನ ಪಟ್ಟಿಯನ್ನು ಪರಿಶೀಲಿಸಿದಾಗ ಅದರಲ್ಲಿ ಗಾಂಜಾ ಪತ್ತೆಯಾಗಿದೆ. ಕೂಡಲೇ ಜೈಲು ಅಧಿಕಾರಿಗಳು ಗಾಂಜಾ ಮತ್ತು ಟವಲ್ ಅನ್ನು ವಶಪಡಿಸಿಕೊಂಡು, ಅಬ್ದುಲ್ ರಜಾಕ್‌ನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದ ಗೋಲ್ಡ್ ಶೋ ರೂಂನಲ್ಲಿ 6 ಲಕ್ಷದ ಸರ ಮಿಸ್ಸಿಂಗ್, CCTV ಚೆಕ್ ಮಾಡಿದಾಗ ಸತ್ಯ ಬಯಲು
LATEST NEWS
- ಚಂದ್ರಗುತ್ತಿ ಜಾತ್ರೆ, ಮಹತ್ವದ ಆದೇಶ ಹೊರಡಿಸಿದ ಶಿವಮೊಗ್ಗ ಜಿಲ್ಲಾಧಿಕಾರಿ, ಏನದು?

- ಉಚಿತ ಆಯುರ್ವೇದ ಚಿಕಿತ್ಸೆ ನೆಪ, ಶಿವಮೊಗ್ಗದ ಮತ್ತೂರಿನಲ್ಲಿ ಮಹಾ ವಂಚನೆ, ಆಗಿದ್ದೇನು?

- ಶಿವಮೊಗ್ಗದಲ್ಲಿ ಫೆಬ್ರವರಿ 21ರಂದು ಉದ್ಯೋಗ ಮೇಳ, ಪ್ರತಿಷ್ಠಿತ ಕಂಪನಿಗಳು ಭಾಗಿ, ಎಲ್ಲಿ?

- ಕೈದಿ ಭೇಟಿಗೆ ಬಂದ ವ್ಯಕ್ತಿ ತಂದಿದ್ದ ಟವಲ್ ಚೆಕ್ ಮಾಡಿದ ಭದ್ರತಾ ಸಿಬ್ಬಂದಿಗೆ ಶಾಕ್, ಏನಿತ್ತು ಟವಲ್‌ನಲ್ಲಿ?

- ಶಿವಮೊಗ್ಗದಲ್ಲಿ ಕೀಟನಾಶಕ ಮಾರಾಟ ಮಳಿಗೆ ಮೇಲೆ ದಾಳಿ, ಏನೇನೆಲ್ಲ ಸಿಕ್ತು?

About The Editor
ನಿತಿನ್ ಆರ್.ಕೈದೊಟ್ಲು






