ಶಿವಮೊಗ್ಗದ ಮೊದಲ ವಿಮಾನ, ಲ್ಯಾಂಡಿಂಗ್‌ನಿಂದ ಟೇಕಾಫ್‌ವರೆಗೆ ಏನೇನಾಯ್ತು? ಇಲ್ಲಿದೆ ಪೂರ್ತಿ ಮಾಹಿತಿ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 31 AUGUST 2023

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA : ಜಿಲ್ಲೆಯ ಜನರ ಬಹು ಸಮಯದ ಕನಸು ನನಸಾಗಿದೆ. ಇಂಡಿಗೋ (Indigo Flight) ಸಂಸ್ಥೆಯ ಎಟಿಆರ್‌ 72 ಮಾದರಿ ವಿಮಾನ ಶಿವಮೊಗ್ಗಕ್ಕೆ (Shimoga Airport) ಆಗಮಿಸಿತ್ತು. ಈ ವಿಮಾನಕ್ಕೆ ಜಿಲ್ಲೆಯಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.

ಬೆಂಗಳೂರಿನಲ್ಲು ಇಂಡಿಗೋ ಸಂಭ್ರಮ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂಡಿಗೋ ಸಂಸ್ಥೆಯ ಎಟಿಆರ್‌ 72 ವಿಮಾನ ಬೆಳಗ್ಗೆ 9.47ಕ್ಕೆ ಹಾರಾಟ ಆರಂಭಿಸಿತು. ಇದಕ್ಕೂ ಮೊದಲು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್‌, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಡಿ.ಎಸ್.ಅರುಣ್‌, ಎಸ್‌.ಎನ್.ಚನ್ನಬಸಪ್ಪ, ಬಿ.ವೈ.ವಿಜಯೇಂದ್ರ, ಬೇಳೂರು ಗೋಪಾಲಕೃಷ್ಣ, ಮಾಜಿ ಶಾಸಕ ಹರತಾಳು ಹಾಲ್ಪಪ ಸೇರಿದಂತೆ ಹಲವು ಗಣ್ಯರು ಇಂಡಿಗೋ ಸಂಸ್ಥೆಯ ಸಿಬ್ಬಂದಿ ಜೊತೆಗೆ ಫೋಟೊ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

AVvXsEjmEiUx8I 61h 1vTsOi1avzf8dBwQaJ9svD WILoNWq3rL vr5kdbKWMWVNFg KXzydjx2eyN8mKQxgF28PjlNMyXH sAEDhNfeNYW9 hxlta6Xm8onU6NJdZxddmopiOfHcREn6DCNx1Ix01kmBsUUyDA2O1gZMyk8r7HR0zyUc

ಎರಡು ಸಾವಿರ ಅಡಿ ಎತ್ತರ ಹಾರಾಟ

ಬೆಂಗಳೂರಿನಿಂದ ಹೊರಟ ವಿಮಾನ 2,700 ಅಡಿ ಎತ್ತರದಲ್ಲಿ ಹಾರಾಟ ನಡೆಸಿತು. ಶಿವಮೊಗ್ಗದಲ್ಲಿ ಆಗಸದಲ್ಲೆ ವಿಮಾನ ನಿಲ್ದಾಣದ ಸುತ್ತಲು ಒಂದು ಸುತ್ತು ಹಾಕಿತು. ಬಳಿಕ ಓತಿಘಟ್ಟ ಕಡೆಯಿಂದ ಲ್ಯಾಂಡ್‌ ಆದ ವಿಮಾನ ನೇರವಾಗಿ ಟರ್ಮಿನಲ್‌ವರೆಗೆ ತಲುಪಿತು.

ವಿಮಾನಕ್ಕೆ ವಾಟರ್‌ ಸಲ್ಯೂಟ್‌

ವೈಮಾನಿಕ ಕ್ಷೇತ್ರದಲ್ಲಿ ಹೊಸ ವಿಮಾನಗಳಿಗೆ ವಾಟರ್‌ ಸಲ್ಯೂಟ್‌ ಸಲ್ಲಿಸಲಾಗುತ್ತದೆ. ಅದೇ ಮಾದರಿ ಶಿವಮೊಗ್ಗ ವಿಮಾನ ನಿಲ್ದಾಣದ ಟರ್ಮಿನಲ್‌ ಪಕ್ಕದಲ್ಲಿ ಇಂಡಿಗೋ ವಿಮಾನಕ್ಕೆ ವಾಟರ್‌ ಸಲ್ಯೂಟ್‌ ಸಲ್ಲಿಸಲಾಯಿತು. ಎರಡು ಫೈರ್‌ ಇಂಜಿನ್‌ ವಾಹನಗಳ ಮೂಲಕ ನೀರನ್ನು ಮೇಲಕ್ಕೆ ಹಾಯಿಸಲಾಯಿತು. ಇದರ ವಿಡಿಯೋ ಇಲ್ಲಿದೆ.

ಧ್ವಜ ಹಿಡಿದು ಖುಷಿ

ಶಿವಮೊಗ್ಗ ವಿಮಾನ ನಿಲ್ದಾಣದ ಹ್ಯಾಂಗರ್‌ನಲ್ಲಿ ವಿಮಾನದಿಂದ ಕೆಳಗಿಳಿದ ಗಣ್ಯರು ತ್ರಿವರ್ಣ ಧ್ವಜ ಪ್ರದರ್ಶಿಸಿದರು. ಇದೇ ವೇಳೆ ಇಂಡಿಗೋ ಸಂಸ್ಥೆಯ ಸಿಬ್ಬಂದಿ ಎಲ್ಲರೊಂದಿಗೆ ಫೋಟೊ ಕ್ಲಿಕ್ಕಿಸಿಕೊಂಡರು. ಇದರ ವಿಡಿಯೋ ಇಲ್ಲಿದೆ.

 

View this post on Instagram

 

A post shared by B Y Raghavendra (@byrbjp)

ವೆಬ್‌ಸೈಟ್‌ ಅನಾವರಣ, ವೇದಿಕೆ ಕಾರ್ಯಕ್ರಮ

ಇನ್ನು, ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನದ ಆಗಮನದ ಹಿನ್ನೆಲೆ ವೇದಿಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದೆ ವೇಳೆ ಶಿವಮೊಗ್ಗ ವಿಮಾನ ನಿಲ್ದಾಣದ ವೆಬ್‌ಸೈಟ್‌ ಅನಾವರಣ ಮಾಡಲಾಯಿತು.

ಮಧ್ಯಾಹ್ನ ಬೆಂಗಳೂರಿನತ್ತ ವಿಮಾನ

ಕಾರ್ಯಕ್ರಮ ಮತ್ತು ಗಣ್ಯರು ವಿಮಾನದ ಮೂಲಕ ಬೆಂಗಳೂರಿಗೆ ತೆರಳಬೇಕಿದ್ದರಿಂದ ಇಂಡಿಗೋ ವಿಮಾನ ಶಿವಮೊಗ್ಗದಿಂದ ತಡವಾಗಿ ಪ್ರಯಾಣ ಆರಂಭಿಸಿತು. ಮಧ್ಯಾಹ್ನ 12.08ಕ್ಕೆ ಶಿವಮೊಗ್ಗದಿಂದ ಹಾರಾಟ ಆರಂಭಿಸಿತು. ಸಚಿವರಾದ ಎಂ.ಬಿ.ಪಾಟೀಲ್‌, ಮಧು ಬಂಗಾರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಹಲವರು ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment