ಶಿವಮೊಗ್ಗ : ಕೂಡ್ಲಿಯಲ್ಲಿ ಪುರಾಣ ಪ್ರಸಿದ್ಧ ಶ್ರೀ ಸಂಗೇಶ್ವರ ಸ್ವಾಮಿ ಜಾತ್ರೆ (Jathre) ಅದ್ಧೂರಿಯಿಂದ ನಡೆಯುತ್ತಿದೆ. ತುಂಗಾ, ಭದ್ರಾ ಸಂಗಮ ಕ್ಷೇತ್ರದಲ್ಲಿ ಪುಣ್ಯ ಸ್ನಾನ ಮಾಡಿ, ಭಕ್ತರು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಯುಗಾದಿ ಹಬ್ಬದಂದು ಶ್ರೀ ಸಂಗಮೇಶ್ವರ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಸುತ್ತಮುತ್ತಲ ಗ್ರಾಮಗಳು, ನೆರೆಹೊರೆಯ ಜಿಲ್ಲೆಯಿಂದಲು ಭಕ್ತರು ಇಲ್ಲಿಗೆ ಆಗಮಿಸಿ ಪುಣ್ಯ ಸ್ನಾನ ಮಾಡುತ್ತಿದ್ದಾರೆ.
![]() |
ಸಂಗಮದಲ್ಲಿ ವಿಶೇಷ ಪೂಜೆ
ತುಂಗಾ ಮತ್ತು ಭದ್ರಾ ನದಿಗಳು ಶಿವಮೊಗ್ಗ ತಾಲೂಕಿನ ಕೂಡ್ಲಿಯಲ್ಲಿ ಸಂಗಮವಾಗುತ್ತವೆ. ಈ ಕ್ಷೇತ್ರದಲ್ಲಿ ಹೊಳೆಯಲ್ಲಿ ಮಿಂದೆದ್ದರೆ ಪುಣ್ಯ ಪ್ರಾಪ್ತಿಯಾಗಲಿದೆ ಎಂಬ ನಂಬಿಕೆ ಇದೆ. ಯುಗಾದಿ ಹಬ್ಬದ ಸಂದರ್ಭ ದೊಡ್ಡ ಸಂಖ್ಯೆಯ ಭಕ್ತರು ಕೂಡ್ಲಿಗೆ ಬಂದು ಪುಣ್ಯ ಸ್ನಾನ ಮಾಡುತ್ತಿದ್ದಾರೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ನಡೆಯಬೇಕಿದ್ದ ಮೊದಲ ಕಂಬಳ ರದ್ದು, ಯಾಕೆ? ಮುಂದೆ ನಡೆಯುತ್ತಾ?
ಸುತ್ತಮುತ್ತಲ ಹಳ್ಳಿಯ ದೇವರುಗಳು
ಸುತ್ತಮುತ್ತಲ ನೂರಾರು ಹಳ್ಳಿಗಳ ಜನರು ಯುಗಾದಿ ಸಂದರ್ಭ ಕೂಡ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಊರ ದೇವರ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿ ತಂದು ತುಂಗಾ, ಭದ್ರಾ ಸಂಗಮ ಕ್ಷೇತ್ರದಲ್ಲಿ ಸ್ವಚ್ಛಗೊಳಿಸುತ್ತಾರೆ. ಹೊಳೆ ದಂಡೆ ಮೇಲೆ ಪೂಜೆ ಸಲ್ಲಿಸಿ ಬಳಿಕ ಊರಿಗೆ ಕೊಂಡೊಯ್ಯುತ್ತಾರೆ.
ಜಾತ್ರೆ ನೋಡಲು ತೆಪ್ಪದಲ್ಲಿ ಹೋಗಬೇಕು
ಶ್ರೀ ಸಂಗಮೇಶ್ವರ ಸ್ವಾಮಿ ಜಾತ್ರೆ (Jathre) ನೋಡಲು ತೆಪ್ಪದಲ್ಲಿ ಹೋಗಬೇಕು. ಹೊಳೆಯ ನಡುಗಡ್ಡೆಯ ಮೇಲೆ ಅಂಗಡಿಗಳನ್ನು ಹಾಕಲಾಗುತ್ತದೆ. ಜಾತ್ರೆಗೆ ಬಂದವರು ತೆಪ್ಪಗಳ ಮೂಲಕ ನಡುಗಡ್ಡೆಗೆ ಹೋಗಬೇಕಾಗುತ್ತದೆ. ತೆಪ್ಪದಲ್ಲಿ ಹೋಗಿ ಜಾತ್ರೆಯಲ್ಲಿ ಪಾಲ್ಗೊಳ್ಳುವುದರಿಂದ ದೊಡ್ಡ ಸಂಖ್ಯೆಯ ಜನರು ಇಲ್ಲಿಗೆ ಬರುತ್ತಾರೆ. ಇನ್ನು, ಜಾತ್ರೆ ಸಂದರ್ಭ ಶ್ರೀ ಸಂಗಮೇಶ್ವರ ದೇವರ ಅದ್ಧೂರಿ ರಥೋತ್ಸವ ನಡೆಯಲಿದೆ.

ಇದನ್ನೂ ಓದಿ » ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗದಲ್ಲಿ ಯಾವ್ಯಾವ ಹಾಲಿನ ದರ ಎಷ್ಟು ಹೆಚ್ಚಾಗುತ್ತೆ? ಇಲ್ಲಿದೆ ಶಿಮುಲ್ ಪ್ರಕಟಿಸಿದ ಪಟ್ಟಿ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200