ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 22 ಡಿಸೆಂಬರ್ 2021
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ನೈಋತ್ಯ ರೈಲ್ವೆಯ ಶಿವಮೊಗ್ಗ ವಿಭಾಗದ ರೈಲ್ವೆ ಲೆವೆಲ್ ಕ್ರಾಸ್-79(ಕುಂಸಿ ರೈಲ್ವೆ ಗೇಟ್)ರಲ್ಲಿ ತಾಂತ್ರಿಕ ಪರಿಶೀಲನೆ ನಿಮಿತ್ತ ಡಿ.22ರ ರಾತ್ರಿ 7ರವರೆಗೆ ಗೇಟ್ ಬಂದ್ ಮಾಡಲಾಗಿದೆ. ಕುಂಸಿ – ಆನಂದಪುರ ನಡುವೆ ಲಘು ಮತ್ತು ಭಾರಿ ವಾಹನಗಳಿಗೆ ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾವುದು ಪರ್ಯಾಯ ಮಾರ್ಗ?
ಶಿವಮೊಗ್ಗದಿಂದ ತೆರಳುವ ಭಾರಿ ವಾಹನಗಳು ಆಯನೂರು, 5ನೇ ಮೈಲಿಗಲ್ಲು, ಸೂಡೂರು, ಶೆಟ್ಟಿಕೆರೆ ಮಾರ್ಗವಾಗಿ ಚೋರಡಿ ತಲುಪಬಹುದು. ಸಾಗರದಿಂದ ಬರುವ ವಾಹನಗಳು ಚೋರಡಿ, ಶೆಟ್ಟಿಕೆರೆ, ಸೂಡೂರು, 5ನೇ ಮೈಲಿಗಲ್ಲು, ಆಯನೂರು ಮಾರ್ಗವಾಗಿ ಶಿವಮೊಗ್ಗಕ್ಕೆ ಸಂಚರಿಸಬಹುದು.
ಶಿವಮೊಗ್ಗದಿಂದ ಸಾಗರಕ್ಕೆ ತೆರಳುವ ಲಘು ವಾಹನಗಳು ಕುಂಸಿ, ಹುಬ್ಬನಹಳ್ಳಿ, ಬಾಳೆಕೊಪ್ಪ, ಚಿಕ್ಕಮರಸ, ಕುಂಸಿ ಹಾಗೂ ಸಾಗರದಿಂದ ಶಿವಮೊಗ್ಗಕ್ಕೆ ತೆರಳುವ ವಾಹನಗಳು ಕೆರೆಕೋಡಿಯಿಂದ ಚಿಕ್ಕಮರಸ, ಬಾಳೆಕೊಪ್ಪ, ಹುಬ್ಬನಹಳ್ಳಿ, ಕುಂಸಿ ಮುಖಾಂತರ ರಾಷ್ಟ್ರೀಯ ಹೆದ್ದಾರಿ 206ಕ್ಕೆ ತಲುಪುವುದು. ಸೋಮವಾರ ರಾತ್ರಿಯಿಂದಲೇ ಮಾರ್ಗ ಬದಲಾವಣೆ ಆಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.