ಅಕ್ಕಪಕ್ಕದ ಮನೆ ಮಹಿಳೆಯರಿಗೆಲ್ಲ ಅಶ್ಲೀಲ ಮೆಸೇಜ್‌, ಅಪರಿಚಿತನ ವಿರುದ್ಧ ದಾಖಲಾಯ್ತು ಕೇಸ್‌

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 25 FEBRUARY 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

KUMSI : ರಸ್ತೆಯಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೊಬೈಲ್‌ ಕಸಿದುಕೊಂಡು ಹೋಗಿದ್ದ ಕಳ್ಳನೊಬ್ಬ, ಅದರಲ್ಲಿರುವ ಯುವತಿಯರು, ಮಹಿಳೆಯರ ಮೊಬೈಲ್‌ ನಂಬರ್‌ಗೆ ಅಶ್ಲೀಲ ಮೆಸೇಜ್‌ ಕಳುಹಿಸುತ್ತಿದ್ದಾನೆ. ಈ ಸಂಬಂಧ ಯುವತಿ ದೂರು ನೀಡಿದ್ದಾಳೆ.

LIC-HOME-PRASHANTHಶಿವಮೊಗ್ಗ ತಾಲೂಕು ಗ್ರಾಮವೊಂದರ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವಿದ್ಯಾರ್ಥಿನಿಯನ್ನು  (ಹೆಸರು, ಊರು ಗೌಪ್ಯ) ಅಡ್ಡಗಟ್ಟಿ ಅಪರಿಚಿತನೊಬ್ಬ ಮೊಬೈಲ್‌ ಕಸಿದು ಪರಾರಿಯಾಗಿದ್ದ. ಡಿ.29ರಂದು ಘಟನೆ ಸಂಭವಿಸಿತ್ತು. ಯುವತಿಯ ಮೊಬೈಲ್‌ನಲ್ಲಿದ್ದ ಮಹಿಳೆಯರು, ಯುವತಿಯರ ನಂಬರ್‌ಗೆ ಕಳ್ಳ ಕರೆ ಮಾಡುತ್ತಿದ್ದ. ಈ ಹಿನ್ನೆಲೆ ಯುವತಿ ನಂಬರ್‌ ಬ್ಲಾಕ್‌ ಮಾಡಿಸಿದ್ದಳು.

ಯುವತಿಯ ಮೊಬೈಲ್‌ನಲ್ಲಿದ್ದ ಯುವತಿಯರು, ಮಹಿಳೆಯರ ಮೊಬೈಲ್‌ ನಂಬರ್‌ಗೆ ಈಗಲು ಅಪರಿಚತ ನಂಬರ್‌ಗಳಿಂದ ಕರೆ, ಅಶ್ಲೀಲ ಮೆಸೇಜುಗಳು ಬರುತ್ತಿವೆ ಎಂದು ಆರೋಪಿಸಲಾಗಿದೆ. ಯುವತಿಯ ಅಕ್ಕಪಕ್ಕದ ಮನೆಯ ಮಹಿಳೆಯರು, ಯುವತಿಯ ಕುಟುಂಬದವರಿಗು ಕರೆ, ಮೆಸೇಜುಗಳು ಬರುತ್ತಿವೆ. ಈ ಹಿನ್ನೆಲೆ ಯುವತಿ ಕುಂಸಿ ಠಾಣೆಯಲ್ಲಿ ದೂರು ನೀಡಿದ್ದಾಳೆ. ರೆಡ್‌ ಮಿ ಮೊಬೈಲ್‌ ಕಳ್ಳತನ ಮತ್ತು ಅದರಲ್ಲಿದ್ದ ಮೊಬೈಲ್‌ ನಂಬರ್‌ಗಳ ದುರ್ಬಳಕೆ ಮಾಡಿಕೊಂಡು ಅಶ್ಲೀಲ ಸಂದೇಶ ಕಳುಹಿಸುತ್ತಿರುವ ಹಿನ್ನೆಲೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ತುಂಗಾ ನದಿಯಲ್ಲಿ ಉಡುಪಿ ಜಿಲ್ಲೆ ವ್ಯಕ್ತಿಯ ಮೃತದೇಹ ಪತ್ತೆ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment