ನೂತನ ಬೈಪಾಸ್‌ ರಸ್ತೆ, ಹೊಸ ಸತುವೆ ಉದ್ಘಾಟಿಸಿದ ಸಂಸದ ರಾಘವೇಂದ್ರ

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಹೊಳೆಹೊನ್ನೂರು: ಚಿಕ್ಕೂಡ್ಲಿ ಬಳಿ ಭದ್ರಾ ನದಿಗೆ ನೂತನವಾಗಿ ನಿರ್ಮಿಸಿರುವ ಸೇತುವೆ ಮತ್ತು ಹೊಳೆಹೊನ್ನೂರು ರಿಂಗ್‌ ರಸ್ತೆಯನ್ನು (Ring Road) ಸಂಸದ ಬಿ.ವೈ.ರಾಘವೇಂದ್ರ ಲೋಕಾರ್ಪಣೆ ಮಾಡಿದರು.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಬಳಿಕ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ಪ್ರಮುಖ ವಿಷಯಗಳನ್ನು ಪ್ರಸ್ತಾಪಿಸಿದರು.

Holehonnuru-Ring-road-inaugurated

ಸಂಸದ ರಾಘವೇಂದ್ರ ಹೇಳಿದ್ದೇನು?

  • ಆರು ವರ್ಷದ ಹಿಂದೆ ಪ್ರಾರಂಭವಾದ ಶಿವಮೊಗ್ಗ – ಚಿತ್ರದುರ್ಗ ಹೆದ್ದಾರಿ ಕಾಮಗಾರಿಯನ್ನು ಮೊದಲಿದ್ದ ಹೈದರಾಬಾದ್ ಗುತ್ತಿಗೆದಾರ ಸ್ವಲ್ಪ ಭಾಗವನ್ನು ಮಾತ್ರ ಮಾಡಿ ಇನ್ನೂ 100 ಕೋಟಿ ರೂ. ವೆಚ್ಚದ ಕಾಮಗಾರಿ ಅರ್ಧಕ್ಕೆ ಬಿಟ್ಟು ಹೋಗಿದ್ದರು. ನಂತರ ಹೆಚ್ಚುವರಿಯಾಗಿ 418 ಕೋಟಿ ರೂ. ಅನುದಾನ ನೀಡಿ ಕಾಮಗಾರಿ ಪ್ರಾರಂಭಿಸಲಾಯಿತು.
  • ಚಿತ್ರದುರ್ಗ, ಚನ್ನಗಿರಿ, ಹೊಳೆಹೊನ್ನೂರು ಮತ್ತು ಶಿವಮೊಗ್ಗ ನಗರದಲ್ಲಿ ಬೈಪಾಸ್ ರಸ್ತೆ ನಿರ್ಮಾಣ, ಚಿತ್ರದುರ್ಗ, ಹೊಳಲ್ಕೆರೆ, ಶಿವಮೊಗ್ಗ ನಗರಕ್ಕೆ ರೈಲ್ವೆ ಮೇಲ್ಸೇತುವೆ, ಭದ್ರಾನದಿಗೆ ಸೇತುವೆ ನಿರ್ಮಾಣ ಕಾಮಗಾರಿಗಳಿಗೆ ಒಟ್ಟು 518 ಕೋಟಿ ರೂ. ವೆಚ್ಚ ಮಾಡಲಾಗಿದೆ.
  • ಅಂದಾಜು 5 ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲೆಗೆ ರಸ್ತೆ ಹಾಗೂ ಸೇತುವೆ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ 10 ರಿಂದ 15 ಸಾವಿರ ಕೋಟಿ ರೂ. ಅನುದಾನ ನೀಡಿದೆ.

ಬೈಪಾಸ್ ರಸ್ತೆ ನಿರ್ಮಾಣ ಹಂತದಲ್ಲಿರುವಾಗಲೇ ಅಪಘಾತಕ್ಕೀಡಾಗಿ ಮೃತಪಟ್ಟ ಪಟ್ಟಣದ ಪುಟ್ಟಪ್ಪ ಅವರ ಮನೆಗೆ ಸಂಸದ ರಾಘವೇಂದ್ರ ಭೇಟಿ ನೀಡಿದ್ದರು. ಕುಟುಂಬಕ್ಕೆ ಸಾಂತ್ವನ ಹೇಳಿದರು. 25 ಸಾವಿರ ರೂ. ನೆರವು ನೀಡಿದರು.

JNNCE-ADMISSION-2025-26

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ.ಧನಂಜಯ ಸರ್ಜಿ, ಡಿ.ಎಸ್.ಅರುಣ್, ಭಾರತಿ ಶೆಟ್ಟಿ, ದತ್ತಾತ್ರಿ, ಮಾಜಿ ಶಾಸಕ ಕೆ.ಜಿ.ಕುಮಾರಸ್ವಾಮಿ, ವೀರಭದ್ರಪ್ಪ ಪೂಜಾರಿ, ಶ್ರೀನಿವಾಸ್, ಮಲ್ಲೇಶಪ್ಪ, ಎ.ಕೆ.ರಮೇಶ್, ಕೆ.ಪಿ.ಕಿರಣ್ ಕುಮಾರ್, ರಾಜೇಶ್ ಪಟೇಲ್, ಕಲ್ಲಜ್ಜನಾಳ್ ಮಂಜುನಾಥ, ಸುಬ್ರಮಣಿ, ಕಿರಣ್, ಕುಮಾರ ನಾಯ್ಡು, ಯು.ವೆಂಕಟೇಶ್ ಸೇರಿ ಇನ್ನಿತರಿದ್ದರು.

ಇದನ್ನೂ ಓದಿ » ಮುಂದಿನ ಏಳು ದಿನ ಶಿವಮೊಗ್ಗ ಜಿಲ್ಲೆಗೆ ಸಾಲು ಸಾಲು ಎಚ್ಚರಿಕೆ, ಯಾವ್ಯಾವ ದಿನ ಎಷ್ಟಿರುತ್ತೆ ಮಳೆ?

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment