ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 14 DECEMBER 2022
ಶಿವಮೊಗ್ಗ : ವಿಮಾನ ನಿಲ್ದಾಣದ ಟರ್ಮಿನಲ್ (shimoga airport terminal) ಮುಂದೆ ಕೊಳ ಮತ್ತು ಕಾರಂಜಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ವಿಮಾನಯಾನ ಅಧಿಕಾರಿಗಳ ಸೂಚನೆ ಹಿನ್ನೆಲೆ ಈ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಸೋಗಾನೆ ವಿಮಾನ ನಿಲ್ದಾಣದ ಟರ್ಮಿನಲ್ (shimoga airport terminal) ಮುಂದೆ ಕೊಳ, ಕಾರಂಜಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ಟರ್ಮಿನಲ್ ಮುಂದೆ ಅಲಂಕಾರಕ್ಕಾಗಿ ಈ ಕೊಳ, ಕಾರಂಜಿ ನಿರ್ಮಿಸಲು ಯೋಜಿಸಲಾಗಿತ್ತು. ಈ ಹಿಂದೆ ಬಿಡುಗಡೆ ಮಾಡಿದ್ದ ಗ್ರಾಫಿಕಲ್ ವಿಡಿಯೋದಲ್ಲಿಯು ಕೊಳ, ಕಾರಂಜಿಯನ್ನು ತೋರಿಸಲಾಗಿತ್ತು.
ಕೊಳ, ಕಾರಂಜಿಯ ಕಾಮಗಾರಿ ನಡೆಯುತ್ತಿತ್ತು. ಇತ್ತೀಚೆಗೆ ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆಗೆ ಆಗಮಿಸಿದ್ದ ನಾಗರಿಕ ವಿಮಾನಯಾನ ಇಲಾಖೆ ಅಧಿಕಾರಿಗಳು ಕೊಳ, ಕಾರಂಜಿ ನಿರ್ಮಿಸದಂತೆ ಸೂಚನೆ ನೀಡಿದ್ದಾರೆ. ಕೊಳದಲ್ಲಿನ ನೀರು ಪಕ್ಷಿಗಳನ್ನು ಸೆಳೆಯಲಿದೆ. ವಿಮಾನ ನಿಲ್ದಾಣದ ಬಳಿ ಪಕ್ಷಿಗಳ ಹಾರಾಟ ಹೆಚ್ಚಿದಷ್ಟು ಅಪಾಯ. ಆದ್ದರಿಂದ ಕೊಳ, ಕಾರಂಜಿ ಯೋಜನೆ ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ಈಗ ವಿಮಾನ ನಿಲ್ದಾಣ ಮುಂಭಾಗ ಅಲಂಕಾರಕ್ಕಾಗಿ ಬದಲಿ ವ್ಯವಸ್ಥೆ ಮಾಡಲಾಗುತ್ತಿದೆ.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ, ಒಳಗೆ ಏನೇನಿದೆ? ಹೇಗಿದೆ? ಯಾವೆಲ್ಲ ಕಟ್ಟಡ ನಿರ್ಮಿಸಲಾಗಿದೆ?
ವಿಮಾನ ನಿಲ್ದಾಣದ ಆವರಣದಲ್ಲಿ ಪಕ್ಷಿಗಳನ್ನು ಸೆಳೆಯುವ ಕೊಳ, ಕಾರಂಜಿ, ಗಿಡ, ಮರಗಳು ಇರುವಂತಿಲ್ಲ. ಟೇಕಾಫ್ ಮತ್ತು ಟಚ್ ಡೌನ್ ಸಂದರ್ಭ ಪಕ್ಷಿಗಳು ವಿಮಾನಗಳ ಇಂಜಿನ್ ಗೆ ಸಿಲುಕಿ ಅಪಾಯಕ್ಕೆ ಎಡೆ ಮಾಡುವ ಸಾದ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ.