ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 14 DECEMBER 2022
ಶಿವಮೊಗ್ಗ : ಕಾಮಗಾರಿ ಮುಗಿದು ಕೆಲವೆ ತಿಂಗಳಲ್ಲಿ ಮುರಿದು ಬಿದ್ದ ರೇಲಿಂಗ್ (FOOT PATH RAILING). ನಗರದ ಅಲಂಕಾರಕ್ಕೆ ಬಳಸಿದ್ದ ರೇಲಿಂಗ್ ಅಂದಗೆಡಿಸಿದ ಗುಟ್ಕಾ ಪ್ರಿಯರು. ಇದು ನಗರದ ಗೋಪಿ ಸರ್ಕಲ್ ನಲ್ಲಿ ನಿರ್ಮಿಸಲಾಗಿರುವ ಸ್ಟೋನ್ ರೇಲಿಂಗ್ ದುಸ್ಥಿತಿ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಗೋಪಿ ಸರ್ಕಲ್ ಫುಟ್ ಪಾತ್ ಗೆ ಕಲ್ಲಿನ ರೇಲಿಂಗ್ ಅಳವಡಿಸಲಾಗಿದೆ. ಶ್ರೀನಿಧಿ ಟೆಕ್ಸ್ ಟೈಲ್ಸ್ ಮುಂಭಾಗ ಮತ್ತು ಎಂ.ಜಿ.ಪ್ಯಾಲೇಸ್ ಮುಂದೆ ಕಲ್ಲಿನ ರೇಲಿಂಗ್ ಹಾಕಲಾಗಿದೆ. ಸರ್ಕಲ್ ನ ಅಂದ ಹೆಚ್ಚಿಸಲು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಈ ರೇಲಿಂಗ್ ಅಳವಡಿಸಲಾಗಿತ್ತು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
(FOOT PATH RAILING)
ಕೆಲವೆ ತಿಂಗಳಲ್ಲಿ ದುಸ್ಥಿತಿ
ಕಾಮಗಾರಿ ಮುಗಿದು ಮೂರು ತಿಂಗಳು ಕಳೆಯುವುದರಲ್ಲಿ ಕಲ್ಲಿನ ರೇಲಿಂಗ್ ಗಳು ಪೀಸ್ ಪೀಸ್ ಆಗಿವೆ. ಕಂಬಗಳು ಒರಗಿ ನಿಂತಿವೆ. ಎಂ.ಜಿ.ಪ್ಯಾಲೇಸ್ ಮುಂಭಾಗದ ರೇಲಿಂಗ್ ಹಾನಿಯಾಗಿದೆ. ಸಾರ್ವಜನಿಕರು ಕಲ್ಲಿನ ರೇಲಿಂಗ್ ಗಳನ್ನು ಮುರಿದಿದ್ದಾರೆ. ಇವುಗಳು ತುಂಡಾಗಿ ಈಗ ಅಪಾಯಕಾರಿ ಸ್ಥಿತಿಗೆ ತಲುಪಿದೆ.
ನಗರದ ಅಂದ ಹೆಚ್ಚಿಸಲು ಕಲ್ಲಿನ ರೇಲಿಂಗ್ ನಿರ್ಮಿಸಲಾಗಿತ್ತು. ಅದರೆ ಇವುಗಳ ಮೇಲೆಯೆ ಗುಟ್ಕಾ ಉಗಿದು ಅಂದಗೆಡಿಸಲಾಗಿದೆ.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣ, ಪ್ರಮುಖ ಬದಲಾವಣೆ ಸೂಚಿಸಿದ ಕೇಂದ್ರದ ಅಧಿಕಾರಿಗಳು, ಏನದು?
PHOTO NEWS