ಇನ್ಮುಂದೆ ಶಿವಮೊಗ್ಗದ ಜನರಿಗು ತಟ್ಟಲಿದೆ ಟೋಲ್‌ ಬಿಸಿ, 2 ಕಡೆ ಟೋಲ್‌ ಪ್ಲಾಜಾ ರೆಡಿ, ಎಲ್ಲೆಲ್ಲಿದೆ? ಪರಿಣಾಮಗಳೇನು?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

SHIVAMOGGA LIVE NEWS | 24 FEBRUARY 2024

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

SHIMOGA : ಜಿಲ್ಲೆಯಲ್ಲಿ ಮೊದಲ ಬಾರಿಗೆ ಎರಡು ಟೋಲ್‌ ಗೇಟ್‌ ಸ್ಥಾಪಿಸಲಾಗಿದೆ. ಇನ್ಮುಂದೆ ಟೋಲ್‌ ಪಾವತಿಸಿ ಜನರು ಸಂಚರಿಸಬೇಕಾದ ಅನಿವಾರ್ಯತೆ ಇದೆ. ಈ ಮೊದಲಿನಿಂದಲು ಇದ್ದ ರಸ್ತೆಯಲ್ಲೇ ರಾಜ್ಯ ಸರ್ಕಾರ ಟೋಲ್‌ ಸ್ಥಾಪಿಸಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

toll plaza in Savalanga Road

ಶಿವಮೊಗ್ಗ – ಸವಳಂಗ ನಡುವೆ ಒಂದು ಟೋಲ್‌ ಗೇಟ್‌ ಸ್ಥಾಪಿಸಲಾಗಿದೆ. ಶಿಕಾರಿಪುರ – ಶಿರಾಳಕೊಪ್ಪ ನಡುವೆ ಇನ್ನೊಂದು ಟೋಲ್‌ ನಿರ್ಮಿಸಲಾಗಿದೆ.

ಹೇಗಿವೆ ಜಿಲ್ಲೆಯ ಮೊದಲ ಟೋಲ್‌ಗಳು?

ಶಿವಮೊಗ್ಗ – ಹಾನಗಲ್‌ ರಾಜ್ಯ ಹೆದ್ದಾರಿಯ ಸವಳಂಗ ಮತ್ತು ಸೀಗೆಕಣಿವೆಯಲ್ಲಿ ಟೋಲ್‌ಗಳನ್ನು ಸ್ಥಾಪಿಸಲಾಗಿದೆ. ಟೋಲ್‌ನಲ್ಲಿ ನಾಲ್ಕು ಪ್ರತ್ಯೇಕ ಗೇಟ್‌ಗಳನ್ನು ನಿರ್ಮಿಸಲಾಗಿದೆ. ಪ್ರತಿ ದಿಕ್ಕಿಗು ತಲಾ ಎರಡು ಗೇಟ್‌ ಇರಲಿದೆ. ಟೋಲ್‌ ಹಣ ಸಂಗ್ರಹಿಸುವವರಿಗೆ ಚಿಕ್ಕ ಕ್ಯಾಬಿನ್‌ ನಿರ್ಮಿಸಲಾಗಿದೆ. ಟೋಲ್‌ ಪ್ಲಾಜಾದಲ್ಲಿ ಬೆಳಕಿಗೆ ಲೈಟ್‌ಗಳು, ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪಕ್ಕದಲ್ಲಿ ಚಿಕ್ಕದಾಗಿ ಕಚೇರಿ ನಿರ್ಮಾಣ ಮಾಡಲಾಗಿದೆ. ಟೋಲ್‌ ಗೇಟ್‌ನಲ್ಲಿ ಮಾತ್ರ ರಸ್ತೆ ಅಗಲ ಮಾಡಲಾಗಿದೆ.

toll plaza in Savalanga Road

ಈ ಟೋಲ್‌ನ ಅಗತ್ಯವೇನು?

ರಸ್ತೆ ನಿರ್ವಹಣೆಗೆ ಟೋಲ್‌ ನಿರ್ಮಿಸಬೇಕು ಎಂಬ ಪ್ರಸ್ತಾವನೆಗೆ ರಾಜ್ಯ ಸರ್ಕಾರ 2017ರಲ್ಲಿ ಒಪ್ಪಿಗೆ ನೀಡಿತ್ತು. ರಾಜ್ಯದ ಒಟ್ಟು 19 ರಸ್ತೆಯಲ್ಲಿ 43 ಕಡೆ ಟೋಲ್‌ ನಿರ್ಮಿಸಲು ಸರ್ಕಾರ ಅಸ್ತು ಎಂದಿತ್ತು. ಅಂತೆಯೇ ಶಿವಮೊಗ್ಗ – ಹಾನಗಲ್‌ ರಾಜ್ಯ ಹೆದ್ದಾರಿ 57ರಲ್ಲಿ ಕೆಶಿಪ್‌ ವತಿಯಿಂದ ಎರಡು ಕಡೆ ಟೋಲ್‌ ನಿರ್ಮಿಸಲಾಗಿದೆ. ಹಾಗಾಗಿ ಇನ್ಮುಂದೆ ಶಿವಮೊಗ್ಗ – ಸವಳಂಗ – ಶಿಕಾರಿಪುರ ಮಾರ್ಗದಲ್ಲಿ ಸಂಚರಿಸುವವರು, ಶಿರಾಳಕೊಪ್ಪ – ಶಿಕಾರಿಪುರ ನಡುವಿನ ಸಂಚರಿಸುವ ವಾಹನ ಸವಾರರು ಟೋಲ್‌ ಪಾವತಿಸುವುದು ಅನಿವಾರ್ಯ.

toll plaza in Savalanga Road

ಟೋಲ್‌ ವಿರುದ್ಧ ಸಿಡಿದೆದ್ದ ಜನ

ರಾಜ್ಯ ಹೆದ್ದಾರಿಯನ್ನು ಹೊಸದಾಗಿ ನಿರ್ಮಿಸದೆ ಈ ಹಿಂದಿನಿಂದಲು ಇದ್ದ ರಸ್ತೆಗೆ ಟೋಲ್‌ ಕಟ್ಟಿಸಿಕೊಳ್ಳುತ್ತಿರುವ ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ – ‘ಶಿವಮೊಗ್ಗದಿಂದ ಬೆಂಗಳೂರಿಗೆ ಎರಡೂವರೆ ಗಂಟೆ ಸಾಕು’, ಇಲ್ಲಿದೆ ಸಚಿವ ನಿತಿನ್‌ ಗಡ್ಕರಿ ಭಾಷಣದ 4 ಪ್ರಮುಖಾಂಶ

ರಾಜ್ಯ ಹೆದ್ದಾರಿಗೆ ಟೋಲ್‌ ಹಾಕಲಾಗಿದೆ. ಎರಡು ಪಥದ ರಸ್ತೆ ಇದು. ಇದನ್ನೇನು ಹೊಸದಾಗಿ ನಿರ್ಮಿಸಿಲ್ಲ. ಈ ಮೊದಲಿನಿಂದಲು ಇರುವ ರಸ್ತೆಗೆ ಟೋಲ್‌ ಕಟ್ಟಿಸಿಕೊಳ್ಳುವ ಸರ್ಕಾರದ ನಿರ್ಧಾರ ಸರಿಯಾದುದ್ದಲ್ಲ.ತಾಯ್ನಾಡು ರಾಘವೇಂದ್ರ, ಕರವೇ ಗಜ ಸೇನೆ

toll plaza in Savalanga Road

ಟೋಲ್‌ಗಳ ಮೇಲೆ ಟೋಲ್ ಮಾಡಲಾಗುತ್ತಿದೆ‌. ಶಿವಮೊಗ್ಗದಿಂದ 18 ಕಿ.ಮೀ.ಗೆ ಒಂದು ಟೋಲ್ ನಿರ್ಮಿಸಲಾಗಿದೆ. ನಮಗೆ ಸಿಗುವ ಬಾಡಿಗೆಯಲ್ಲಿ ಡಿಸೇಲ್, ಆಟೋ ನಿರ್ವಹಣೆ ಅಂತಾ ಹಲವು ಖರ್ಚು ಇದೆ. ಇದರ ಮಧ್ಯೆ ಕುಟುಂಬ ನಿರ್ಹವಣೆಗೆ ಅಲ್ಪಸ್ವಲ್ಪ ದುಡ್ಡು ಉಳಿಸುವುದೆ ಕಷ್ಟ. ಅಂತಹುದರಲ್ಲಿ ಟೋಲ್‌ಗಳಿಗೆ ಹಣ ಸುರಿದರೆ ನಮ್ಮ ಕುಟುಂಬದ ಕಥೆ ಏನು?ಜಬೀವುಲ್ಲಾ, ಗೂಡ್ಸ್ ಆಟೋ ಚಾಲಕ

ಚಿನ್ನಿಕಟ್ಟೆ ಜೋಗದಲ್ಲಿ ನಮ್ಮ ಜಮೀನಿದೆ. ಶಿವಮೊಗ್ಗದಿಂದ ನಿತ್ಯ ಅಲ್ಲಿಗೆ ಹೋಗಿ ಬರಬೇಕು. ನಾನು ಹುಟ್ಟಿದಾಗಿನಿಂದ ಈ ರಸ್ತೆ ಇದೆ. ಈಗ ಈ ರಸ್ತೆಯಲ್ಲಿ ಸಂಚರಿಸಲು ಟೋಲ್‌ ಪಾವತಿಸಬೇಕಾ? ರೈತರು ಓಡಾಡುವ ಜಾಗದಲ್ಲಿ ಟೋಲ್‌ ಗೇಟ್‌ ಹಾಕಿರುವುದು ಸರಿಯಲ್ಲ.ಫಯಾಜ್, ರೈತ

ಟಿಕೆಟ್‌ ದರ, ಬಾಡಿಗೆ ಹೆಚ್ಚಳದ ಆತಂಕ

ಶಿವಮೊಗ್ಗ – ಶಿಕಾರಿಪುರ – ಶಿರಾಳಕೊಪ್ಪ ಮಧ್ಯೆ ಹತ್ತಾರು ಬಸ್ಸುಗಳು ನಿತ್ಯ ಸಂಚರಿಸುತ್ತಿವೆ. ಡಿಸೇಲ್‌ ದರ ಹೆಚ್ಚಳ, ಶಕ್ತಿ ಯೋಜನೆಯ ಪರಿಣಾಮ, ಟ್ಯಾಕ್ಸ್‌, ಬಸ್ಸುಗಳ ನಿರ್ವಹಣೆ ಖರ್ಚು ನಿಭಾಯಿಸಲು ಮಾಲೀಕರು ಹೆಣಗಾಡುತ್ತಿದ್ದಾರೆ. ಈ ಮಧ್ಯೆ ನಿತ್ಯ ಪ್ರತಿ ಟ್ರಿಪ್‌ಗು ಟೋಲ್‌ ಕಟ್ಟುವ ಪರಿಸ್ಥಿತಿ ಸೃಷ್ಟಿಯಾಗಿದ್ದು, ಟಿಕೆಟ್‌ ದರ ಹೆಚ್ಚಳ ಮಾಡಲಾಗುತ್ತದೆಯೆ ಎಂದು ಪ್ರಯಾಣಿಕರು ಆತಂಕಕ್ಕೀಡಾಗಿದ್ದಾರೆ. ಇನ್ನು, ಗೂಡ್ಸ್‌ ವಾಹನಗಳು ಕೂಡ ಟೋಲ್‌ ದರ ನಿಭಾಯಿಸಲು ಬಾಡಿಗೆ ಹೆಚ್ಚಳ ಮಾಡಬೇಕಾಗುತ್ತದೆ. ಇದರಿಂದ ಗ್ರಾಹಕರನ್ನು ಕಳೆದುಕೊಳ್ಳುವ ಭೀತಿಯು ಇದೆ.

Toll Plaza near Shikaripura

ಶಿವಮೊಗ್ಗ – ಶಿಕಾರಿಪುರ ರಸ್ತೆಯಲ್ಲಿ ಎರಡು ಟೋಲ್ ಆಗುತ್ತಿದೆ. ಕಾಂಗ್ರೆಸ್ ಟೋಲ್ ಹಾಕಿ ಹಣ ವಸೂಲಿ ಮಾಡಲು ಹೊರಟಿದೆ. ಟೋಲ್ ಆಗುತ್ತಿರೋದನ್ನು ನಾವು ವಿರೋಧಿಸುತ್ತೇವೆ.ಬಿ.ವೈ.ರಾಘವೇಂದ್ರ, ಸಂಸದ

ತೀವ್ರ ವಿರೋಧದ ನಡುವೆ ಜಿಲ್ಲೆಯಲ್ಲಿ ಎರಡು ಟೋಲ್‌ ಸ್ಥಾಪನೆಯಾಗಿವೆ. ರಸ್ತೆ ನಿರ್ಮಾಣಕ್ಕೆ ಪಡೆದ ಸಾಲ ತೀರಿಸಲು ಸುಂಕ ಸಂಗ್ರಹಿಸಲಾಗುತ್ತಿದೆ ಎಂಬ ಆರೋಪವಿದೆ. ಕೋವಿಡ್‌ ಕಾರಣಕ್ಕೆ ಟೋಲ್‌ ಗೇಟ್‌ ಸ್ಥಾಪನೆ ವಿಳಂಬವಾಗಿತ್ತು. ಈಗ ಜಿಲ್ಲೆಯಲ್ಲಿ ಮೊದಲ ಬಾರಿ ಟೋಲ್‌ ಗೇಟ್‌ಗಳನ್ನು ಸ್ಥಾಪಿಸಲಾಗಿದ್ದು ದುಬಾರಿ ದುನಿಯಾದಲ್ಲಿ ಜಿಲ್ಲೆಯ ವಾಹನ ಸವಾರರಿಗೂ ಟೋಲ್‌ ಬರೆ ಬೀಳಲಿದೆ.

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment