ಮತ್ತೆ ಕಾಡಾನೆ ಹಾವಳಿ, ಅಡಕೆ ಸಸಿಗಳು, ತೆಂಗಿನ ಮರಗಳು ನೆಲಸಮ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ಕಾಡಾನೆಗಳು (WILD ELEPHANTS) ತೋಟಕ್ಕೆ (FARM) ನುಗ್ಗಿ ಅಡಕೆ (ADIKE) ಸಿಸಿಗಳು, ತೆಂಗಿನ ಮರಗಳನ್ನು ಹಾಳು ಮಾಡಿವೆ. ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಕಾಡಾನೆ ಉಪಟಳದಿಂದ ಮುಕ್ತಿ ನೀಡುವಂತೆ ಆಗ್ರಹಿಸಿದ್ದಾರೆ.

TODAY NEWS PARAGRAPH

ಶಿವಮೊಗ್ಗ ತಾಲೂಕು ಕುಸ್ಕೂರು ಗ್ರಾಮದ ಪ್ರಭು ನಾಯ್ಕ ಎಂಬುವವರ ತೋಟಕ್ಕೆ ನುಗ್ಗಿರುವ ಕಾಡಾನೆಗಳು 20 ಅಡಕೆ ಸಸಿಗಳು, 5 ತಂಗಿನ ಮರುಗಳನ್ನು ಹಾಳುಮಾಡಿವೆ. ಆನೆಗಳು ನಿರಂತರ ತೋಟಕ್ಕೆ ನುಗ್ಗಿ ಅಡಕೆ, ತೆಂಗಿನ ಸಸಿ, ಬಾಳೆಯನ್ನು ನಾಶ ಮಾಡುತ್ತಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಹಾಲ್ ಲಕ್ಕವಳ್ಳಿ, ಕಡೇಕಲ್, ಕುಸ್ಕೂರು, ಯರಗನಾಳ್ ಪ್ರದೇಶದಲ್ಲಿ ಕಾಡಾನೆ ಹಾವಳಿ ಮತ್ತೆ ಶುರುವಾಗಿದೆ. ತೋಟಕ ನುಗ್ಗಿ ಅಡಕೆ, ತೆಂಗಿನ ಮರಗಳ ಬೆಳೆದ ಬೆಳೆಗಳನ್ನು ಹಾನಿ ಮಾಡುತ್ತಿವೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ನಿರಂತರವಾಗಿ ಕಾಡಾನೆಗಳ ಕಾಟ ಹೆಚ್ಚುತ್ತಿದೆ. ಕೊರೊನಾಗಿಂತ ಮುಂಚೆ ಸಕ್ರೆಬೈಲು ಬಿಡಾರದಿಂದ ಆನೆಗಳನ್ನು ತಂದು ಕಾಡಾನೆಗಳನ್ನು ಭದ್ರಾ ಅಭಯಾರಣ್ಯಕ್ಕೆ ಓಡಿಸಲಾಗಿತ್ತು. ಆದರೆ ಎರಡೇ ದಿನಕ್ಕೆ ಅವುಗಳು ವಾಪಸ್ ಬಂದಿದ್ದವು.

Shimoga Nanjappa Hospital

ಪ್ರತಿವರ್ಷ ಒಂಟಿ ಸಲಗ ಬರುತ್ತಿತ್ತು. ಕಳೆದ ವರ್ಷದಿಂದ ಎರಡು ಆನೆಗಳು ಕಾಣಿಸಿಕೊಳ್ಳಲು ಆರಂಭಿಸಿವೆ ಎಂದು ರೈತರು ತಿಳಿಸಿದ್ದಾರೆ. ಕಾಡಾನೆಗಳ ಹಾವಳಿಯಿಂದ ಜನರು ಆತಂಕಗೊಂಡಿದ್ದಾರೆ.

ದನ್ನೂ ಓದಿ – ಹೆದ್ದಾರಿಯಲ್ಲಿ ಅಪಘಾತ, ಹಸು ಸಾವು, ನಡುರಸ್ತೆಯಲ್ಲೇ ಬಿಕ್ಕಿ ಬಿಕ್ಕಿ ಅತ್ತ ಮಕ್ಕಳು

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment