SHIVAMOGGA LIVE NEWS | 16 FEBRURARY 2023
SORABA : ತಾಲೂಕಿನ ಚಂದ್ರಗುತ್ತಿಯ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಶೀ ರೇಣುಕಾಂಬ ದೇವಸ್ಥಾನದ ಹುಂಡಿ (Hundi) ಎಣಿಕೆ ಕಾರ್ಯ ಆಡಳಿತ ಮಂಡಳಿ ಕಚೇರಿಯಲ್ಲಿ ನಡೆಯಿತು. 25 ಲಕ್ಷ ರೂ. ಕಾಣಿಕೆ ಸಂಗ್ರಹವಾಗಿದೆ.
ತಾಲೂಕು ದಂಡಾಧಿಕಾರಿ ಹುಸೇನ್ ಸರಕಾವಸ್ ಅವರ ಸಮ್ಮುಖದಲ್ಲಿ ಹುಂಡಿ ಹಣ ಎಣಿಕೆ ಕಾರ್ಯ ನಡೆಸಲಾಯಿತು. ಫೆಬ್ರವರಿ ತಿಂಗಳಿನಲ್ಲಿ ಹುಂಡಿ ಹಣ ಏಣಿಸಿದಾಗ 25,67,710 ರೂ., ಸಂಗ್ರಹವಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
2022 ಮಾರ್ಚ್, ಮೇ, ಜುಲೈ, ಸೆಪ್ಟೆಂಬರ್, ನವೆಂಬರ್ ತಿಂಗಳಿನಲ್ಲಿ ಹುಂಡಿ (Hundi) ಹಣ ಎಣಿಕೆ ಮಾಡಿದಾಗ 94,65,575 ರೂ, ಸಂಗ್ರಹವಾಗಿತ್ತು. ಕೇವಲ 12 ತಿಂಗಳಗಳಲ್ಲಿ ದೇವಸ್ಥಾನದ ಗರಿಷ್ಠ ಮೊತ್ತದ ಕಾಣಿಕೆ ಹಣ 1,20,33,285 ರೂ., ಸಂಗ್ರಹವಾಗಿದೆ. ಎಣಿಕೆ ಕಾರ್ಯ ನಡೆಯುವ ಕೊಠಡಿ ಸುತ್ತ ಸಿ.ಸಿ ಕ್ಯಾಮೆರಾ ಆಳವಡಿಸಲಾಗಿತ್ತು.
ಇದನ್ನೂ ಓದಿ – ಬಾಕ್ಸ್ ತುಂಬಾ ದುಡ್ಡಿದೆ ಅಂತಾ ಕೊಟ್ಟರು, ಎಣಿಸಲು ತೆಗೆದಾಗ ಕಾದಿತ್ತು ಶಾಕ್, ಇಂತವರ ಬಗ್ಗೆ ಹುಷಾರ್
ಹುಂಡಿ ಎಣಿಕೆ ಕಾರ್ಯದಲ್ಲಿ ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿಗಳು, ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಮುಜರಾಯಿ ಇಲಾಖೆ ವಿಷಯ ನಿರ್ವಾಹಕರು, ತಾಲೂಕು ಕಂದಾಯ ಇಲಾಖೆ ಗ್ರಾಮ ಲೆಕ್ಕಿಗರು ಮತ್ತು ದೇವಸ್ಥಾನದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ಇದನ್ನೂ ಓದಿ – ಶಿವಮೊಗ್ಗದ ಆಟೋಗಳಿಗೆ ಪೊಲೀಸರಿಂದ 3 ಸೂಚನೆ, ಡಿಸ್ ಪ್ಲೇ ಕಾರ್ಡ್ ವಿತರಣೆ, ಏನಿದು? ಕಾರ್ಡಿನಲ್ಲಿ ಏನೇನಿದೆ?
ಭಕ್ತರ ಮೂಲಕ ದೇವಸ್ಥಾನಕ್ಕೆ ಕೋಟ್ಯಾಂತರ ಆದಾಯ ಸಂಗ್ರವಾಗುತ್ತದೆ. ಆದರೆ ಬರುವ ಭಕ್ತರಿಗೆ ಕುಡಿಯುವ ನೀರು, ವಸತಿ, ಶೌಚಾಲಯ ಮತ್ತು ಮೂಲ ಸೌಕರ್ಯಗಳು ಇಲ್ಲ. ಕ್ಷೇತ್ರ ಅಭಿವೃದ್ಧಿ ಆಗುತ್ತಿಲ್ಲ ಎಂದು ಭಕ್ತರು ಆರೋಪಿಸಿದ್ದಾರೆ.