ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 20 JANUARY 2023
SORABA | ಪುರಸಭೆ ಅಧಿಕಾರಿಗಳು ವಶಕ್ಕೆ ಪಡೆದಿರುವ ಕಟ್ಟಡ ಕಾರ್ಮಿಕನ ಕೆಲಸದ ಸಾಮಾಗ್ರಿಗಳನ್ನು ಹಿಂತಿರುಗಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಕನ್ ಸ್ಟ್ರಕ್ಷನ್ ವರ್ಕಸ್ (construction workers) ಸೆಂಟ್ರಲ್ ಯೂನಿಯನ್ ತಾಲೂಕು ಘಟಕದ ವತಿಯಿಂದ ಪುರಸಭೆ ಮುಖ್ಯಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಹಿರೇಶಕುನ ಗ್ರಾಮದಲ್ಲಿ ಆಕಾಶ್ ಎಂಬವವರ ನಿರ್ದೇಶನದದಂತೆ ನಿವೇಶನವೊಂದರಲ್ಲಿ ಮೇಸ್ತ್ರಿ ಎಸ್.ರವಿ ಅವರು ಕಟ್ಟಡ ನಿರ್ಮಾಣ ಕೆಲಸದಲ್ಲಿ ತೊಡಗಿದ್ದರು. ಅಷ್ಟರಲ್ಲಿ ಅಪಘಾತ ಸಂಭವಿಸಿ ಗಾಯಗೊಂಡಿದ್ದ ಹಿನ್ನೆಲೆ ರವಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ನಿವೇಶನದ ಕುರಿತು ತಂಟೆ ತರಕಾರರು ಶುರುವಾಗಿದ್ದು, ಪುರಸಭೆ ಅಧಿಕಾರಿಗಳು ಮೇಸ್ತ್ರಿ ರವಿ ಅವರಿಗೆ ಸಂಬಂಧಿಸಿದ ಕೆಲಸದ ಸಾಮಗ್ರಿಗಳನ್ನು ವಶಕ್ಕೆ ಪಡೆದಿದ್ದಾರೆ. 6 ತಿಂಗಳಾದರು ಅದನ್ನು ಹಿಂತಿರುಗಿಸಿಲ್ಲ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಪ್ರಶಾಂತ್, ಗೌರವಾಧ್ಯಕ್ಷ ಅರ್ಜುನ್, ಕಾರ್ಯಕದರ್ಶಿ ಅಬೆಲ್, ಖಜಾಂಚಿ ಷಣ್ಮು, ಕೆರಿಯಪ್ಪ, ಅಣ್ಣಪ್ಪ, ಇರ್ಫಾನ್, ನಾಗರಾಜ, ಪುರಸಭೆ ಸದಸ್ಯ ಪ್ರಭು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಇದನ್ನೂ ಓದಿ – ರಾತ್ರಿ ಜಮೀನಿಗೆ ಹೋದವರು ಬೆಳಗ್ಗೆವರೆಗೆ ಮನೆಗೆ ಬರಲಿಲ್ಲ, ಹುಡುಕಿ ಹೋದವರಿಗೆ ಸಿಕ್ಕಿದ್ದು ರೈತನ ಮೃತದೇಹ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422