ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SORABA NEWS | 20 ಸೆಪ್ಟಂಬರ್ 2020
ಸೊರಬದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಭರ್ಜರಿ ದಾಳಿ ನಡೆಸಿದ್ದಾರೆ. ಬಗರ್ ಹುಕುಂ ಜಮೀನಿನಲ್ಲಿ ಬೆಳೆದಿದ್ದ ಸುಮಾರು ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ.
ದಾಳಿಯಾಗಿದ್ದು ಎಲ್ಲಿ?
ಸೊರಬ ತಾಲೂಕಿನ ಕಣ್ಣೂರು ಗ್ರಾಮದ ಬಗರ್ ಹುಕುಂ ಜಮೀನಿನಲ್ಲಿ ಗಾಂಜಾ ಬೆಳೆದಿರುವ ಕುರಿತು ಖಚಿತ ಮಾಹಿತಿ ಲಭ್ಯವಾಗಿತ್ತು. ಹಾಗಾಗಿ ಸುಮಾರು 30 ಅಧಿಕಾರಿಗಳು ದಿಢೀರ್ ದಾಳಿ ನಡೆಸಿ, ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಶುಂಠಿ ಗಿಡಗಳ ನಡುವೆ ಗಾಂಜಾ ಗಿಡಗಳನ್ನು ಬೆಳೆಯಾಗಿತ್ತು.
ಏಳೆಂಟು ಅಡಿ ಎತ್ತರ
ಗಾಂಜಾ ಗಿಡಗಳು ಏಳೆಂಟು ಅಡಿ ಎತ್ತರ ಬೆಳೆದಿದ್ದವು. ಹೂವು ಬಿಟ್ಟಿದ್ದವು. ಸೊರಬದ ಕಣ್ಣೂರು ಗ್ರಾಮದ ಗಂಗಾಧರಪ್ಪ, ಪರಶುರಾಮಪ್ಪ, ಹುಚ್ಚರಾಯಪ್ಪ ಅವರು ಇವುಗಳನ್ನು ಬೆಳೆದಿದ್ದರು ಎಂದು ಅಬಕಾರಿ ಇಲಾಖೆ ತಿಳಿಸಿದೆ. ಬುಡ ಸಹಿತ ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ.
https://www.facebook.com/liveshivamogga/videos/1809157195922944/?t=2
ಐದೂವರೆ ಲಕ್ಷ ಮೌಲ್ಯದ್ದು
ಇವತ್ತು ವಶಕ್ಕೆ ಪಡೆಯಲಾಗಿರುವ ಗಾಂಜಾ ಗಿಡಗಳ ಮೌಲ್ಯ ಸುಮಾರು 5.50 ಲಕ್ಷ ರೂ. ಎಂದು ಅಂದಾಜು ಮಾಡಲಾಗಿದೆ. ಅಬಕಾರಿ ಇಲಾಖೆ ಡಿಸಿ ಕ್ಯಾಪ್ಟನ್ ಅಜಿತ್ ಕುಮಾರ್ ಅವರ ನೇತೃತ್ವದಲ್ಲಿ, ಜಿಲ್ಲಾ ತಂಡದ ಅಬಕಾರಿ ನಿರೀಕ್ಷಕ ಹನುಮಂತಪ್ಪ, ಅಬಕಾರಿ ಉಪನಿರೀಕ್ಷಕ ಜಾನ್.ಪಿ.ಜೆ, ಸೊರಬ ವಲಯದ ಅಬಕಾರಿ ನಿರೀಕ್ಷಕ ಅಣ್ಣಪ್ಪ, ಸಿಬ್ಬಂದಿಗಳಾದ ಚಂದ್ರಪ್ಪ, ರಾಜಮ್ಮ, ರವೀಂದ್ರ ಪಾಟೀಲ್, ಗುರುಮೂರ್ತಿ, ಮುದಾಸಿರ್ ಸೇರಿದಂತೆ ಸೊರಬ, ಸಾಗರ ಮತ್ತು ಶಿವಮೊಗ್ಗ ವಲಯಗಳ ಒಟ್ಟು 30 ಅಧಿಕಾರಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422