ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SORABA NEWS, 30 OCTOBER 2024 : ಚಂದ್ರಗುತ್ತಿ ಶ್ರೀ ರೇಣುಕಾಂಬಾ ದೇವಿ ದೇವಾಲಯದ ಹುಂಡಿಯಲ್ಲಿನ ಒಡವೆಗಳ (Jewels) ಮೌಲ್ಯಮಾಪನಾ ನಡೆದಿದ್ದು 1 ಕೆ.ಜಿ.752 ಗ್ರಾಂ ಬಂಗಾರ, 121 ಕೆ.ಜಿ. 480 ಗ್ರಾಂ ಬೆಳ್ಳಿ, 3.60 ಕೆ.ಜಿ ಪಂಚಲೋಹದ ವಸ್ತುಗಳು ಸಂಗ್ರಹವಾಗಿವೆ.
ಹರಕೆ ಹಾಗೂ ಕಾಣಿಕೆ ರೂಪದಲ್ಲಿ ಭಕ್ತರು ಸಲ್ಲಿಸಿದ ಬಂಗಾರ ಮತ್ತು ಬೆಳ್ಳಿಯ ಒಡವೆ ಮತ್ತು ನಾಣ್ಯಗಳ ಎಣಿಕೆ ಕಾರ್ಯ ರೇಣುಕಾಂಬಾ ಸಭಾ ಭವನದಲ್ಲಿ ಮಂಗಳವಾರ ನಡೆಯಿತು. ಸಾಗರ ಉಪವಿಭಾಗಾಧಿಕಾರಿ ಡಾ. ಯತೀಶ್ ಸಮ್ಮುಖದಲ್ಲಿ ಎಣಿಕೆ ಮಾಡಲಾಯಿತು.
8 ವರ್ಷದ ಬಳಿಕ ಒಡವೆ ಎಣಿಕೆ
8 ವರ್ಷದ ಬಳಿಕ ಕಾಣಿಕೆ ರೂಪದ ಒಡವೆಗಳ ಎಣಿಕೆ ಕಾರ್ಯ ನಡೆದಿದ್ದು ಭಕ್ತರು ದೇವಿಗೆ ಹರಕೆ ಸಲ್ಲಿಸುವಾಗ ಒಡವೆಯನ್ನು ಹೆಸರಿಸಿ ರಸೀದಿ ಪಡೆದಿದ್ದು ಅವುಗಳ ಕ್ರಮ ಸಂಖ್ಯೆಯ ಆಧಾರದ ಮೇಲೆ ಎಣಿಕೆ ಮಾಡಲಾಯಿತು. ಕೆಲವರು ಹುಂಡಿಯಲ್ಲಿ ಕಾಣಿಕೆ ರೂಪದಲ್ಲಿ ಹಾಕಿದ ಹಣದ ಎಣಿಕೆಯೂ ನಡೆಯಿತು.
ಭಕ್ತರು ಏನೇನೆಲ್ಲ ಅರ್ಪಿಸಿದ್ದರು?
ಭಕ್ತರು ಬೆಳ್ಳಿಯ ತಂಬಿಗೆ, ವಿವಿಧ ರೂಪದ ಬೆಳ್ಳಿಯ ದೀಪ, ದೇವಿಯ ಮುಖವಾಡ, ಬಂಗಾರದ ಓಲೆ, ಬೇವಿನ ಗುಂಡಿನ ಸರ, ರಿಂಗ್‌ಗಳು, ಚೈನ್ ಸೇರಿದಂತೆ ವಿವಿಧ ರೀತಿಯ ಒಡವೆಗಳನ್ನು ಸಲ್ಲಿಸಿದ್ದರು. ಎಣಿಕೆ ಕಾರ್ಯ ನಡೆಯುವ ಕೊಠಡಿ ಸುತ್ತ ಸಿಸಿ ಕ್ಯಾಮರಾ ಆಳವಡಿಸಲಾಗಿತ್ತು.
ಇದನ್ನೂ ಓದಿ » ಫೋನ್ ಪೇ ಹೆಸರಲ್ಲಿ ಬಂತು ಮೆಸೇಜ್, ಕ್ಲಿಕ್ ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್
ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಪ್ರಮೀಳಾ, ಶಿರಸ್ತೇದಾರ್ ಎಸ್.ನಿರ್ಮಲಾ, ತಹಸೀಲ್ದಾರ್ ಮಂಜುಳಾ, ನಾಡಕಚೇರಿ ಉಪ ತಹಸೀಲ್ದಾರ್ ಲಲಿತಾ, ಮುಜರಾಯಿ ಇಲಾಖೆ ವಿಷಯ ನಿರ್ವಾಹಕಿ ಎಂ.ಶೃತಿ ಹಾಗೂ ಕಂದಾಯ ಇಲಾಖೆ ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕರು, ದೇವಸ್ಥಾನದ ಸಿಬ್ಬಂದಿ ಪಾಲ್ಗೊಂಡಿದ್ದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422