ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 24 DECEMBER 2022
ಸೊರಬ : ತುಡಿನೀರು ಗ್ರಾಮದ ಸಲೀಂ (25) ಕೊಲೆ (murder case) ಪ್ರಕರಣವನ್ನು ಭೇದಿಸುವಲ್ಲಿ ಆನವಟ್ಟಿ ಪೊಲೀಸರು ಯಶಸ್ವಿಯಾಗಿದ್ದಾರೆ. ಸಲೀಂನ ಸಹೋದರ ಮತ್ತು ಆತನ ಸ್ನೇಹಿತನನ್ನು ಬಂಧಿಸಿದ್ದಾರೆ.

ಡಿ.16ರಂದು ತುಡಿನೀರು ಗ್ರಾಮದ ಹಳ್ಳವೊಂದರ ಪಕ್ಕದ ಪೊದೆಯಲ್ಲಿ ಸಲೀಂನ ಮೃತದೇಹ ಪತ್ತೆಯಾಗಿತ್ತು. ಆತನ ತಲೆ ಮತ್ತು ಎಡಗಾಲಿನ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಸಂಬಂಧ ಆನವಟ್ಟಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದರು.
(murder case)
ಅಣ್ಣ, ಸ್ನೇಹಿತನ ಬಂಧನ
ತನಿಖೆ ವೇಳೆ ಸಲೀಂನ ಸಹೋದರ ರಫೀಕ್ ಮತ್ತು ಆತನ ಸ್ನೇಹಿತ ಸಂತೋಷ್ ಎಂಬುವವರು ಕೊಲೆ ಮಾಡಿರುವುದು ಗೊತ್ತಾಗಿದೆ. ಇಬ್ಬರನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ರಫೀಕ್, ಸಲೀಂನ ಕೊಲೆಗೆ ಎರಡು ಕಾರಣ ಬಾಯಿಬಿಟ್ಟಿದ್ದಾನೆ.
ಇದನ್ನೂ ಓದಿ – ಕಾರಲ್ಲಿ ಬಂದು ಬಾಲಕನ ಕಿಡ್ನಾಪ್, ಅಡಕೆ ವ್ಯಾಪಾರಿ ಸೇರಿ ಭದ್ರಾವತಿ, ಶಿವಮೊಗ್ಗ, ಸಾಗರದ ಐವರು ಅರೆಸ್ಟ್
ರಫೀಕ್ ಮತ್ತು ಸಲೀಂ ನಡುವೆ ಜಮೀನಿನ ವಿಚಾರವಾಗಿ ಆಗಾಗ ಜಗಳವಾಗುತ್ತಿತ್ತು. ಇದು ಇಬ್ಬರ ನಡುವೆ ದ್ವೇಷಕ್ಕೆ ಕಾರಣವಾಗಿತ್ತು. ಇನ್ನು ರಫೀಕ್ ಮನೆಯಲ್ಲಿ ಇಲ್ಲದ ವೇಳೆ ಆತನ ಪತ್ನಿ ಜೊತೆಗೆ ಸಲೀಂ ಅಸಭ್ಯವಾಗಿ ನಡೆದಕೊಳ್ಳುತ್ತಿದ್ದ ಎಂದು ಆರೋಪಿಸಲಾಗಿದೆ. ಇದೆ ಕಾರಣಕ್ಕೆ ಆತನ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ರಫೀಕ್ ಹೇಳಿದ್ದಾನೆ.
ಡಿ.16ರಂದು ಬೆಳಗಿನ ಜಾವ ಜಮೀನಿನಲ್ಲಿ ಮಲಗಿದ್ದ ಸಲೀಂ ತಲೆಗೆ ದೊಣ್ಣೆಗಳಿಂದ ಬಲವಾಗಿ ಹೊಡೆದು ಕೊಲೆ ಮಾಡಲಾಗಿದೆ. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಸಲೀಂನ ಕಾಲುಗಳನ್ನು ಬಟ್ಟೆಯಿಂದ ಕಟ್ಟಿ, ಮೃತದೇಹವನ್ನು ಪೊದೆಯಲ್ಲಿ ಬಿಸಾಕಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LATEST NEWS
- ಶಿವಮೊಗ್ಗ ಜಿಲ್ಲೆಯ ರೈತರ ಮಕ್ಕಳಿಗೆ 10 ತಿಂಗಳು ತರಬೇತಿ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

- ಹೊಂಬುಜದಲ್ಲಿ ಕುಂಕುಮೋತ್ಸವದ ಓಕಳಿಯಲ್ಲಿ ಮಿಂದೆದ್ದ ಭಕ್ತರು

- ರೈಲಿಗೆ ಸಿಲುಕಿ 74 ವರ್ಷದ ವ್ಯಕ್ತಿ ಸಾವು, ಹೇಗಾಯ್ತು ಘಟನೆ?

- ದ್ವಿತೀಯ ಪಿಯುಸಿ ಉತ್ತರಪತ್ರಿಕೆ ಮೌಲ್ಯಮಾಪನ ಬಹಿಷ್ಕರಿಸುವ ಎಚ್ಚರಿಕೆ, ಕಾರಣವೇನು?

- ನಿಧಿ ಆಪ್ಕೆ ನಿಕಟ್ 2.0, ತೀರ್ಥಹಳ್ಳಿ ಮತ್ತು ದಾವಣಗೆರೆಯಲ್ಲಿ ಮಹತ್ವದ ಕಾರ್ಯಕ್ರಮ

About The Editor
ನಿತಿನ್ ಆರ್.ಕೈದೊಟ್ಲು

CLICK & JOIN – SHIVAMOGGA LIVE COMMUNITY












