ಗಂಡನೊಂದಿಗೆ ಜಗಳದ ವೇಳೆ ಹೆಂಡತಿಗೆ ಗಂಭೀರ ಗಾಯ, ಸಾವು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 16 MARCH 2024

SORABA : ಹಣದ ವಿಚಾರವಾಗಿ ಪತಿ, ಪತ್ನಿ ಮಧ್ಯೆ ಗಲಾಟೆಯಾಗಿದ್ದು ಗಂಭೀರ ಗಾಯಗೊಂಡಿದ್ದ ಪತ್ನಿ ಮೃತಪಟ್ಟಿದ್ದಾಳೆ. ಸೊರಬ ತಾಲೂಕು ಮಳಲಿಕೊಪ್ಪ ಗ್ರಾಮದಲ್ಲಿ ಘಟನೆ ಸಂಭವಿಸಿದೆ.

ಚಂದ್ರಾನಾಯಕ್‌ ಮತ್ತು ಕವಿತಾ ಬಾಯಿ ಮಧ್ಯೆ ಮಾ.9ರಂದು ಹಣದ ವಿಚಾರವಾಗಿ ಗಲಾಟೆಯಾಗಿತ್ತು. ಈ ಸಂದರ್ಭ ಚಂದ್ರಾನಾಯಕ್‌ ದೊಣ್ಣೆಯಿಂದ ಕವಿತಾ ಬಾಯಿ ಕುತ್ತಿಗೆಗೆ ಹೊಡೆದಿದ್ದ. ಇದರಿಂದ ಕವಿತಾ ಬಾಯಿ ಗಂಭೀರ ಸ್ಥಿತಿಗೆ ತಲುಪಿದ್ದರು. ಅವರನ್ನು ಮಂಗಳೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮೃತಪಟ್ಟಿದ್ದಾರೆ. ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಚಂದ್ರಾನಾಯಕ್‌ನನ್ನು ಬಂಧಿಸಲಾಗಿದೆ.

ಇದನ್ನೂ ಓದಿ – ಸ್ವತಂತ್ರವಾಗಿ ಸ್ಪರ್ಧೆಯ ನಿರ್ಧಾರ ಪ್ರಕಟಿಸಿದ ಈಶ್ವರಪ್ಪ, ನಿರ್ಧಾರಕ್ಕೆ ಕಾರಣವೇನು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : March 16, 2024

Leave a Comment