ಐಎಎಸ್‌ ಕನಸು ಹೊತ್ತ ತೀರ್ಥಹಳ್ಳಿಯ ಅನಘ ರಾಜ್ಯಕ್ಕೆ ಎರಡನೇ ರ‍್ಯಾಂಕ್‌

ಶಿವಮೊಗ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ತೀರ್ಥಹಳ್ಳಿಯ ವಾಗ್ದೇವಿ ಇಂಗ್ಲೀಷ್‌ ಪ್ರೌಢಶಾಲೆಯ ವಿದ್ಯಾರ್ಥಿನಿ ಅನಘ.ಕೆ.ಎಸ್‌ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ಅಲ್ಲದೆ ಜಿಲ್ಲೆಗೆ ಟಾಪರ್‌ (topper) ಅನಿಸಿಕೊಂಡಿದ್ದಾರೆ.

ಅನಘ.ಕೆ.ಎಸ್‌ 624 ಅಂಕ ಪಡೆದಿದ್ದಾರೆ. ಇವರು ತೀರ್ಥಹಳ್ಳಿ ತಾಲೂಕು ಕೋಣಂದೂರು ಸಮೀಪದ ಮೇಲಿನ ಕಡಗೋಡು ನಿವಾಸಿ ಶಿವಕುಮಾರ್‌ ಮತ್ತು ಮಂಗಳ ದಂಪತಿಯ ಪುತ್ರಿ.

Thirthahalli-Anagha-is-the-district-Topper

ಏನಂದ್ರು ಅನಘ?

ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದ ವಿದ್ಯಾರ್ಥಿನಿ ಅನಘ.ಕೆ.ಎಸ್., ‘ದೈನಂದಿನ ವಿಷಯಗಳನ್ನು ಆಯಾ ದಿನವೇ ಓದಿಕೊಳ್ಳುತ್ತಿದ್ದೆ. ಗಣಿತ ವಿಷಯ ಸ್ವಲ್ಪ ಕಷ್ಟವೆನಿಸುತಿತ್ತು. ಆದ್ದರಿಂದ ಅದಕ್ಕೆ ಹೆಚ್ಚು ಒತ್ತು ನೀಡಿದ್ದೆ. ಕೊನೆಗೆ ಗಣಿತ ವಿಷಯವು ಸುಲಭವೆನಿಸಿತು’ ಎಂದು ತಿಳಿಸಿದ್ದಾರೆ.

ಶಿಕ್ಷಕರು, ಪೋಷಕರ ಸಪೋರ್ಟ್‌

‘ಶಾಲೆಯ ಶಿಕ್ಷಕರ ಪ್ರೋತ್ಸಾಹ ಹೆಚ್ಚಿತ್ತು. ಯಾವುದೇ ಸಂದೇಹಗಳಿದ್ದರು ಬಗೆಹರಿಸುತ್ತಿದ್ದರು. ಪರೀಕ್ಷೆ ನಂತರವು ವಿಚಾರಿಸುತ್ತಿದ್ದರು. ಮುಂದಿನ ಪರೀಕ್ಷೆಗೆ ಹುರಿದುಂಬಿಸುತ್ತಿದ್ದರು. ತಂದೆ ಶಿವಕುಮಾರ್‌ ಮತ್ತು ತಾಯಿ ಮಂಗಳಾ ಇಬ್ಬರು ಶಿಕ್ಷಕರು. ಅವರು ಕೂಡ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಉತ್ತಮ ಅಂಕ ಗಳಿಸಿದ್ದಕ್ಕೆ ಖುಷಿ ಇದೆ. ಮುಂದೆ ಐಎಎಸ್‌ ಮಾಡುವ ಗುರಿ ಇದೆ. ಪಿಯುಸಿಯಲ್ಲಿ ವಿಜ್ಞನ ವಿಷಯ ಆಯ್ಕೆ ಮಾಡಿಕೊಳ್ಳಲಿದ್ದೇನೆʼ ಎಂದು ತಿಳಿಸಿದರು.

Thirthahalli-Anagha-is-the-district-Topper

ಅನಘ ಪೋಷಕರ ಖುಷಿ

ಇನ್ನು, ಅನಘ.ಕೆ.ಎಸ್‌ ಅವರ ತಂದೆ, ಶಿಕ್ಷಕ ಶಿವಕುಮಾರ್‌ ಅವರು ಮಾತನಾಡಿ, ‘ಮಗಳು ಉತ್ತಮ ಅಂಕ ಗಳಿಸಿದ್ದಾಳೆ. ಆಯಾ ದಿನದ ವಿಷಯಗಳನ್ನು ಅದೇ ದಿನವೇ ಓದುತ್ತಿದ್ದರಿಂದ ಪರೀಕ್ಷೆ ಸಮಯದಲ್ಲಿ ಅನುಕೂಲವಾಯಿತು’ ಎಂದು ಖುಷಿ ಪಟ್ಟರು.

ಇದನ್ನೂ ಓದಿ 

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Shivamogga-Live-Number-1-Promotion
Shivamogga-Live-Number-1-Promotion

Leave a Comment