ಎಲೆ ಚುಕ್ಕೆ, ತೀರ್ಥಹಳ್ಳಿಯ ತೋಟಕ್ಕೆ ಸಿಎಂ ಭೇಟಿ, ಇಲ್ಲಿದೆ ಬೊಮ್ಮಾಯಿ ಹೇಳಿದ 3 ಪ್ರಮುಖಾಂಶ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 27 NOVEMBER 2022

ತೀರ್ಥಹಳ್ಳಿ | ಎಲೆ ಚುಕ್ಕೆ ರೋಗದಿಂದ ಅಡಕೆ ಬೆಳೆಗಾರರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ರೋಗ ಕುರಿತು ಖುದ್ದು ಪರಿಶೀಲನೆ ನಡೆಸಿ, ಮಾಹಿತಿ ಸಂಗ್ರಹಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀರ್ಥಹಳ್ಳಿಗೆ ಭೇಟಿ ನೀಡಿದ್ದರು. ಎಲೆ ಚುಕ್ಕೆ ರೋಗ ಪೀಡಿತ ಕೈಮರ ಗ್ರಾಮದ ತೋಟಕ್ಕೆ ತೆರಳಿ ಪರಿಶೀಲಿಸಿದರು. (cm visit adike farm)

Shimoga Nanjappa Hospital

ಎಲೆ ಚುಕ್ಕೆ ರೋಗ ಪೀಡತ ಅಡಕೆ ಮರದ ಗರಿಗಳು, ಅವುಗಳ ಅಡಕೆ ಫಸಲನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪರಿಶೀಲಿಸಿದರು. ಅಧಿಕಾರಿಗಳು, ರೈತರಿಂದ ಮಾಹಿತಿ ಪಡೆದರು.

ರೋಗಪೀಡಿತ ತೋಟಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಅಡಕೆ ಬೆಳೆ ಮತ್ತು ಬೆಳೆಗಾರರನ್ನು ಉಳಿಸುವ ನಿಟ್ಟಿನಲ್ಲಿ ಸರ್ವ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದರು. (cm visit adike farm)

(cm visit adike farm)

ಸಿಎಂ ಹೇಳಿದೆ 3 ಪ್ರಮುಖಾಂಶ

ಪ್ರಮುಖಾಂಶ 1 – ಕಳೆದ ಎರಡು ವರ್ಷದಿಂದ ನಿರಂತರ ಮಳೆಯಾಗುತ್ತಿದೆ. ಅಡಕೆ ಮರಕ್ಕೆ ಬೇಕಿರುವಷ್ಟು LIC HOUSIN FINANCE SHIMOGA jpgಪೋಷಕಾಂಶ ಲಭಿಸುತ್ತಿಲ್ಲ. ಹಾಗಾಗಿ ಎಲೆಚುಕ್ಕೆ ರೋಗ ಬಂದು ವ್ಯಾಪಕವಾಗಿ ಹರಡುತ್ತಿದೆ. ತೋಟಗಾರಿಕೆ ವಿಶ್ವವಿದ್ಯಾಲಯ, ತೋಟಗಾರಿಕೆ ಇಲಾಖೆ ಅಧಿಕಾರಿಗಳು, ಕೇಂದ್ರದ ತಜ್ಞರು ಈ ಕುರಿತು ಅಧ್ಯಯನ ನಡೆಸುತ್ತಿದ್ದಾರೆ.

ಪ್ರಮುಖಾಂಶ 2 – ಎಲೆ ಚುಕ್ಕೆ ರೋಗ ಗಾಳಿಯಲ್ಲಿ ಹರಡುತ್ತಿದೆ. ವ್ಯವಸ್ಥಿತ ನಿರ್ವಹಣೆಯಿಂದ ಇದನ್ನು ತಡೆಗಟ್ಟಬಹುದಾಗಿದೆ. ಈ ಕುರಿತು ವರದಿ ಸಿದ್ಧಪಡಿಸುವಂತೆ ತೋಟಗಾರಿಕೆ ಇಲಾಖೆಗೆ ಸೂಚನೆ ನೀಡಿದ್ದೇನೆ. ತಜ್ಞರ ಸಲಹೆಯಂತೆ ಔಷಧ ವಿತರಣೆ ಮಾಡಲಾಗುತ್ತದೆ. ವ್ಯವಸ್ಥಿತ ನಿರ್ವಹಣೆ ಕುರಿತು ಸೂಕ್ತ ಪ್ಲಾನ್ ಸಿದ್ಧಪಡಿಸುವಂತೆ ಸೂಚಿಸಲಾಗಿದೆ.

ALSO READ – ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಉದ್ಯೋಗವಕಾಶದ ವಿಚಾರ, ಸಂಸದ ರಾಘವೇಂದ್ರ ಮಹತ್ವದ ಹೇಳಿಕೆ

ಪ್ರಮುಖಾಂಶ 3 – 45 ಸಾವಿರ ಹೆಕ್ಟೇರ್ ನಲ್ಲಿ ಅಡಕೆ ಬೆಳೆಯಲಾಗುತ್ತಿದೆ. ಎಲೆ ಚುಕ್ಕೆ ರೋಗದಿಂದ Whatsapp Community jpgಬೆಳೆಗಾರರು ಸಂಕಷ್ಟಕ್ಕೀಡಾಗಿದ್ದಾರೆ. ಇದು ಹವಾಮಾನ ಆಧಾರಿತ ಸಮಸ್ಯೆ. ಇದಕ್ಕೆ ವಿಮೆಯು ಇದೆ. ಪರಿಹಾರ ಒದಗಿಸುವ ಕುರಿತು ವರಿದಿ ಬಂದ ಬಳಿಕ ಪರಿಶೀಲಿಸಲಾಗುತ್ತದೆ. ಬಗರ್ ಹುಕುಂ ಮೂಲಕ ತೋಟ ಮಾಡಿರುವವರಿಗು ಪರಿಹಾರದ ಕುರಿತು ಗಮನ ಹರಿಸುತ್ತೇವೆ.  ಹಳದಿ ರೋಗ ಬಂದಾಗಲು ಸರ್ಕಾರ ಗಮನ ಹರಿಸಿತ್ತು. ಎಲೆ ಚುಕ್ಕೆ ರೋದ ವಿಚಾರದಲ್ಲಿಯು ಅಧ್ಯಯನ ನಡೆಸುತೇವೆ.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ, ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ಗೋವಿಂದ ಕಾರಜೋಳ, ಬಿ.ಎ.ಬಸವರಾಜ, ಶಾಸಕ ಹರತಾಳು ಹಾಲಪ್ಪ, ಸಂಸದ ಬಿ.ವೈ. ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.

Shimoga Nanjappa HOspital

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment