ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 15 DECEMBER 2022
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ತೀರ್ಥಹಳ್ಳಿ : ತುಂಗಾ ನದಿ ತೀರದಲ್ಲಿ ಖಾಸಗಿ ಕಾರ್ಯಕ್ರಮ ನಡೆಸಲಾಗಿದ್ದು, ದೀಪಾಲಂಕಾರ, ಸಿಡಿಮದ್ದು ಪ್ರದರ್ಶಿಸಲಾಗಿದೆ. ಯಾವುದೆ ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದೆ ಸಿಡಿಮದ್ದು (crackers burst) ಪ್ರದರ್ಶಿಸಿರುವುದು ಸಾರ್ವಜನಿಕರ ಆಕ್ಷೇಪಕ್ಕೆ ಕಾರಣವಾಗಿದೆ.
ಮಂಗಳವಾರ ರಾತ್ರಿ ಕುರುವಳ್ಳಿಯ ಮರಳು ಗುಡ್ಡೆಯ ಮೇಲೆ ಕಾರ್ಯಕ್ರಮ ನಡೆದಿದೆ. ದೊಡ್ಡಮಟ್ಟದಲ್ಲಿ ಸಿಡಿಮದ್ದು (crackers burst) ಸಿಡಿಸಲಾಗಿದೆ. ಯಾವುದೆ ಸುರಕ್ಷಿತ ಕ್ರಮಗಳನ್ನು ಅನುಸರಿಸದೆ ಸಿಡಿಮದ್ದು ಸ್ಪೋಟಿಸಲಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ – ಮೈಸೂರಿನಿಂದ ಐರಾವತ ಬಸ್ಸಲ್ಲಿ ಬಂದ ಇಂಜಿನಿಯರ್, ಶಿವಮೊಗ್ಗದಲ್ಲಿ ಇಳಿಯುವಾಗ ಕಾದಿತ್ತು ಶಾಕ್
ಎಳ್ಳಮಾವಾಸ್ಯೆ ಸಂದರ್ಭ ಸಿಡಿಮದ್ದು ಪ್ರದರ್ಶನಕ್ಕೆ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಅನುಮತಿ ಪಡೆದು, ಸುರಕ್ಷಿತ ಕ್ರಮ ಅನುಸರಿಸಲಾಗುತ್ತದೆ. ಆದರೆ ಮಂಗಳವಾರ ನಡೆದ ಘಟನೆಯಲ್ಲಿ ಯಾವುದೆ ಸುರಕ್ಷಿತ ಕ್ರಮಗಳಿರಲಿಲ್ಲ. ಸ್ವಲ್ಪ ನಿರ್ಲಕ್ಷ್ಯ ವಹಿಸಿದ್ದರು ಅಕ್ಕಪಕ್ಕದ ಮನೆಗಳು, ಶೆಡ್, ಸಾರ್ವಜನಿಕರಿಗೆ ಹಾನಿಯಾಗುತ್ತಿತ್ತು ಎಂದು ಆರೋಪಿಸಲಾಗಿದೆ.