ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 08 FEBRUARY 2021
ಆಗುಂಬೆಯಲ್ಲಿ ಇನ್ಮುಂದೆ ಪ್ರಾಣಿಗಳಿಗೆ ಆಹಾರ ನೀಡಿದರೆ ದಂಡ ಫಿಕ್ಸ್. ಕಸ ಎಸೆದರೂ ಬೀಳುತ್ತೆ ಫೈನ್. ಘಾಟಿಯ ಉದ್ದಕ್ಕೂ ಅರಣ್ಯ ಇಲಾಖೆ ಕಾರ್ಯಾಚರಣೆ.
ಸೋಮೇಶ್ವರ ಅರಣ್ಯ ವಲಯ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ. ಪರಿಸರ ಮತ್ತು ಕಾಡು ಪ್ರಾಣಿ, ಪಕ್ಷಿಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದೆ.
ಬಂದವರೆಲ್ಲ ಆಹಾರ ಕೊಡುತ್ತಿದ್ದರು
ತೀರ್ಥಹಳ್ಳಿ – ಉಡುಪಿ ನಡುವೆ ಸಂಪರ್ಕ ಕಲ್ಪಿಸುವ ಆಗುಂಬೆ ಘಾಟಿ, ಪ್ರವಾಸಿಗರ ನೆಚ್ಚಿನ ತಾಣ. ಇಲ್ಲಿ ಮಂಗಗಳ ಸಂಖ್ಯೆ ಅಧಿಕ. ಬರುವ ಪ್ರವಾಸಿಗರು ತಾವು ತಂದಿರುವ ತಿಂಡಿ, ತಿನಿಸುಗಳನ್ನು ಮಂಗಗಳಿಗೆ ಕೊಡುತ್ತಿದ್ದರು. ಮಕ್ಕಳಂತೂ ಇದನ್ನು ಕಂಡು ಖುಷಿ ಪಡುತ್ತಿದ್ದರು. ಆದರೆ ಇನ್ಮುಂದೆ ಹೀಗೆ ಮಾಡುವಂತಿಲ್ಲ.
ಎಲ್ಲೆಂದರಲ್ಲಿ ಕಸ, ಜಲಪಾತದಲ್ಲಿ ಸ್ನಾನ
ಪ್ರವಾಸಿಗರು ಎಲ್ಲೆಂದರಲ್ಲಿ ಕಸ, ಪ್ಲಾಸ್ಟಿಕ್‍ಗಳನ್ನು ಎಸೆಯುತ್ತಿದ್ದರು. ಇನ್ನು, ರಸ್ತೆ ಪಕ್ಕದ ಸಣ್ಣ ಸಣ್ಣ ಜಲಪಾತಗಳಲ್ಲಿ ಸ್ನಾನ ಮಾಡುವುದು, ವಾಹನಗಳನ್ನು ತೊಳೆಯುತ್ತಿದ್ದರು. ಆಗುಂಬೆಯು ಮೋಜು ಮಸ್ತಿಯ ತಾಣವಾಗಿ ಬದಲಾಗಿತ್ತು. ಇದರಿಂದ ಪರಿಸರ, ಪ್ರಾಣಿ, ಪಕ್ಷಿಗಳಿಗೆ ಹಾನಿ ಉಂಟಾಗುತ್ತಿತ್ತು. ಅಲ್ಲದೆ ಅಪಘಾತಗಳು ಸಂಭವಿಸುತ್ತಿದ್ದವು. ಇದೆಲ್ಲಕ್ಕೂ ಬ್ರೇಕ್ ಹಾಕಲು ಅರಣ್ಯ ಇಲಾಖೆ ನಿರ್ಧರಿಸಿದೆ.
40 ಸಿಬ್ಬಂದಿಗಳಿಂದ ಕಾರ್ಯಾಚರಣೆ
ಆಗುಂಬೆ ಘಾಟಿಯಲ್ಲಿ ಸೋಮೇಶ್ವರದವರೆಗೆ ಅರಣ್ಯ ಇಲಾಖೆಯ 40 ಸಿಬ್ಬಂದಿ ಕಾರ್ಯಾಚರಣೆ ನಡೆಸಿ ದಂಡ ವಿಧಿಸುತ್ತಿದ್ದಾರೆ. ಪ್ರಾಣಿಗಳಿಗೆ ಆಹಾರ ನೀಡುವುದು, ಕಸ ಎಸೆಯುವುದು, ಜಲಪಾತಗಳಲ್ಲಿ ಸ್ನಾನ, ವಾಹನ ತೊಳೆಯುವವರಿಗೆ ಫೈನ್ ಹಾಕುತ್ತಿದ್ದಾರೆ.
ಫೈನ್ ಹಾಕಲು ಕಾರಣವೇನು?
ಜಂಕ್ ಫುಡ್‍ಗಳಿಂದ ವನ್ಯಜೀವಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಅಲ್ಲದೆ, ರೊಚ್ಚಿಗೆದ್ದು ಆಹಾರಕ್ಕಾಗಿ ಪ್ರವಾಸಿಗರ ಮೇಲೆ, ಸಮೀಪದ ಊರುಗಳಲ್ಲಿ ಜನರ ಮೇಲೆ ದಾಳಿ ನಡೆಸುತ್ತಿವೆ. ಇದನ್ನು ತಡೆಯುವ ಸಲುವಾಗಿ ಈ ಕ್ರಮ ಕೈಗೊಂಡಿದ್ದಾರೆ. ಕಸ ಎಸೆಯುವುದು ಪರಿಸರಕ್ಕೆ ಹಾನಿ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ದಂಡ ವಿಧಿಸಲಾಗುತ್ತಿದೆ.
ಯಾವುದಕ್ಕೆ ಎಷ್ಟೆಷ್ಟು ದಂಡ?
ಕಾಡು ಪ್ರಾಣಿಗಳಿಗೆ ಆಹಾರ ನೀಡುವುದು, ಕಸ ಎಸೆಯುವುದು ಅಪರಾಧ ಎಂದು ಬೋರ್ಡುಗಳನ್ನು ಹಾಕಲಾಗಿದೆ.
ಒಂದು ವೇಳೆ ಕಾಡು ಪ್ರಾಣಿಗಳಿಗೆ ತಿನಿಸು ನೀಡುವುದು ಕಂಡುಬಂದರೆ 50 ರೂ. ದಂಡ
ರಸ್ತೆ ಬದಿಯಲ್ಲಿ ಕಸ, ಪ್ಲಾಸ್ಟಿಕ್ ಎಸೆದರೆ 100 ರೂ. ದಂಡ
ಅನುಮತಿ ಇಲ್ಲದೆ ಅರಣ್ಯ ಪ್ರವೇಶ. ರಸ್ತೆ ಬದಿಯ ಜಲಪಾತಗಳಲ್ಲಿ ಸ್ನಾನ, ವಾಹನ ತೊಳೆಯುವುದು, ರಾಷ್ಟ್ರೀಯ ಉದ್ಯಾನದಲ್ಲಿ ಸಕಾರಣವಿಲ್ಲದೆ ನಿಗದಿಪಡಿಸಿದ್ದಕ್ಕಿಂತಲೂ ಹೆಚ್ಚಿನ ಸಮಯ ಉಳಿದರೆ ತಲಾ 200 ರೂ. ದಂಡ.
ಆಗುಂಬೆಯಲ್ಲಿ ದಂಡ ವಿಧಿಸುವ ಕಾರ್ಯಾಚರಣೆ ಶುರುವಾಗಿದೆ. ವನ್ಯಜೀವಿಗಳ ಆರೋಗ್ಯ, ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮ ತಪ್ಪಿಸುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಜಿಲ್ಲೆಯ ಉಳಿದ ಪ್ರವಾಸಿ ತಾಣಗಳಲ್ಲೂ ಇದೆ ಕ್ರಮ ಕೈಗೊಳ್ಳುವಂತೆ ಜನರ ಒತ್ತಾಯವಿದೆ.
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200