ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | THIRTHAHALLI NEWS | 2 ಫೆಬ್ರವರಿ 2022
ಕೋಟ್ಯಂತರ ರುಪಾಯಿ ರಾಜಧನ ಬಿಡುಗಡೆ ಮಾಡದ ಹಿನ್ನೆಲೆ ಗ್ರಾಮ ಪಂಚಾಯಿತಿ ಸದಸ್ಯರೆ ಮರಳು ಕ್ವಾರಿಗಳಿಗೆ ಬೀಗ ಜಡಿದಿದ್ದಾರೆ. ಈ ಮೂಲಕ ಸರ್ಕಾರದ ನಡೆ ವಿರುದ್ಧ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದಾರೆ.
ತೀರ್ಥಹಳ್ಳಿ ತಾಲೂಕು ನಾಲೂರು ಕೋಳಿಗೆ ಗ್ರಾಮ ಪಂಚಾಯಿತಿಗೆ ಕಳೆದ ಮೂರು ವರ್ಷದಿಂದ ರಾಜಧನ ಬಿಡುಗಡೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸದಸ್ಯರೆಲ್ಲ ಒಗ್ಗೂಡಿ ಮರಳು ಕ್ವಾರಿಗೆ ಬೀಗ ಹಾಕಿದ್ದಾರೆ.
ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಮರಳು ಕ್ವಾರಿಗೆ ಭೇಟಿ ನೀಡಿದ ಗ್ರಾಮ ಪಂಚಾಯಿತಿ ಸದಸ್ಯರು, ರಾಜಧನಕ್ಕೆ ಆಗ್ರಹಿಸಿದರು. ರಾಜಧನ ಬಿಡುಗಡೆಯಾದ ಬಳಿಕ ಮರಳು ತೆಗೆಯುವಂತೆ ಪಟ್ಟು ಹಿಡಿದಿದ್ದಾರೆ.
ನಾಲೂರು ಕೋಳಿಗೆ ಗ್ರಾಮ ಪಂಚಾಯಿತಿಗೆ ಕಳೆದ ಮೂರು ವರ್ಷದಿಂದ ರಾಜಧನ ಬಿಡುಗಡೆಯಾಗಿಲ್ಲ. ಈ ಕುರಿತು ತಾಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮನವರಿಕೆ ಮಾಡಲಾಗಿದೆ. ಸಚಿವರಿಗೂ ಮನವಿ ಮಾಡಲಾಗಿದೆ. ಆದರೂ ಸರ್ಕಾರ ರಾಜಧನ ಬಿಡುಗಡೆ ಮಾಡಿಲ್ಲ. ನಾಲೂರು ಕೋಳಿಗೆ 2.48 ಕೋಟಿ ರೂ. ರಾಜಧನ ಬಾಕಿ ಇದೆ.
ಅರೇಹಳ್ಳಿಯಲ್ಲೂ ಕ್ವಾರಿಗೆ ಬೀಗ
ಮೂರು ವರ್ಷದಿಂದ ರಾಜಧನ ಬಿಡುಗಡೆಯಾಗದ ಹಿನ್ನೆಲೆ ಅರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಮರಳು ಕ್ವಾರಿಗೆ ಬೀಗ ಹಾಕಲಾಗಿದೆ. ರಾಜಧನ ಬಿಡುಗಡೆಯಾದ ಬಳಿಕ ಮರಳು ತೆಗೆಯುವಂತೆ ಗ್ರಾಮ ಪಂಚಾಯಿತಿ ಸದಸ್ಯರು ಆಗ್ರಹಿಸಿದ್ದಾರೆ.
ಅರೇಹಳ್ಳಿ ಗ್ರಾಮ ಪಂಚಾಯಿತಿಗೆ 1.45 ಕೋಟಿ ರೂ. ರಾಜಧನ ಬಾಕಿ ಇದೆ. ಇದನ್ನು ಸರ್ಕಾರ ಬಿಡುಗಡೆ ಮಾಡಿದರೆ ಮಾತ್ರ ಮರಳು ತೆಗೆಯಲು ಅವಕಾಶ ನೀಡುವುದಾಗಿ ಗ್ರಾಮ ಪಂಚಾಯಿತಿ ಸದಸ್ಯರು ಪಟ್ಟು ಹಿಡಿದಿದ್ದಾರೆ.
Grama Panchayaths in Shimoga | About Shivamogga Live
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422