ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 7 ಜುಲೈ 2020
ಭಾವೈಕ್ಯತೆಯ ಪ್ರಾರ್ಥನಾ ಕೇಂದ್ರ ಹಣಗೆರೆಕಟ್ಟೆಯ ಶ್ರೀ ಚೌಡೇಶ್ವರಿ, ಭೂತರಾಯ ಮತ್ತು ಸೈಯದ್ ಅಲಿ ಹಜರತ್ ದರ್ಗಾಕ್ಕೆ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ. ಈ ಸಂಬಂಧ ತಾಲೂಕು ಆಡಳಿತದ ವತಿಯಿಂದ ಆದೇಶ ಹೊರಡಿಸಲಾಗಿದೆ.
ಎಲ್ಲಿಯವರೆಗೆ ನಿಷೇಧಾಜ್ಞೆ?
ಹಣಗೆರೆಕಟ್ಟೆಯಲ್ಲಿ ಜುಲೈ 6ರ ಮಧ್ಯರಾತ್ರಿಯಿಂದಲೇ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಗ್ರಾಮದಲ್ಲಿ ಐದು ಜನಕ್ಕಿಂತಲೂ ಹೆಚ್ಚು ಜನರು ಸೇರುವಂತಿಲ್ಲ ಎಂದು ತಹಶೀಲ್ದಾರ್ ತಿಳಿಸಿದ್ದಾರೆ. ಜುಲೈ 15ರವರೆಗೆ ಅಥವಾ ಮುಂದಿನ ಆದೇಶ ಬರುವವರೆಗೆ ಈ ನಿಷೇಧಾಜ್ಞೆ ಮುಂದುವರೆಯಲಿದೆ ಎಂದು ಸೂಚಿಸಿದ್ದಾರೆ.

ನಿಷೇಧಾಜ್ಞೆಗೆ ಕಾರಣ ಏನು?
ಲಾಕ್ ಡೌನ್ ಘೋಷಣೆಯಾದಾಗ ಹಣಗೆರೆಕಟ್ಟೆಗೆ ಭಕ್ತರು ಬರುತ್ತಿರಲಿಲ್ಲ. ಆ ಬಳಿಕ ಭಕ್ತರ ಸಂಖ್ಯೆ ನಿಧಾನಕ್ಕೆ ಹೆಚ್ಚಳವಾಯಿತು. ಈ ವೇಳೆಗಾಗಲೆ ಹಣಗೆರೆಕಟ್ಟೆಯಲ್ಲಿ ಹರಕೆ ತೀರಿಸುವುದನ್ನು ನಿಷೇಧಿಸಲಾಗಿತ್ತು.
ಆದರೂ ಲಾಕ್ ಡೌನ್ ಬಳಿಕ ಪೂಜೆಗೆ ಬಂದವರು ಎಲ್ಲೆಂದರಲ್ಲಿ ಕಾಯಿ ಒಡೆಯುವುದು, ಹಣ್ಣು ಇಡುವುದು, ಕುಂಕುಮ ಚೆಲ್ಲುವುದು ಸಾಮಾನ್ಯವಾಗಿತ್ತು. ಅಲ್ಲದೆ ಹೊರ ಜಿಲ್ಲೆ, ಹೊರ ರಾಜ್ಯದಿಂದಲೂ ಜನರು ಬರಲು ಆರಂಭವಾಗಿತ್ತು. ಇದು ಕರೋನ ಹರಡುವ ಆತಂಕ ಹೆಚ್ಚಳವಾಗಿತ್ತು. ಇದೇ ಕಾರಣಕ್ಕೆ ನಿಷೇಧಾಜ್ಞೆ ಹೇರಲಾಗಿದೆ ಎಂದು ಹೇಳಲಾಗುತ್ತಿದೆ.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200