ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | KONANDURU NEWS | 23 MAY 2021
ಕರೋನ ಸೋಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆ ತೀರ್ಥಹಳ್ಳಿ ತಾಲೂಕು ಕೋಣಂದೂರಿನಲ್ಲಿ ಕಠಿಣ ಲಾಕ್ ಡೌನ್ ಜಾರಿಯಾಗಿದೆ. ಒಂದು ವಾರ ಕೋಣಂದೂರನ್ನು ಸಂಪೂರ್ಣ ಬಂದ್ ಮಾಡಲಾಗುತ್ತಿದೆ.
ಮೇ 29ರವರೆಗೆ ಲಾಕ್ ಡೌನ್ ಮುಂದುವರೆಯಲಿದೆ. ಈ ಅವಧಿಯಲ್ಲಿ ಸಾರ್ವಜನಿಕರು ಮನೆಯಿಂದ ಹೊರಗೆ ಬಾರದಂತೆ ಸೂಚಿಸಲಾಗಿದೆ.
ಬೆಳಗ್ಗ 6 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ತರಕಾರಿ, ಹಣ್ಣು ವ್ಯಾಪಾರಕ್ಕೆ ಅವಕಾಶವಿದೆ. ಆದರೆ ತಳ್ಳುಗಾಡಿಯಲ್ಲಿ ಮನೆ ಬಳಿಗೆ ಹೋಗಿ ವ್ಯಾಪಾರ ನಡೆಸಬೇಕಿದೆ. ಇದರ ಹೊರತು ತುರ್ತು ಸಂದರ್ಭವಿದ್ದರಷ್ಟೆ ಮನೆಯಿಂದ ಹೊರಬರಲು ಅವಕಾಶವಿದೆ.
ಎಷ್ಟಿದೆ ಕೋರನ ಪ್ರಕರಣ?
ಕೋಣಂದೂರು ಭಾಗದಲ್ಲಿ ಕರೋನ ಸೋಂಕಿತರ ಸಂಖ್ಯೆ ದಿನೆ ದಿನೆ ಹೆಚ್ಚಳವಾಗುತ್ತಿದೆ. ಸದ್ಯ ಈ ಭಾಗದಲ್ಲಿ 107 ಸಕ್ರಿಯ ಪ್ರಕರಣಗಳಿವೆ. ಹಾಗಾಗಿ ಸೋಂಕು ಇನ್ನಷ್ಟು ವ್ಯಾಪಿಸಬಹುದು ಎಂಬ ಆತಂಕವಿದೆ. ಇದೆ ಕಾರಣಕ್ಕೆ ಲಾಕ್ ಡೌನ್ ಮೊರೆ ಹೋಗಲಾಗಿದೆ.
ಕೆಲವರಿಗೆ ಲಾಠಿ ರುಚಿ
ಶನಿವಾರದಿಂದಲೇ ಲಾಕ್ ಡೌನ್ ಆಗಿದ್ದರೂ, ಕೆಲವರು ಅನಗತ್ಯವಾಗಿ ಹೊರಗೆ ಸುತ್ತಾಡುತ್ತಿದ್ದರು. ಇವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. ಆದರೆ ಆರೋಗ್ಯ ತುರ್ತು ಇದ್ದವರಿಗೆ ಆಸ್ಪತ್ರೆಗೆ ತೆರಳಲು ಅವಕಾಶ ನೀಡಲಾಗಿದೆ. ಇನ್ನು, ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಲು ಮುಖ್ಯ ರಸ್ತೆ ಹೊರತು ಒಳ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಲಾಗಿದೆ.
ಶಾಸಕರ ಭೇಟಿ, ಪರಿಶೀಲನೆ
ಶಾಸಕ ಆರಗ ಜ್ಞಾನೇಂದ್ರ ಅವರು ಕೋಣಂದೂರು ಲಾಕ್ ಡೌನ್ ಪರಿಸ್ಥಿತಿಯನ್ನು ಪರಿಶೀಲಿಸಿದರು. ಕೋಣಂದೂರು, ಗುಡ್ಡೆಕೊಪ್ಪ ಭಾಗದ ಜನರು ಲಾಕ್ ಡೌನ್ಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು. ತಹಶೀಲ್ದಾರ್ ಡಾ. ಎಸ್.ಬಿ.ಶ್ರಿಪಾದ್, ಡಿವೈಎಸ್ಪಿ ಈಶ್ವರ್ ಉಮೇಶ್ ನಾಯಕ್, ತೀರ್ಥಹಳ್ಳಿ ಇನ್ಸ್ಪೆಕ್ಟರ್ ಸಂತೋಷ್ ಲಾಕ್ ಡೌನ್ ಈ ವೇಳೆ ಇದ್ದರು.
- ದೇಶದ ಅತಿ ದೊಡ್ಡ ಕೊಡುಗೆ
# Nation’s Biggest Offer Starts Midnight at shop.bigbazaar.com. Shop for ₹1500 & get ₹1000 Cashback! Be the first to shop! https://bit.ly/3v6Fu44
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422