SHIVAMOGGA LIVE | 14 JUNE 2023
THIRTHAHALLI : ಹಣಗೆರೆ ಕಟ್ಟೆ (Hanagere) ಗ್ರಾಮದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಜನ ಸಂಪರ್ಕ ಸಭೆ ಆಯೋಜಿಸಲಾಗಿತ್ತು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪ್ರಮುಖ ವಿಚಾರಗಳ ಚರ್ಚೆಯಾಯಿತು. ಈ ವೇಳೆ ಹಲವು ಪ್ರಮುಖ ನಿರ್ಧಾರಗಳನ್ನು ಜಿಲ್ಲಾ ರಕ್ಷಣಾಧಿಕಾರಿ ಪ್ರಸ್ತಾಪಿಸಿದರು.
ಯಾವೆಲ್ಲ ನಿರ್ಧಾರ ಪ್ರಕಟಿಸಿದರು?
ನಿರ್ಧಾರ 1 – ಪ್ರತಿ ಅಮವಾಸ್ಯೆ, ಗುರುವಾರ ಮತ್ತು ಭಾನುವಾರ ಹಣಗೆರೆಕಟ್ಟೆ (Hanagere) ದೇವಸ್ಥಾನಕ್ಕೆ ಅಧಿಕ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತದೆಂದು ಸಭೆಯಲ್ಲಿ ಚರ್ಚೆಯಾಗಿದೆ. ಈ ಹಿನ್ನೆಲೆ ಆಯಾ ದಿನಗಳಂದು ಸುಗಮ ಸಂಚಾರ ಮತ್ತು ಭದ್ರಾತೆ ಹಿತದೃಷ್ಠಿಯಿಂದ ಹೆಚ್ಚಿನ ಪೊಲೀಸ್ ಸಿಬ್ಬಂದಿ ಮತ್ತು ಹೋಂ ಗಾರ್ಡ್ ನಿಯೋಜಿಸಿ, ಬ್ಯಾರಿಕೇಡ್ ಅಳವಡಿಸಿ ಕ್ರಮ ಕೈಗೊಳ್ಳಲಾಗುವುದು.
![]() |
ನಿರ್ಧಾರ 2 – ಹಣಗೆರೆ ಕಟ್ಟೆ ದೇವಸ್ಥಾನಕ್ಕೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸುವಂತೆ ಮತ್ತು ಇನ್ನು ಹೆಚ್ಚಿನ ಬ್ಯಾರಿಕೇಡ್ ಗಳನ್ನು ಒದಗಿಸುವಂತೆ ಕೋರಲಾಗಿದೆ. ಈ ಕುರಿತಂತೆ ಮುಜರಾಯಿ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ಸಿ.ಸಿ ಟಿವಿ ಕ್ಯಾಮೆರಾಗಳ ಅಳವಡಿಕೆ ಮತ್ತು ಬ್ಯಾರಿಕೇಡ್ ಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು.
ನಿರ್ಧಾರ 3 – ಹಣಗೆರೆಕಟ್ಟೆಯಲ್ಲಿ ಎಲ್ಲಾ ಸಮುದಾಯದ ಜನರು ಸೌಹಾರ್ದತೆಯಿಂದಿದ್ದಾರೆ. ಸೌಹಾರ್ದತೆಗೆ ಮತ್ತು ಕಾನೂನು ಸುವ್ಯಸ್ಥೆಗೆ ಧಕ್ಕೆ ತರುವಂತಹದ್ದು ಕಂಡುಬಂದಲ್ಲಿ, ಅಂತಹವರ ವಿರುದ್ಧ ನಿರ್ಧಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು.
ನಿರ್ಧಾರ 4 – ಗ್ರಾಮದ ಎಲ್ಲಾ ವರ್ಗದ ಸದಸ್ಯರುಗಳನ್ನೊಳಗೊಂಡ ಬೀಟ್ ಸಮಿತಿ ರಚನೆ. ಬೀಟ್ ಸಿಬ್ಬಂದಿ ನಿರಂತರವಾಗಿ ಗ್ರಾಮಕ್ಕೆ ಭೇಟಿ ನೀಡಿ, ಬೀಟ್ ಸಮಿತಿ ಸಭೆ ನಡೆಸಿ, ಕುಂದು ಕೊರತೆ ಆಲಿಸಲಿದ್ದಾರೆ.
ನಿರ್ಧಾರ 5 – ಗ್ರಾಮದಲ್ಲಿನ ಯುವಕರುಗಳನ್ನು ಗುರುತಿಸಿ, ಯುವ ಪಡೆಯನ್ನು ರಚಿಸಿ, ಅವರುಗಳು ಬೀಟ್ ಸಿಬ್ಬಂದಿಗಳೊಂದಿಗೆ ಗಸ್ತು ಮಾಡಬೇಕು. ಗ್ರಾಮದಲ್ಲಿ ಜರುಗುವ ಘಟನೆ ಮತ್ತು ಕಾನೂನು ಬಾಹಿರ ಚಟುವಟಿಕೆ ಮಾಹಿತಿ ಪೊಲೀಸ್ ಇಲಾಖೆಗೆ ನೀಡಬೇಕು.
ನಿರ್ಧಾರ 6 – ಪ್ರತಿ ಅಮಾವಾಸ್ಯೆ, ಭಾನುವಾರ ಮತ್ತು ಗುರುವಾರಗಳಂದು ಹಣಗೆರೆಕಟ್ಟೆಯಲ್ಲಿ ಹೆಚ್ಚಿನ ಸಾರ್ವಜನಿಕರು ಬರುವುದರಿಂದ, ಯುವ ಪಡೆಯ ಸದಸ್ಯರು ಆ ದಿನಗಳಂದು ಹಾಜರಿದ್ದು ಸುಗಮ ಸಂಚಾರ ವ್ಯವಸ್ಥೆಗೆ ಪೊಲೀಸ್ ಇಲಾಖೆಗೆ ಸಹಕರಿಸಬಹುದು.
ನಿರ್ಧಾರ 7 – ಹಣಗೆರೆಕಟ್ಟೆಯಲ್ಲಿ ERSS – 112 ವಾಹನದ ಗಸ್ತನ್ನು ಹೆಚ್ಚಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ಈ ಹಿನ್ನೆಲೆ ಹಣಗೆರೆ ಕಟ್ಟೆಯ ಕಡೆಗೆ ERSS – 112 ವಾಹನದ ಗಸ್ತು ಹೆಚ್ಚಿಸಲಾಗುವುದು. ತುರ್ತು ಸಂದರ್ಭ ERSS – 112 ಸಹಾಯವಾಣಿಗೆ ಕರೆಮಾಡಿ ಪೊಲೀಸ್ ಸಹಾಯ ಪಡೆದುಕೊಳ್ಳಬಹುದು.
ತೀರ್ಥಹಳ್ಳಿ ಡಿವೈಎಸ್‌ಪಿ ಗಜಾನನ ವಾಮನ ಸುತರ, ಪ್ರೊಬೆಷನರಿ ಪೊಲೀಸ್ ಉಪಾಧೀಕ್ಷಕ ಮಂಜುನಾಥ್, ಮಾಳೂರು ಇನ್ಸ್‌ಪೆಕ್ಟರ್ ಪ್ರವೀಣ್ ನೀಲಮ್ಮ ನವರ್, ಸಬ್ ಇನ್ಸ್‌ಪೆಕ್ಟರ್‌ಗಳಾದ ನವೀನ್ ಕುಮಾರ್ ಮಠಪತಿ, ಶಿವಾನಂದ್, ಹಣಗೆರೆಕಟ್ಟೆ ಪಿಡಿಒ ಸಂತೋಷ್, ಹಣಿಗೆರೆಕಟ್ಟೆಯ ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200