SHIVAMOGGA LIVE NEWS | 17 ಮಾರ್ಚ್ 2022
ಇತಿಹಾಸ ಪ್ರಸಿದ್ಧ ತೀರ್ಥಹಳ್ಳಿಯ ಮಾರಿಕಾಂಬಾ ಜಾತ್ರೆ ವಿಜೃಂಭಣೆಯಿಂದ ತೆರೆ ಕಂಡಿತು. ಪಟ್ಟಣದಲ್ಲಿ ಮಾರಿ ಗೊಂಬೆ ಮೆರವಣಿಗೆ ನಡೆಸಲಾಯಿತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮಾರಿಗೊಂಬೆಯ ವಿಸರ್ಜನೆ
ಮಾರಿಕಾಂಬಾ ದೇವಸ್ಥಾನದಲ್ಲಿ ಮಾರಿ ಗೊಂಬೆಗೆ ಬೆಳಗ್ಗೆ ಪೂಜೆ ಸಲ್ಲಿಸಲಾಯಿತು. ಸಂಜೆ ರಾಜಬೀದಿ ಉತ್ಸವ ನಡೆಯಿತು. ಮಾರಿಕಾಂಬಾ ದೇವಸ್ಥಾನದಿಂದ ಆರಂಭವಾದ ಮಾರಿ ಗೊಂಬೆ ಮೆರವಣಿಗೆ ಆಜಾದ್ ರಸ್ತೆ ಮಾರ್ಗದಲ್ಲಿ ಸಾಗಿತು. ಮಾರಿ ಗೊಂಬೆ ಯನ್ನು ಕುಶಾವತಿಯ ತುಂಗಾನದಿಯಲ್ಲಿ ಭಕ್ತರ ಸಮ್ಮುಖ ವಿಸರ್ಜನೆ ಮಾಡಲಾಯಿತು.
ವಿವಿಧ ವೇಷ ಭೂಷಣದೊಂದಿಗೆ ವಿವಿಧ ವೈಭಯುತವಾಗಿ ಸಾಗಿದ ಮಾರಿ ಗೊಂಬೆ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು. ಮಾರಿ ಗೊಂಬೆ ವಿಸರ್ಜನೆ ಸಂದರ್ಭ ಧಾರ್ಮಿಕ ಪೂಜಾವಿಧಿ ವಿಧಾನ ಕಾರ್ಯಕ್ರಮ ನಡೆಯಿತು.
ಸಾಮೂಹಿಕ ಭೋಜನ
ರಾತ್ರಿ ಸೊಪ್ಪುಗುಡ್ಡೆ ನಾಡ್ತಿಯ ಮಾರಿಕಾಂಬಾ ಸಭಾಭವನದಲ್ಲಿ ನಡೆದ ಸಾಮೂಹಿಕ ಬೋಜನ ಪ್ರಸಾದ ವಿತರಣೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು. ವಿಶೇಷ ಪೂಜೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಅಕ್ಕಿ, ತೆಂಗಿನಕಾಯಿ, ತರಕಾರಿ, ಬಾಳೇಹಣ್ಣು ಗೊನೆ, ಅಡಕೆ, ಸೀರೆ ಸೇರಿದಂತೆ ಅನೇಕ ಸಾಮಗ್ರಿಗಳನ್ನು ಭಕ್ತರು ಹೊರೆಕಾಣಿಕೆಯಾಗಿ ಸಲ್ಲಿಸಿದರು. ದೇವಸ್ಥಾನದ ಆಡಳಿತ ಮಂಡಳಿ 9 ದಿನದ ಜಾತ್ರೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಸಾರ್ವಜನಿಕ ಪ್ರಶಂಸೆಗೆ ಪಾತ್ರವಾಯಿತು.
ಮೆರವಣಿಗೆಯಲ್ಲಿ ದೇವಸ್ಥಾನ ಆಡಳಿತ ಅಧ್ಯಕ್ಷ ನಾಗರಾಜಶೆಟ್ಟಿ, ಮೊಕ್ತೇಸರ ಟಿ.ಕೆ.ಜಯರಾಮಶೆಟ್ಟಿ, ಕಾರ್ಯದರ್ಶಿ ಆಲಿಗೆ ಧನಂಜಯ, ಸಹ ಕಾರ್ಯಾದರ್ಶಿ ಪ್ರಭಾಕರ್, ಖಜಾಂಚಿ ಮಂಜುನಾಥ ಶೆಟ್ಟಿ, ನಿರ್ದೇಶಕರಾದ ಬಾಳೇಬೈಲು ರಾಘವೇಂದ್ರ, ಜಯಪ್ರಕಾಶ ಶೆಟ್ಟಿ, ಬಾಳೇಬೈಲು ರಾಘವೇಂದ್ರ ಶೆಟ್ಟಿ ಸೇರಿದಂತೆ ಹಲವು ಪ್ರಮುಖರು ಇದ್ದರು.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – [email protected]
WhatsApp Number – 7411700200