ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ತೀರ್ಥಹಳ್ಳಿ: ಆಗುಂಬೆ ಘಾಟಿಯಲ್ಲಿ (Agumbe Ghat) ವಾಹನ ಸಂಚಾರ ಪುನಾರಂಭವಾಗಿದೆ. ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರ ಮತ್ತು ಧರೆ ಕುಸಿತದಿಂದ ಬಿದ್ದಿದ್ದ ಮಣ್ಣನ್ನು ತೆರವು ಮಾಡಲಾಗಿದೆ.
ಶುಕ್ರವಾರ ಸಂಜೆ ಆಗುಂಬೆ ಘಾಟಿಯ ಆರನೇ ತಿರುವಿನಲ್ಲಿ ಧರೆ ಕುಸಿತ ಮತ್ತು ರಸ್ತೆಗೆ ಅಡ್ಡಲಾಗಿ ಮರ ಬಿದ್ದಿತ್ತು. ಇದರಿಂದಾಗಿ ವಾಹನ ಸಂಚಾರ ಸಂಪೂರ್ ಬಂದ್ ಆಗಿತ್ತು. ಕತ್ತಲಾದ್ದರಿಂದ ತೆರವು ಕಾರ್ಯಾಚರಣೆಗೆ ಅಡಚಣೆಯಾಗತ್ತು. ಇಂದು ಬೆಳಗ್ಗೆಯಿಂದ ಕಾರ್ಯಾಚರಣೆ ನಡೆಸಿ ಮರ ಮತ್ತು ಮಣ್ಣು ತೆರವು ಮಾಡಲಾಗಿದೆ.
ಮತ್ತೊಂದು ಮರ ಜಾರಿ ಬಂದಿತ್ತು
ಬೆಳಗ್ಗೆ ಮರ, ಮಣ್ಣು ತೆರವು ಮಾಡಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇದರ ಬೆನ್ನಿಗೆ ಮತ್ತೊಂದು ಮರ ಜಾರಿ ರಸ್ತೆಗೆ ಬಂದಿದೆ ಎಂದು ತಿಳಿದು ಬಂದಿದೆ. ಕೂಡಲೆ ಆರ ಮರವನ್ನು ತೆರವು ಮಾಡಲಾಗಿದೆ. ಸದ್ಯ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ಪುನಾರಂಭವಾಗಿದೆ ಎಂದು ಶಿವಮೊಗ್ಗ ಲೈವ್.ಕಾಂಗೆ ಮಾಹಿತಿ ಲಭ್ಯವಾಗಿದೆ.


ಇದನ್ನೂ ಓದಿ » ಶಿವಮೊಗ್ಗದಲ್ಲಿ ATNCC ವಿದ್ಯಾರ್ಥಿಗಳಿಂದ ಪಥ ಸಂಚಲನ, ಯಾರೆಲ್ಲ ಇದ್ದರು? ಏನೆಲ್ಲ ಮಾತನಾಡಿದರು?
Thirthahalli, Agumbe Ghat, road reopening, traffic update, landslide, road closure, local news, Karnataka
LATEST NEWS
- ಬೆಳಗ್ಗೆ ಲೇಔಟ್ಗೆ ಬಂದ ಲೆಕ್ಚರರ್ಗೆ ಕಾದಿತ್ತು ಆಘಾತ, ರಾತ್ರಿ 11.15ರ CCTV ದೃಶ್ಯ ಕಂಡು ಶಾಕ್

- ಶಿವಮೊಗ್ಗ TO ಬೆಂಗಳೂರು ಇನ್ನಷ್ಟು ವೇಗ, ದ್ವಿಪಥ ಯೋಜನೆಗೆ ಒತ್ತಾಯ

- ಜಮೀನಿಗೆ ನೀರು ಹರಿಸಲು ಹೋಗಿದ್ದ ವ್ಯಕ್ತಿಗೆ ಕಾದಿತ್ತು ಸಾವು, ಆಗಿದ್ದೇನು?

- ನಾಳೆಯಿಂದ SSLC ಪರೀಕ್ಷೆ, ಹೇಗಿದೆ ಸಿದ್ಧತೆ? ಯಾವ್ಯಾವ ತಾಲೂಕಿನಲ್ಲಿ ಎಷ್ಟು ಪರೀಕ್ಷಾ ಕೇಂದ್ರಗಳಿವೆ?

- ಮನೆಯ ಮೀಟರ್ ಬೋರ್ಡ್ ಮೇಲೆ ಕೀ ಇಡುವ ಅಭ್ಯಾಸ ಇದ್ಯಾ? ನಿದಿಗೆಯಲ್ಲಿ ದಾಖಲಾಯ್ತು ಕೇಸ್, ಯಾಕೆ?

About The Editor
ನಿತಿನ್ ಆರ್.ಕೈದೊಟ್ಲು















