ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 JANUARY 2024
SHIMOGA : ಎದೆ ನೋವಿನಿಂದ ಬಳಲುತ್ತಿದ್ದ ಶಿವಮೊಗ್ಗದ ಗಾಂಧಿ ಬಜಾರ್ ನಿವಾಸಿಯೊಬ್ಬರನ್ನು ಏರ್ ಆಂಬುಲೆನ್ಸ್ ಮೂಲಕ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇದೆ ಮೊದಲ ಬಾರಿ ಶಿವಮೊಗ್ಗ ವಿಮಾನ ನಿಲ್ದಾಣದವನ್ನು ಏರ್ ಆಂಬುಲೆನ್ಸ್‌ಗಾಗಿ ಬಳಸಿಕೊಳ್ಳಲಾಗಿದೆ.
ಚೇತನ್ ಎಂಬುವವರು ಜ.8ರಂದು ನೆಹರು ಕ್ರೀಡಾಂಗಣದಲ್ಲಿ ಜಾಗಿಂಗ್ ವೇಳೆ ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಪಕ್ಕದ ಮೆಟ್ರೋ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಅವರನ್ನು ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯಬೇಕಾಗಿತ್ತು. ಈ ಹಿನ್ನೆಲೆ ಏರ್ ಆಂಬುಲೆನ್ಸ್ ಬಳಸಿಕೊಳ್ಳಲಾಗಿದೆ.
ಚೆನ್ನೈನಿಂದ ಏರ್ ಆಂಬುಲೆನ್ಸ್
ಚೇತನ್ ಅವರನ್ನು ಕರೆದೊಯ್ಯಲು ಚೆನ್ನೈನಲ್ಲಿರುವ ಏರ್ ಆಂಬುಲೆನ್ಸ್‌ಗೆ ಸಂಪರ್ಕಿಸಲಾಗಿತ್ತು. ಬುಧವಾರ ಸಂಜೆ ವೇಳಗೆ ಏರ್ ಆಂಬುಲೆನ್ಸ್ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಇಂದು ಬೆಳಗ್ಗೆ ವಿಸಿಬಲಿಟಿ ಸಮಸ್ಯೆಯಿಂದಾಗಿ ಏರ್ ಆಂಬುಲೆನ್ಸ್ ಟೇಕ್ ಆಫ್ ಆಗಲಿಲ್ಲ. ಮಧ್ಯಾಹ್ನ 1.05ಕ್ಕೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದೆ. ಮಧ್ಯಾಹ್ನ 1.40ಕ್ಕೆ ಮಂಗಳೂರು ವಿಮಾನ ನಿಲ್ದಾಣ ತಲುಪಿದೆ. ವಿಶೇಷ ಆಂಬುಲೆನ್ಸ್ ಮೂಲಕ ಚೇತನ್ ಅವರನ್ನು ಕರೆದೊಯ್ದು ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಅವರು ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮೊದಲ ಬಾರಿ ಏರ್ ಆಂಬುಲೆನ್ಸ್
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನಯಾನ ಸೇವೆ ಆರಂಭವಾದಾಗಿನಿಂದ ನಾಗರಿಕ ವಿಮಾನ, ಖಾಸಗಿ ವಿಮಾನ ಮತ್ತು ಏರ್ ಫೋರ್ಸ್ ವಿಮಾನಗಳು ಲ್ಯಾಂಡ್ ಆಗಿದ್ದವು. ಇದೆ ಮೊದಲ ಬಾರಿಗೆ ಏರ್ ಆಂಬುಲೆನ್ಸ್ ಶಿವಮೊಗ್ಗದಿಂದ ಕಾರ್ಯಾಚರಿಸಿದೆ.
ಇದನ್ನೂ ಓದಿ – ಪಲ್ಸರ್ ಬೈಕ್ ಗಿಫ್ಟ್ ಕೊಟ್ಟು, ಸರ್ಕಾರಿ ಶಾಲೆ ಶಿಕ್ಷಕನಿಗೆ ಬೀಳ್ಕೊಡುಗೆ ನೀಡಿದ ಗ್ರಾಮಸ್ಥರು
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422