ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗದ ಲೈವ್.ಕಾಂ | SHIMOGA NEWS | 4 ಜನವರಿ 2022
ಶೌಚಾಲಯದಲ್ಲಿ ನಾಗರ ಹಾವು ಕಾಣಿಸಿಕೊಂಡಿದ್ದು, ಮನೆಯಲ್ಲಿದ್ದವರನ್ನು ಬೆಚ್ಚಿ ಬೀಳಿಸಿದೆ. ವಿಚಾರ ತಿಳಿದು ಕೂಡಲೆ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಕಿರಣ್ ಅವರು ಹಾವನ್ನು ಹಿಡಿದು, ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಈ ಸಂದರ್ಭ ಮನೆಯವರು ಹಾವಿಗೆ ಪೂಜೆ ಮಾಡಿ, ಮಂಗಳಾರತಿ ಬೆಳಗಿದರು.
ಶಿವಮೊಗ್ಗದ ಶಿವಪ್ಪನಾಯಕ ಬಡಾವಣೆಯ ಮನೆಯೊಂದರ ಶೌಚಾಲಯದಲ್ಲಿ ಹಾವು ಕಾಣಿಸಿಕೊಂಡಿದೆ. ಟಾಯ್ಲೆಟ್ ಪಿಟ್’ನಲ್ಲಿ ಹಾವು ಇರುವುದು ಗೊತ್ತಾಗುತ್ತಿದ್ದಂತೆ ಮನೆಯವರು ಆತಂಕಕ್ಕೀಡಾಗಿದ್ದಾರೆ.
ಹಾವು ರಕ್ಷಿಸಿದ ಸ್ನೇಕ್ ಕಿರಣ್
ಹಾವು ಇರುವ ವಿಚಾರ ತಿಳಿದು ಉರಗ ರಕ್ಷಕ ಸ್ನೇಕ್ ಕಿರಣ್ ಅವರು ಸ್ಥಳಕ್ಕೆ ಭೇಟಿ ನೀಡಿದರು. ಟಾಯ್ಲೆಟ್ ಪಿಟ್’ನಲ್ಲಿದ್ದ ಹಾವನ್ನು ರಕ್ಷಣೆ ಮಾಡಿದರು. ಅಲ್ಲದೆ ಮನೆಯವರು ಮತ್ತು ಸುತ್ತಮುತ್ತಲ ನಿವಾಸಿಗಳಿಗೆ ಹಾವಿನ ಕುರಿತು ಜಾಗೃತಿ ಮೂಡಿಸಿದರು.
ಹಾವಿಗೆ ಮಂಗಳಾರತಿ ಬೆಳಗಿದರು
ಇನ್ನು, ಸ್ನೇಕ್ ಕಿರಣ್ ಅವರು ನಾಗರ ಹಾವು ಹಿಡಿದು ಮನೆಯಿಂದ ಹೊರಗೆ ತರುತ್ತಿದ್ದಂತೆ, ಮನೆ ಒಡತಿ ಶಬರಿ ಅವರು ಪೂಜೆ ಸಲ್ಲಿಸಿದರು. ಹಾವಿಗೆ ಮಂಗಳಾರತಿ ಬೆಳಗಿದರು. ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಸ್ನೇಕ್ ಕಿರಣ್ ಅವರು ಹಾವನ್ನು ಕಾಡಿಗೆ ಬಿಟ್ಟರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422