ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 1 MARCH 2023
HOSANAGARA : ನೀರಿನ ಬಕೆಟ್ ಗೆ ಬಿದ್ದು ಒಂದು ವರ್ಷದ ಗಂಡು ಮಗು (Infant) ಅಸುನೀಗಿದೆ. ಆಟವಾಡುತ್ತಿದ್ದ ಮಗು ಅರ್ಧ ನೀರು ಇದ್ದ ಬಕೆಟ್ ಗೆ ತಲೆಕೆಳಗಾಗಿ ಬಿದ್ದು ಸಾವನ್ನಪ್ಪಿದೆ.
ಹೊಸನಗರ ತಾಲೂಕು ಸೊನಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೊಪ್ಪದಲ್ಲಿ ಘಟನೆ ಸಂಭವಿಸಿದೆ. ಇಲ್ಲಿನ ಹರೀಶ್ ಮತ್ತು ವೀಣಾ ದಂಪತಿಯ ಮಗ ಸಂಕೇತ್ ಮೃತ ಹಸುಗೂಸು (Infant). ಮನೆಯವರೆಲ್ಲ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಆಟವಾಡುತ್ತಿದ್ದ ಮಗು ಬಕೆಟ್ ಗೆ ಬಿದ್ದು ಮೃತಪಟ್ಟಿದೆ.
ಇದನ್ನೂ ಓದಿ – ಕಾಲೇಜು ಲೆಕ್ಚರರ್ಗೆ ರಸ್ತೆಯಲ್ಲಿ ಚಾಕು ತೋರಿಸಿ ಬೆದರಿಕೆ, ದರೋಡೆ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422